ICICI Bank: ICICI ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಬೇಸರದ ಸುದ್ದಿ, ಸೋರಿಕೆಯಾಗಿದೆ ನಿಮ್ಮ ಈ ಎಲ್ಲಾ ಮಾಹಿತಿ.

ICICI Bank Latest Update: ದೇಶದಲ್ಲಿ ವಿವಿರ ಬ್ಯಾಂಕ್ ಗಳಲ್ಲಿ ಗ್ರಾಹಕರು ತಮ್ಮ ಖಾತೆಯನ್ನು ಹೊಂದಿದ್ದಾರೆ. ಬ್ಯಾಂಕ್ ಖಾತೆದಾರರು ಆಗಾಗ ಬ್ಯಾಂಕ್ ನ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಬ್ಯಾಂಕ್ ವಹಿವಾಟಿನ ಬಗ್ಗೆ ಎಲ್ಲ ರೀತಿಯಲ್ಲೂ ಪರಿಶೀಲಿಸುತ್ತಾ ಇರುವುದು ಅಗತ್ಯ.

ಕಾರಣ ಅದೆಷ್ಟೋ ಬ್ಯಾಂಕ್ ಗಳು ಅನಿರೀಕ್ಷತ ಸಮಸ್ಯೆಯನ್ನು ಎದುರಿಸುತ್ತವೆ. ಸದ್ಯ ದೇಶದ ಜನಪ್ರಿಯ ಬ್ಯಾಂಕ್ ಆಗಿರುವ ICICI ಬ್ಯಾಂಕ್ ಇದೀಗ ಹೊಸ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದೆ. ಸದ್ಯ ICICI ಬ್ಯಾಂಕ್ ಗ್ರಾಹಕರು ಈ ಸಮಸ್ಯೆಯಿಂದ ಹೊರಬರಲು ದಾರಿ ಹುಡುಕುವಂತಾಗಿದೆ.

ICICI Bank New Updates
Image Credit: Cnbctv18

ICICI ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಬೇಸರದ ಸುದ್ದಿ
ದೇಶದ ಪ್ರಮುಖ ಬ್ಯಾಂಕ್‌ ಗಳಲ್ಲಿ ಒಂದಾದ ICICI ಬ್ಯಾಂಕ್ ತನ್ನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದೆ. ಅಷ್ಟೇ ಅಲ್ಲ, ಸುಮಾರು 17,000 ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಬಹಿರಂಗವಾಗಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದಾಗಿ ಐಸಿಐಸಿಐ ಬ್ಯಾಂಕ್ ಲಕ್ಷ ಲಕ್ಷ ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋರಿಕೆಯಾಗಿದೆ ನಿಮ್ಮ ಈ ಎಲ್ಲಾ ಮಾಹಿತಿ
ICICI ಬ್ಯಾಂಕ್‌ ನ I Mobile Pay ಎಂಬ ಅಪ್ಲಿಕೇಶನ್‌ ನಲ್ಲಿ (App) ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಸಾವಿರಾರು ಗ್ರಾಹಕರ ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಟೆಕ್ನೋಫಿನೋ ಸಂಸ್ಥಾಪಕ ಸುಮಂತ ಮಂಡಲ್ ಅವರು ಎಕ್ಸ್ ಸೋಶಿಯಲ್ ಮೀಡಿಯಾದಲ್ಲಿ ತಾಂತ್ರಿಕ ದೋಷ ಮತ್ತು ಮಾಹಿತಿ ಸೋರಿಕೆಯ ಬಗ್ಗೆ ದೂರು ನೀಡಿದ್ದು, ಆರ್‌ಬಿಐ ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ICICI Bank In India
Image Credit: Pune.news/

ಸಾವಿರಾರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿರ್ದಿಷ್ಟವಾಗಿ, i Mobile Pay ಅಪ್ಲಿಕೇಶನ್‌ ನಲ್ಲಿ ದೊಡ್ಡ ದೋಷ ಕಾಣಿಸಿಕೊಂಡಿದೆ. ಕ್ರೆಡಿಟ್ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, CVV ಸೇರಿದಂತೆ ಎಲ್ಲಾ ಮಾಹಿತಿಯು ಅಪ್ಲಿಕೇಶನ್‌ ನಲ್ಲಿ ಗೋಚರಿಸುತ್ತದೆ. ಅಂತರರಾಷ್ಟ್ರೀಯ ವಹಿವಾಟು ಸೆಟ್ಟಿಂಗ್‌ ಗಳು ಸಹ ಆಗಿರಬಹುದು ಇದರಿಂದ ಬೇರೆಯವರ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಅಂತಾರಾಷ್ಟ್ರೀಯ ವಹಿವಾಟಿಗೆ ದುರುಪಯೋಗಪಡಿಸಿಕೊಳ್ಳಬಹುದು ಎಂದು ದೂರಿದ್ದಾರೆ.

Join Nadunudi News WhatsApp Group

ICICI ಬ್ಯಾಂಕ್ ಸ್ಪಷ್ಟನೆ
ತಾಂತ್ರಿಕ ದೋಷವೋ ಅಥವಾ ಯಾರೋ ಹ್ಯಾಕ್ ಮಾಡಿದ್ದಾರೋ ಎಂಬ ಅನುಮಾನ ಮೂಡಿರುವಾಗಲೇ ಐಸಿಐಸಿಐ ಬ್ಯಾಂಕ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹೊಸದಾಗಿ ನೀಡಿರುವ 17 ಸಾವಿರ ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ಬಯಲಾಗಿದೆ. ಇದು ತಾಂತ್ರಿಕ ದೋಷದಿಂದ ಉಂಟಾಗಿರಬಹುದು. ಶೇ. 0.1 ರಷ್ಟು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಪ್ರಭಾವಿತರಾಗಿದ್ದಾರೆ. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಎಲ್ಲಾ ಕಾರ್ಡ್‌ ಗಳನ್ನು ತಕ್ಷಣವೇ ಬ್ಲಾಕ್ ಮಾಡಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರವೇ ಇತ್ಯರ್ಥವಾಗಲಿದೆ. ಯಾರಾದರೂ ಹಣ ಕಳೆದುಕೊಂಡಿದ್ದರೆ ಕಸ್ಟಮರ್ ಕೇರ್ ಗೆ ಕರೆ ಮಾಡಿ ಎಂದು ಬ್ಯಾಂಕ್ ಮನವಿ ಮಾಡಿದೆ.

ICICI Bank Latest Update
Image Credit: Thehindubusinessline

Join Nadunudi News WhatsApp Group