IAS Office Salary: ಒಬ್ಬ IAS ಅಧಿಕಾರಿಯ ತಿಂಗಳ ಸಂಬಳ ಎಷ್ಟು ಗೊತ್ತಾ…? ದೇಶದ ಪ್ರತಿಷ್ಠಿತ ಹುದ್ದೆ.

IAS ಅಧಿಕಾರಿಗಳ ಒಂದು ತಿಂಗಳ ಸಂಬಳ ಎಷ್ಟು...? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

IAS Office Monthly Salary: Salaryಸಾಕಷ್ಟು ಜನರು ಡಾಕ್ಟರ್ ಎಂಜಿನಿಯರ್, ಪೊಲೀಸ್ ಹೀಗೆ ಅನೇಕ ಉತ್ತಮ ಸ್ಥಾನದ ಉದ್ಯೋಗವು ಪಡೆಯಬೇಕೆನ್ನುವ ಗುರಿಯನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ದೇಶಸೇವೆ ಮಾಡಲು ಬಯಸುತ್ತಾರೆ. ಹೀಗಾಗಿ ಪೊಲೀಸ್ ಅಧಿಕಾರಿಯಾಗಿ ದೇಶದಲ್ಲಿ ಅಕ್ರಮವನ್ನು ತಡೆಯುವ ಉದ್ದೇಶ ಹೆಚ್ಚಿನ ಜನರಲ್ಲಿರುತ್ತದೆ. ಇನ್ನು ಪೊಲೀಸ್ ಅಧಿಕಾರಿಯಾಗುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ಎಲ್ಲ ರೀತಿಯ ಪರೀಕ್ಷೆಯಲ್ಲಿ ಯಶಸ್ಸು ಕಂಡಾಗ ಮಾತ್ರ IAS ಹುದ್ದೆಗಳ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಐಎಎಸ್ ಅಧಿಕಾರಿಯಾಗಲು ಎಷ್ಟು ಕಷ್ಟಪಡಬೇಕೋ ಅದೇ ರೀತಿ IAS ಅಧಿಕಾರಿಗಳಿಗೆ ನೀಡಲಾಗುವ ಮಾಸಿಕ ಸಂಬಳ ಕೂಡ ಭರ್ಜರಿಯಾಗಿಯೇ ಇರುತ್ತದೆ. ಇದೀಗ ನಾವು ಈ ಲೇಖನದಲ್ಲಿ IAS ಅಧಿಕಾರಿಯು ಮಾಸಿಕ ಎಷ್ಟು ವೇತನ ಪಡೆಯುತ್ತಾರೆ ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

IAS Officer Salary In India
Image Credit: Geeksforgeeks

ಒಬ್ಬ IAS ಅಧಿಕಾರಿಯ ತಿಂಗಳ ಸಂಬಳ ಎಷ್ಟು ಗೊತ್ತಾ…?
IAS ಅಧಿಕಾರಿ ವೇತನವನ್ನು ಅವರ ಅಧಿಕಾರಾವಧಿ ಮತ್ತು ಪ್ರಮೋಷನ್ ಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. 7ನೇ ವೇತನ ಆಯೋಗವು ನಾಗರಿಕ ಸೇವೆಗಳ ವೇತನ ವ್ಯವಸ್ಥೆಯನ್ನು ಪರಿಷ್ಕರಿಸಿದ್ದು, ಐಎಎಸ್, ಅಧಿಕಾರಿಗಳು ಸೇರಿದಂತೆ ವೇತನ ಶ್ರೇಣಿ ಮತ್ತು ವೇತನ ಮಟ್ಟದಲ್ಲಿ ಹಲವು ಉನ್ನತೀಕರಣಗಳನ್ನು ತಂದಿದೆ. ಮೂಲ ವೇತನದ ಜೊತೆಗೆ ಅಧಿಕಾರಿಗಳಿಗೆ ಪ್ರಯಾಣ ಭತ್ಯೆ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮುಂತಾದ ಹೆಚ್ಚುವರಿ ಭತ್ಯೆಗಳು ಸೇರಿವೆ.

ದೇಶದ ಪ್ರತಿಷ್ಠಿತ ಹುದ್ದೆಯ ಬಗ್ಗೆ ವಿವರ ಇಲ್ಲಿದೆ
ಐಎಎಸ್ ಅಧಿಕಾರಿಗಳಿಗೆ ಮೂಲ ವೇತನವಾಗಿ ಮಾಸಿಕ 56,100 ರೂ. ನೀಡಲಾಗುತ್ತದೆ. ಇದು ಅವರ ಅನುಭವ ಮತ್ತು ಸ್ಥಾನವನ್ನು ಅವಲಂಬಿಸಿರುತ್ತದೆ. ಅಧಿಕಾರಿಗಳು ತಮ್ಮ ಶ್ರೇಣಿಯಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ಅವರ ಮೂಲ ವೇತನವು ಹೆಚ್ಚಾಗುತ್ತದೆ ಮತ್ತು ಅವರ ಅನುಭವ ಮತ್ತು ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ. ಅತ್ಯುನ್ನತ ದರ್ಜೆಯ IAS ಅಧಿಕಾರಿಯು ಭಾರತದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿದ್ದು, ಮಾಸಿಕ 2,50,000 ರೂ. ವೇತನ ಪಡೆಯುತ್ತಾರೆ. IAS ವೇತನವನ್ನು ವಿವಿಧ ವೇತನ ಶ್ರೇಣಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಐಎಎಸ್ ಅಧಿಕಾರಿಗಳ ವೇತನವನ್ನು ಅವರ ವೃತ್ತಿ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

IAS Officer Monthly Salary
Image Credit: Zee News

Join Nadunudi News WhatsApp Group

Join Nadunudi News WhatsApp Group