Tax Save: ಇನ್ಮುಂದೆ 10 ಲಕ್ಷದ ಈ ಹಣಕ್ಕೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ, ಹೊಸ ತೆರಿಗೆ ನಿಯಮ.

ಇನ್ಮುಂದೆ 10 ಲಕ್ಷದ ತನಕದ ಈ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ

Tax Saving Tip: ಆದಾಯ ತೆರಿಗೆ (Income Tax) ಪಾವತಿಸುವ ಜನರು ತೆರಿಗೆ ಉಳಿತಾಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಯಾವ ರೀತಿಯ ಆದಾಯವನ್ನು ಪಡೆರೆ ತೆರಿಯನ್ನು ಉಳಿಸಬಹುದು ಎನ್ನುವ ಬಗ್ಗೆ ಹೆಚ್ಚು ಯೋಚಿಸುತ್ತಾರೆ. Tax Slab ಪ್ರಕಾರ ಹೆಚ್ಚಿನ ಆದಾಯಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್ನು 2.5 ಲಕ್ಷ ರೂ. ಗಿಂತ ಕಡಿಮೆ ಆದಾಯಕ್ಕೆ ಯಾವುದೇ ತೆರಿಗೆಯನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ಇದಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದರೆ ತೆರಿಗೆಯನ್ನು ಕಟ್ಟಬೇಕಾಗುತ್ತದೆ.

Tax Saving Tips
Image Credit: Futuregenerali

10 ಲಕ್ಷ ಆದಾಯಕ್ಕೆ ನೀವು ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು
ಇನ್ನು ನಿಮಗೆ ತಿಳಿದಿರುವ ಹಾಗೆ ವಾರ್ಷಿಕ ಆದಾಯ 10 ಲಕ್ಷವಿದ್ದರೆ ನೀವು 30 % ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನಿಮಗೆ ಗೊತ್ತೇ..? 10 ಲಕ್ಷದ ಆದಾಯಕ್ಕೆ ನೀವು ಒಂದು ರೂ. ತೆರಿಗೆಯನ್ನು ಪಾವತಿಸದೇ ಇರಲು ಕೂಡ ಒಂದು ಮಾರ್ಗವಿದೆ. ನೀವು ಹೂಡಿಕೆ ಮಾಡುವ ಮೂಲಕ ಮತ್ತು ವಿನಾಯಿತಿಯನ್ನು ಪಡೆಯುವ ಮೂಲಕ ತೆರಿಗೆಯನ್ನು ಉಳಿಸಬಹುದು. ಅದು ಹೇಗೆ ಎನ್ನುವುದರ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ಹೇಳಲಿದ್ದೇವೆ.

ಇನ್ಮುಂದೆ 10 ಲಕ್ಷದ ಈ ಹಣಕ್ಕೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ
•Sanderd Deduction ಆಗಿ ರೂ. 50 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ 10 ಲಕ್ಷ ರೂ.ಗೆ ತೆರಿಗೆ ವಿಧಿಸಲಾಗುವುದು.

•PPF, EPF, ELSS, NSC ಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ತೆರಿಗೆಯನ್ನು ಉಳಿಸಬಹುದು. ಈಗ 10 ಲಕ್ಷದಿಂದ 1.5 ಲಕ್ಷ ಕಳೆದರೆ 8.5 ಲಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತದೆ.

•ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ನೀವು ಪ್ರತ್ಯೇಕವಾಗಿ ವಾರ್ಷಿಕವಾಗಿ ರೂ. 50,000 ವರೆಗೆ ಹೂಡಿಕೆ ಮಾಡಿದರೆ, ನಂತರ ಸೆಕ್ಷನ್ 80CCD (1B) ಅಡಿಯಲ್ಲಿ ಹೆಚ್ಚುವರಿ ರೂ. 50 ಸಾವಿರ ಆದಾಯ ತೆರಿಗೆಯನ್ನು ಉಳಿಸಲು ನಿಮಗೆ ಸಹಾಯವಾಗುತ್ತದೆ. ಈಗ 50 ಸಾವಿರ ಹೆಚ್ಚು ಕಳೆದರೆ 8 ಲಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತದೆ.

Join Nadunudi News WhatsApp Group

Income Tax Latest Update 2024
Image Credit: Business Today

•ಗೃಹ ಸಾಲವನ್ನು ಸಹ ತೆಗೆದುಕೊಂಡರೆ, ಆದಾಯ ತೆರಿಗೆಯ ಸೆಕ್ಷನ್ 24B ಅಡಿಯಲ್ಲಿ ಅದರ ಬಡ್ಡಿಯ ಮೇಲೆ ರೂ. 2 ಲಕ್ಷದವರೆಗೆ ತೆರಿಗೆ ಉಳಿತಾಯವನ್ನು ಮಾಡಬಹುದು. 8 ಲಕ್ಷದಿಂದ ಇನ್ನೂ 2 ಲಕ್ಷ ಕಳೆದರೆ ಒಟ್ಟು ತೆರಿಗೆ ಆದಾಯ 6 ಲಕ್ಷ ರೂ. ಆಗುತ್ತದೆ.

•ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ ವೈದ್ಯಕೀಯ ಪಾಲಿಸಿಯನ್ನು ತೆಗೆದುಕೊಳ್ಳುವ ಮೂಲಕ, ನೀವು ರೂ. 25 ಸಾವಿರದವರೆಗೆ ತೆರಿಗೆ ಉಳಿಸಬಹುದು. ನೀವು ನಿಮ್ಮ ಪೋಷಕರ ಹೆಸರಿನಲ್ಲಿ ಆರೋಗ್ಯ ವಿಮೆಯನ್ನು ಖರೀದಿಸಿದರೆ, ನೀವು 50,000 ರೂ.ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ವೇಳೆ 6 ಲಕ್ಷದಿಂದ 75 ಸಾವಿರ ಕಳೆದರೆ ಒಟ್ಟು ತೆರಿಗೆ ಬಾಧ್ಯತೆ 5.25 ಲಕ್ಷ ರೂ. ಆಗುತ್ತದೆ.

•ನೀವು ಆದಾಯ ತೆರಿಗೆಯ ಸೆಕ್ಷನ್ 80G ಅಡಿಯಲ್ಲಿ, ನೀವು ದೇಣಿಗೆಯಾಗಿ ನೀಡಿದ ಮೊತ್ತದ ಮೇಲೆ 25,000 ರೂ.ವರೆಗೆ ತೆರಿಗೆ ಕಡಿತವನ್ನು ಪಡೆಯಬಹುದು. 25 ಸಾವಿರ ಕಡಿತಗೊಳಿಸಿದ ನಂತರ, ನಿಮ್ಮ ಆದಾಯವು ಈಗ 5 ಲಕ್ಷ ತೆರಿಗೆ Slab ನಲ್ಲಿ ಬರುತ್ತದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ, 5 ಲಕ್ಷದವರೆಗಿನ ಆದಾಯದ ಮೇಲೆ ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

Join Nadunudi News WhatsApp Group