Time Deposit: ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಹಣ ಇಟ್ಟರೆ 90 ಸಾವಿರ ಬಡ್ಡಿ, ಇಂದೇ ಹಣ ಇಟ್ಟು ಬಡ್ಡಿ ಪಡೆದುಕೊಳ್ಳಿ.

2 ಲಕ್ಷಕ್ಕೆ 90 ಸಾವಿರ ಬಡ್ಡಿ ಪಡೆಯುವ ಪೋಸ್ಟ್ ಆಫೀಸ್ ನ ಹೊಸ ಯೋಜನೆ ಬಗ್ಗೆ ಮಾಹಿತಿ ತಿಳಿಯಿರಿ.

Post Office Time Deposit: ಪೋಸ್ಟ್ ಆಫೀಸ್ (Post Office) ನಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ಜನಸಾಮಾನ್ಯರಿಗಾಗಿ ಕಡಿಮೆ ಹೂಡಿಕೆಯ ವಿವಿಧ ಯೋಜನೆಗಳನ್ನು ಪೋಸ್ಟ್ ಆಫೀಸ್ ಜನರಿಗಾಗಿ ನೀಡುತ್ತಿದೆ. ಅಂಚೆ ಇಲಾಖೆಯು ಹೊಸ ಹೊಸ ಠೇವಣಿ ಯೋಜನೆಯನ್ನು ಜಾರಿಗೊಳಿಸುತ್ತದೆ. ಇನ್ನು ಮಧ್ಯಮ ವರ್ಗದ ಜನರಿಗೆ ಪೋಸ್ಟ್ ಆಫೀಸ್ ನಲ್ಲಿನ ಹೂಡಿಕೆಯು ಉತ್ತಮವಾಗಿರುತ್ತದೆ.

ಪೋಸ್ಟ್ ಆಫೀಸ್ ನ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರು ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿದ್ದು ಹೆಚ್ಚಿನ ರಿಟರ್ನ್ ಪಡೆಯಬಹುದಾಗಿದೆ. ಇದೀಗ ಪೋಸ್ಟ್ ಆಫೀಸ್ ಸ್ಥಿರ ಆದಾಯದ ಹೂಡಿಕೆಗಾಗಿ ಟೈಮ್ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಠೇವಣಿದಾದರೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. 

If you deposit 2 lakhs in post office, you get 90,000 interest
Image Credit: Jaipuronline

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಲ್ಲಿ ಠೇವಣಿದಾರರು 7 .5 ಪ್ರತಿಶತದವರೆಗೆ ಬಡ್ಡಿಯನ್ನು ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆಯನ್ನು ನಾಲ್ಕು ವಿಭಿನ್ನ ಅವಧಿಗಳಿಗೆ ತೆರೆಯಬಹುದಾಗಿದೆ. ಬಡ್ಡಿ ದರ 1 ವರ್ಷಕ್ಕೆ 6.8%, 2 ವರ್ಷಕ್ಕೆ 6.9%, 3 ವರ್ಷಕ್ಕೆ 7% ಮತ್ತು 5 ವರ್ಷಕ್ಕೆ 7.5%. ಬಡ್ಡಿಯನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ ಮತ್ತು ತ್ರೈಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ. ಕನಿಷ್ಠ 1000 ರೂ. ಹೂಡಿಕೆಯನ್ನು ಮಾಡಬಹುದಾಗಿದೆ.

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ಹಣ ಇಟ್ಟರೆ 90 ಸಾವಿರ ಬಡ್ಡಿ
ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಲ್ಲಿ ನೀವು 2 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಸುಮಾರು 90 ಸಾವಿರ ಬಡ್ಡಿಯನ್ನು ಪಡೆಯಬಹುದಾಗಿದೆ.

post office time deposit scheme news latest
Image Credit: Paisabazaar

ಇನ್ನು ಮೆಚ್ಯುರಿಟಿ ಅವಧಿಯ ನಂತರ ನಿಮ್ಮ ಹೂಡಿಕೆಯ 2 ಲಕ್ಷ ಹಣವನ್ನು ಹಿಂತಿರುಗಿಸಲಾಗುತ್ತದೆ. ಇನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆಯನ್ನು 5 ವರ್ಷದವರೆಗೆ ಚಾಲ್ತಿಯಲ್ಲಿಟ್ಟರೆ ಅದರ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಹೂಡಿಕೆಯ ಮೊತ್ತದ ಮೇಲೆ ಸೆಕ್ಷನ್ 80C ಅಡಿಯಲ್ಲಿ ಕಡಿತವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group