Tax Notice 2024: ತೆರಿಗೆ ಇಲಾಖೆಯಿಂದ ಬಿಗ್ ಅಪ್ಡೇಟ್, ಇಂತಹ ತೆರಿಗೆದಾರರಿಗೆ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ.

ಇಂತಹ ತೆರಿಗೆದಾರರಿಗೆ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ.

Income Tax Notice News: ಆದಾಯ ಇಲಾಖೆಯು ತೆರಿಗೆ ಪಾವತಿದಾರರಿಗೆ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೊಳಿಸುತ್ತ ಇರುತ್ತದೆ. ತೆರಿಗೆ ಪವತಿದಾರರು ಯಾವುದೇ ಕಾರಣಕ್ಕೂ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಬಾರದೆಯೂ ಎನ್ನುವ ಉದ್ದೇಶದಿಂದ ಆದಾಯ ಇಲಾಖೆ ಆಗ ಹೊಸ ತೆರಿಗೆ ನಿಯಮವನ್ನು ಜಾರಿಗೊಳಿಸುತ್ತ ಇರುತ್ತದೆ.

ಇನ್ನು ಆದಾಯ ಇಲಾಖೆಯು ತೆರೆಗೆ ಪಾವತಿದಾರರಿಗೆ ಕೆಲವೊಮ್ಮೆ Tax Notice ಅನ್ನು ನೀಡುತ್ತದೆ. ತೆರಿಗೆ ಪಾವತಿಯಲ್ಲಿ ತಪ್ಪಾದರೆ ಇಲಾಖೆಯು ತೆರಿಗೆ ನೋಟಿಸ್ ಜಾರಿ ಮಾಡುತ್ತದೆ. ಸದ್ಯ ಇಂತಹ ತೆರಿಗೆದಾರರಿಗೆ ನೋಟೀಸ್ ಕಳುಹಿಸಲು ಕೇಂದ್ರ ಆದೇಶ ಹೊರಡಿಸಿದೆ.

Income Tax Notice Update
Image Credit: Taxconcept

ಇಂತಹ ತೆರಿಗೆದಾರರಿಗೆ ನೋಟೀಸ್ ಕಳುಹಿಸಲು ಕೇಂದ್ರದ ಆದೇಶ
2020-21 ಹಣಕಾಸು ವರ್ಷಕ್ಕೆ ನಿಮ್ಮ ಆದಾಯ ತೆರಿಗೆ ರಿಟರ್ನ್‌ ನಲ್ಲಿ ನೀವು ಸಹ ಕೆಲವು ತಪ್ಪುಗಳನ್ನು ಮಾಡಿರಬಹುದು ಅಥವಾ ಪ್ರಮುಖ ಮಾಹಿತಿಯನ್ನು ನವೀಕರಿಸುವುದನ್ನು ತಪ್ಪಿಸಿರಬಹುದು.ಹೀಗಾದರೆ ನವೀಕರಿಸಿದ ರಿಟರ್ನ್ ಸಲ್ಲಿಸಲು ತೆರಿಗೆ ಇಲಾಖೆ ನಿಮ್ಮನ್ನು ಕೇಳಿದೆ. ನವೀಕರಿಸಿದ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 2024 ಆಗಿದೆ.

2020-21 ಹಣಕಾಸು ವರ್ಷಕ್ಕೆ (AY 2021-22) ನಿಮ್ಮ ITR ಅನ್ನು ನೀವು ಸಲ್ಲಿಸದಿದ್ದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಕಳುಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆದಾಯ ತೆರಿಗೆ ಇಲಾಖೆಯು ನಿಮ್ಮ ಹೆಚ್ಚಿನ ಮೌಲ್ಯದ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿಯನ್ನು ಹೊಂದಿದ್ದರೆ, ಅದನ್ನು ಪರಿಶೀಲಿಸಿದ ನಂತರ ನೀವು ನಿಮ್ಮ ರಿಟರ್ನ್ ಅನ್ನು ನವೀಕರಿಸಬೇಕಾಗುತ್ತದೆ.

Income Tax Notice News
Image Credit: Times Of India

AIS ನೊಂದಿಗೆ ನಿಮ್ಮ ತಪ್ಪನ್ನು ಪರಿಶೀಲಿಸಿಕೊಳ್ಳಬಹುದು
ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಇ-ಮೇಲ್ ಮೂಲಕ ಮಾಹಿತಿ ನೀಡುತ್ತಿದೆ. ಇದು ಇ-ಪರಿಶೀಲನೆ ಯೋಜನೆ-2021 ರ ಭಾಗವಾಗಿದೆ. ಆದಾಯ ತೆರಿಗೆ ಇಲಾಖೆಯ e-Filing Portal ಮೂಲಕ ತಮ್ಮ ವಾರ್ಷಿಕ ಮಾಹಿತಿ ಹೇಳಿಕೆ (AIS) ಅನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಸಲಹೆ ನೀಡಿದೆ. ಯಾವುದೇ ರೀತಿಯ ದೋಷವನ್ನು AIS ಮೂಲಕ ಗುರುತಿಸಬಹುದು. ಅಗತ್ಯವಿದ್ದರೆ ನೀವು ನವೀಕರಿಸಿದ ITR ಅನ್ನು ಸಹ ಸಲ್ಲಿಸಬಹುದು. AIS ನೊಂದಿಗೆ ನಿಮ್ಮ ತಪ್ಪನ್ನು ಪರಿಶೀಲಿಸಿಕೊಳ್ಳಲು ಸಾಧ್ಯವಾಗುತ್ತದೆ.

Join Nadunudi News WhatsApp Group

ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಏನು ಮಾಡಬೇಕು…?
ನೀವು ಆದಾಯ ತೆರಿಗೆ ಇಲಾಖೆಯಿಂದ ಸಂಬಂಧಿತ ಸೂಚನೆಯನ್ನು ಸಹ ಸ್ವೀಕರಿಸಿದ್ದರೆ, ನೀವು ನವೀಕರಿಸಿದ ITR ಅನ್ನು ಸಲ್ಲಿಸಬೇಕಾಗುತ್ತದೆ. ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಸಂಬಂಧಿತ ಮೌಲ್ಯಮಾಪನ ವರ್ಷಕ್ಕೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ನಂತರ ಅದನ್ನು ಎಚ್ಚರಿಕೆಯಿಂದ ಫೈಲ್ ಮಾಡಬೇಕು. ಈ ಕೆಲಸವನ್ನು ಪೂರ್ಣಗೊಳಿಸಲು ಇಲಾಖೆಯು ಮಾರ್ಚ್ 31, 2024 ರವರೆಗೆ ಕಾಲಾವಕಾಶ ನೀಡಿದೆ.

Join Nadunudi News WhatsApp Group