Devon Thomas: T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಮ್ಯಾಚ್ ಫಿಕ್ಸಿಂಗ್ ನಿಂದ ಸ್ಟಾರ್ ಆಟಗಾರ 5 ವರ್ಷ ನಿಷೇಧ.

T20 ಆರಂಭಕ್ಕೂ ಮುನ್ನ ಈ ಸ್ಟಾರ್ ಆಟಗಾರ ನಿಷೇದಕ್ಕೆ ಒಳಗಾಗಿದ್ದಾರೆ.

ICC Bans Devon Thomas For 5 Years: IPL 2024 ಮುಗಿದ ಬೆನ್ನಲ್ಲೇ ಜೂನ್ ನಿಂದ ICC World Cup 2024 ಆರಂಭವಾಗುತ್ತದೆ. T20 ಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎನ್ನಬಹುದು. ಇನ್ನು T20 ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಟಗಾರರ ಆಯ್ಕೆ ಕೂಡ ನಡೆದಿದೆ. ICC Team India ದಲ್ಲಿ ಆಡುವ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಿದೆ.

USA ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುವ ICC T20 ಪಂದ್ಯಾವಳಿಯು ಜೂನ್ 2 ರಂದು ಪ್ರಾರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತವು ಜೂನ್ 5 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ. ಇನ್ ಫಾರ್ಮ್ ವಿರಾಟ್ ಕೊಹ್ಲಿ ಕೂಡ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೀಗ T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಮ್ಯಾಚ್ ಫಿಕ್ಸಿಂಗ್ ನಿಂದ ಈ ಸ್ಟಾರ್ ಆಟಗಾರ ಹೊರಬಿದ್ದಿರುವ ಬಗ್ಗೆ ಮಾಹಿತಿ ಲಭಿಸಿದೆ.

ICC Bans Devon Thomas For 5 Years
Image Credit: Caribbeannationalweekly

T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಮ್ಯಾಚ್ ಫಿಕ್ಸಿಂಗ್ ನಿಂದ ಸ್ಟಾರ್ ಆಟಗಾರ 5 ವರ್ಷ ನಿಷೇಧ
ಇನ್ನು 34 ವರ್ಷದ ಬ್ಯಾಟ್ಸ್‌ ಮನ್ ಡೆವೊನ್ ಥೋಮನ್ 2009 ರಲ್ಲಿ ವೆಸ್ಟ್ ಇಂಡೀಸ್‌ ಗೆ ಪಾದಾರ್ಪಣೆ ಮಾಡಿದರು ಮತ್ತು 2022 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 2011 ರ ವಿಶ್ವಕಪ್‌ ನಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಡೆವೊನ್ ಒಂದು ಟೆಸ್ಟ್, 21 ODI ಮತ್ತು 12 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಆದರೆ ಈ ಬಾರಿ T20 ಆರಂಭಕ್ಕೂ ಮುನ್ನ ಈ ಸ್ಟಾರ್ ಆಟಗಾರ ನಿಷೇದಕ್ಕೆ ಒಳಗಾಗಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ ಮನ್ Devon Thomas ಅವರನ್ನು ಐಸಿಸಿ ಐದು ವರ್ಷಗಳ ಕಾಲ ನಿಷೇಧಿಸಿದೆ. ಶ್ರೀಲಂಕಾ ಕ್ರಿಕೆಟ್, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ ನ ಭ್ರಷ್ಟಾಚಾರ ವಿರೋಧಿ ಕೋಡ್‌ ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಥಾಮಸ್ ತಪ್ಪಿಸಿಕೊಂಡಿದ್ದಾರೆ ಎಂದು ದುಬೈ ಮೂಲದ ICC ಹೇಳಿದೆ.

ICC Bans Devon Thomas
Image Credit: News24

ICC ಅಧಿಕೃತ ಘೋಷಣೆ
ಈ ಉಲ್ಲಂಘನೆಗಳು ಆಟದ ಫಲಿತಾಂಶವನ್ನು ಸರಿಪಡಿಸಲು ಪ್ರಯತ್ನಿಸುವುದಕ್ಕೆ ಮತ್ತು ಸಾಕ್ಷ್ಯವನ್ನು ಮರೆಮಾಚುವ, ತಿದ್ದುವ ಅಥವಾ ನಾಶಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸುವುದಕ್ಕೆ ಸಂಬಂಧಿಸಿದೆ ಎಂದು ICC ಹೇಳಿಕೊಂಡಿದೆ. ಐಸಿಸಿ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್, “ಈ ನಿಷೇಧವು ಸೂಕ್ತವಾಗಿದೆ ಮತ್ತು ನಮ್ಮ ಆಟವನ್ನು ಭ್ರಷ್ಟಗೊಳಿಸುವ ಪ್ರಯತ್ನಗಳನ್ನು ಕಠಿಣವಾಗಿ ಎದುರಿಸಲಾಗುವುದು ಎಂದು ಆಟಗಾರರು ಮತ್ತು ಭ್ರಷ್ಟರಿಗೆ ಬಲವಾದ ಸಂದೇಶವನ್ನು ಕಳುಹಿಸುತ್ತದೆ” ಎಂದಿದ್ದಾರೆ.

Join Nadunudi News WhatsApp Group

Devon Thomas Latest News
Image Credit: Sheppnews

Join Nadunudi News WhatsApp Group