Budget 2024: ಪ್ರತಿ ತಿಂಗಳು ಇಷ್ಟು ಸಂಬಳ ಪಡೆಯುವ ಉದ್ಯೋಗಿಗಳಿಗೆ ಯಾವುದೇ ಆದಾಯ ತೆರಿಗೆ ಇಲ್ಲ, ನಿಯಮ ಬದಲಾವಣೆ

ತಿಂಗಳ ಸಂಬಳದ ತೆರಿಗೆಯ ನಿಯಮ ಬದಲಾವಣೆ, ಪ್ರತಿ ತಿಂಗಳು ಸಂಬಳ ಪಡೆಯುವವರಿಗೆ ಗುಡ್ ನ್ಯೂಸ್

Income Tax Exemption On Monthly Salary: ಪ್ರಸ್ತುತ 2024 ಆರಂಭವಾಗಿದೆ. ಈ 2024 ಹೊಸ ವರ್ಷದೊಂದಿಗೆ, ಹೊಸ ಮಾಸದೊಂದಿಗೆ ಅನೇಕ ನಿಯಮಗಳು ಪರಿಚಯವಾಗುತ್ತಿದೆ. ಇನ್ನು 2024 ರಲ್ಲಿ ಹಣಕಾಸು ಸಚಿವಾಲಯವು 2024 Budget ಘೋಷಿಸಿಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಈ ಬಜೆಟ್ ಘೋಷಣೆ ಆಗುವ ಹಿನ್ನಲೆ ಸರ್ಕಾರೀ ನೌಕರರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

ತೆರಿಗೆ ವಿಚಾರದಲ್ಲಿ ಸರ್ಕಾರ ವಿನಾಯಿತಿ ನೀಡುತ್ತದಾ..? ಎನ್ನುವ ಬಗ್ಗೆ ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2024 ರ ಬಜೆಟ್ ನಲ್ಲಿ ತೆರಿಗೆ ಸ್ಲಾಬ್ ನಲ್ಲಿ ಬದಲಾವಣೆ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಹಾಗಾದರೆ 2024 ರ ಬಜೆಟ್ ನಲ್ಲಿ ಆದ ಬದಲಾವಣೆಯ ಬಗ್ಗೆ ತಿಳಿಯೋಣ. 

Tax Exemption Latest Update
Image Credit: Fisdom

ಪ್ರತಿ ತಿಂಗಳು ಇಷ್ಟು ಸಂಬಳ ಪಡೆಯುವ ಉದ್ಯೋಗಿಗಳಿಗೆ ಯಾವುದೇ ಆದಾಯ ತೆರಿಗೆ ಇಲ್ಲ
ಪ್ರತಿ ತಿಂಗಳು ಸಂಬಳ ಪಡೆಯುತ್ತಿರುವ ಉದ್ಯೋಗಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಸ್ಲ್ಯಾಬ್ ಬದಲಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಹಳೆಯ ತೆರಿಗೆ ಪದ್ಧತಿಯ ಬಗ್ಗೆ ಹೇಳುವುದಾದರೆ, ಪ್ರಸ್ತುತ ವ್ಯವಸ್ಥೆಯಲ್ಲಿ ಒಟ್ಟು 5 ಸ್ಲ್ಯಾಬ್‌ ಗಳ ಆದಾಯ ತೆರಿಗೆಗಳಿವೆ. ಇವುಗಳಲ್ಲಿ 2.5 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತ ವಿಭಾಗದಲ್ಲಿ ಬರುತ್ತದೆ. ಇದರ ನಂತರ, 2.5 ಲಕ್ಷದಿಂದ 5 ಲಕ್ಷದ ವರೆಗಿನ ಆದಾಯದ ಮೇಲೆ 5 ಪ್ರತಿಶತ ತೆರಿಗೆ ಇದೆ. ಅದೇ ಸಮಯದಲ್ಲಿ, 5 ಲಕ್ಷದಿಂದ 10 ಲಕ್ಷದವರೆಗೆ ಆದಾಯದ ಮೇಲೆ 20 ಪ್ರತಿಶತ ತೆರಿಗೆಯನ್ನು ನೇರವಾಗಿ ಪಾವತಿಸಬೇಕಾಗುತ್ತದೆ.

ತೆರಿಗೆ ವಿನಾಯಿತಿಯನ್ನು ಹೆಚ್ಚಳ ಮಾಡಿದ ಸರ್ಕಾರ
10 ಲಕ್ಷದಿಂದ 20 ಲಕ್ಷದವರೆಗಿನ ಆದಾಯಕ್ಕೆ ಶೇಕಡ 30 ತೆರಿಗೆ ವಿಧಿಸಲಾಗುತ್ತದೆ ಮತ್ತು ರೂ 20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಇಲ್ಲಿಯವರೆಗೆ 7 ಲಕ್ಷ ರೂ.ವರೆಗಿನ ವೇತನವು ತೆರಿಗೆ ಮುಕ್ತ ವ್ಯಾಪ್ತಿಯಲ್ಲಿ ಬರುತ್ತಿತ್ತು, ಇನ್ನುಮುಂದೆ 10 ಲಕ್ಷ ರೂ. ಗೆ ಹೆಚ್ಚಿಸಬಹುದು. ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೊಸ ತೆರಿಗೆ ಪದ್ಧತಿಯನ್ನು ತರ್ಕಬದ್ಧಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಬಹುದು.

Income Tax Exemption For Employees
Image Credit: India

ಹೊಸ ಆದಾಯ ತೆರಿಗೆ ಸ್ಲ್ಯಾಬ್ ನ ಬದಲಾವಣೆ
ಹಣಕಾಸು ಸಚಿವಾಲಯದ ನಿಯಮದ ಪ್ರಕಾರ, 10 ಲಕ್ಷ ರೂ.ವರೆಗಿನ ವೇತನ ರಚನೆಯನ್ನು ಬಜೆಟ್‌ ನಲ್ಲಿ ಕೇಂದ್ರೀಕರಿಸಲಾಗುತ್ತದೆ. ಇದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ, 10 ಲಕ್ಷದವರೆಗಿನ ಸಂಬಳವು ಎರಡು ತೆರಿಗೆ ಸ್ಲ್ಯಾಬ್‌ ಗಳಲ್ಲಿ ಬರುತ್ತದೆ.

Join Nadunudi News WhatsApp Group

ಮೊದಲನೆಯದು 6 ರಿಂದ 9 ಲಕ್ಷ ರೂ. ಅದರ ಮೇಲೆ ಶೇ. 10 ರಷ್ಟು ತೆರಿಗೆ ಇದೆ. ಆದರೆ 9 ಲಕ್ಷದಿಂದ 12 ಲಕ್ಷದವರೆಗೆ ಶೇ. 15 ರಷ್ಟು ತೆರಿಗೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಎರಡು ತೆರಿಗೆ ಸ್ಲ್ಯಾಬ್ ಗಳನ್ನೂ 10 ರೂ. ಗಳ ಒಂದು ಸ್ಲ್ಯಾಬ್ ಗೆ ಪರಿವರ್ತಿಸಲು ಪ್ರಯತ್ನಿಸಬಹುದು. ಇದಕ್ಕೂ ಶೇ. 10 ರಷ್ಟು  ತೆರಿಗೆ ವಿಧಿಸುವ ಯೋಜನೆ ಇದೆ. ಇದರಲ್ಲಿ 6 ರಿಂದ 9 ಲಕ್ಷ ರೂ. ಗಳ ಸ್ಲ್ಯಾಬ್ ಬದಲಾಗಬಹುದು.

Join Nadunudi News WhatsApp Group