IMPS Rule: ಆನ್ಲೈನ್ ಮೂಲಕ ಹಣ ಕಳುಹಿಸುವವರಿಗೆ ಇಂದಿನಿಂದ ಹೊಸ ರೂಲ್ಸ್, ನಿಯಮ ಬದಲಾವಣೆ.

ಇಂದಿನಿಂದ IMPS ಹಣ ವರ್ಗಾವಣೆಯ ನಿಯಮದಲ್ಲಿ ಬದಲಾವಣೆ.

IMPS New Rule From February 1st: ದೇಶದಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಹಣ ಪಾವತಿ ಮಾಡಲು ವಿವಿಧ ರೀತಿಯ ವಿಧಾನವನ್ನು ಬಳಸುತ್ತಾರೆ. UPI, NEFT, IMPS ಸೇರಿದಂತೆ ಇನ್ನಿತರ ವಿಧಾನದ ಮೂಲಕ ಆನ್ಲೈನ್ ಪಾವತಿ ನಡೆಯುತ್ತಿದೆ.

ಸದ್ಯ ಸರ್ಕಾರ ಹಣದ ವರ್ಗಾವಣೆಯ ನಿಯಮದಲ್ಲಿ ಬದಲಾವಣೆ ತರಲು ಯೋಜನೆ ಹೂಡಿದೆ. ಇದ್ದಕಾಗಿಯೇ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸದ್ಯ ದೊಡ್ಡ ಮೊತ್ತದ ಹಣದ ಪಾವತಿಗೆ ಬಳಸಲಾಗುತ್ತಿದ್ದ IMPS ಅಥವಾ Immediate Payment Service ನಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಈ ಮೂಲಕ ಆನ್ಲೈನ್ ನಲ್ಲಿ ಹಣ ಪಾವತಿಸುವವರಿಗೆ ಹೊಸ ನಿಯಮ ಜಾರಿಯಾಗಲಿದೆ.

IMPS Rules change
Image Credit: Hindustantimes

ಆನ್ಲೈನ್ ಮೂಲಕ ಹಣ ಕಳುಹಿಸುವವರಿಗೆ ಇಂದಿನಿಂದ ಹೊಸ ರೂಲ್ಸ್
ನೀವು NIFT, RTGS ಮೂಲಕ ಹಣ ಕಳುಹಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ IMPS ನಲ್ಲಿ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಬಹುದು. ಈಗ National Payments Corporation ಐಎಂಪಿಎಸ್ ವ್ಯವಸ್ಥೆಯನ್ನು ಸರಳಗೊಳಿಸಿದೆ. NEFT ಮತ್ತು IMPS ನಲ್ಲಿ ಬೆನಿಫಿಶಿಯರಿ ಸೇರಿಸಿಕೊಳ್ಳಬೇಕು. ಯಾರಿಗೆ ಹಣ ಕಳುಹಿಸಬೇಕೋ ಅವರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು.

IMPS ಹಣ ವರ್ಗಾವಣೆಯ ನಿಯಮದಲ್ಲಿ ಬದಲಾವಣೆ
ಹೊಸ ನಿಯಮದ ಪ್ರಕಾರ, ಇನ್ನುಮುಂದೆ IMPS ಮೂಲಕ ವಹಿವಾಟು ಮಾಡಲು ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ.

IMPS New Rule From February 1st
Image Credit: Seepositive

ಬೆನಿಫಿಶಿಯರಿ ಸೇರಿಸುವ ಅಗತ್ಯವೂ ಇಲ್ಲ. ಪಾವತಿದಾರರ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರನ್ನು ಮಾತ್ರ ನಮೂದಿಸಿದರೆ ಸಾಕಾಗುತ್ತದೆ. ಈ ಮೂಲಕ 5 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು. ಈ ಹೊಸ ನಿಯಮ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಇಂದಿಂದ ನೀವು ಯಾವುದೇ ಫಲಾನುಭವಿಯನ್ನು ಸೇರಿಸದೆಯೇ IMPS ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ರೂ. 5 ಲಕ್ಷದವರೆಗೆ ಕಳುಹಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group