Notice Of Tax: ಗಂಡ ಮತ್ತು ಹೆಂಡತಿ ನಡುವೆ ಇದಕ್ಕಿಂತ ಹೆಚ್ಚು ಹಣದ ವಹಿವಾಟು ನಡೆದರೆ ಕಟ್ಟಬೇಕು ತೆರಿಗೆ, ಹೊಸ ರೂಲ್ಸ್.

ಗಂಡ ಮತ್ತು ಹೆಂಡತಿ ನಡುವೆ ಇದಕ್ಕಿಂತ ಹೆಚ್ಚು ಹಣದ ವಹಿವಾಟು ನಡೆದರೆ ಕಟ್ಟಬೇಕು ತೆರಿಗೆ.

Income Tax notice On Cash Transactions Between Husband And Wife: ಆದಾಯ ಇಲಾಖೆಯು ನಾವು ಮಾಡುವಂತಹ ಎಲ್ಲ ರೀತಿಯ ಹಣದ ವಹಿವಾಟಿನ ಮೇಲು ಕಾಣುತ್ತಿರುತ್ತೇವೆ. ಆದಾಯ ಇಲಾಖೆಯ ನಿಯಮಾನುಸಾರ ನಡೆಯದೆ ಇರುವ ವಹಿವಾಟಿಗೆ ಇಲಾಖೆಯು ತೆರಿಗೆ ನೋಟಿಸ್ ಅನ್ನು ನೀಡುತ್ತದೆ.

ಇನ್ನು ತಂದೆ ಮತ್ತು ಮಗನ ನಡುವೆ ಅಥವಾ ಗಂಡ ಮತ್ತು ಹೆಂಡತಿಯ ನಡುವೆ ಹಣದ ವಹಿವಾಟು ನಡೆಯುತ್ತಿದ್ದರೆ ಅಂತಹ ವಹಿವಾಟಿನ ಮೇಲು ಹೆಚ್ಚು ಗಮನ ಇರಿಸಬೇಕಾಗುತ್ತದೆ. ನಮ್ಮ ಪ್ರತಿಯೊಂದು ವಹಿವಾಟು ಇಲಾಖೆ ಗಮನ ಹರಿಸುತ್ತದೆ. ಹೀಗಿರುವಾಗ ನಗದು ವಹಿವಾಟಿನ ಮೇಲೆ ಆದಾಯ ತೆರಿಗೆ ನಿಯಮ ಅನ್ವಯವಾಗುದು ಸಹಜ.

Income Tax notice On Cash Transactions
Image Credit: Informal News

ಗಂಡ ಮತ್ತು ಹೆಂಡತಿ ನಡುವೆ ಇದಕ್ಕಿಂತ ಹೆಚ್ಚು ಹಣದ ವಹಿವಾಟು ನಡೆದರೆ ಕಟ್ಟಬೇಕು ತೆರಿಗೆ
ನೀವು ಮನೆ ಖರ್ಚಿಗೆ ಪ್ರತಿ ತಿಂಗಳು ಹಣವನ್ನು ನೀಡಿದರೆ ಅಥವಾ ಹಣವನ್ನು ಉಡುಗೊರೆಯಾಗಿ ನೀಡಿದರೆ, ಆಗ ಹೆಂಡತಿ ಆದಾಯ ತೆರಿಗೆಗೆ ಹೊಣೆಯಾಗುವುದಿಲ್ಲ. ಈ ಎರಡೂ ರೀತಿಯ ಮೊತ್ತವನ್ನು ಗಂಡನ ಆದಾಯವೆಂದು ಪರಿಗಣಿಸಲಾಗುತ್ತದೆ. ಈ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಪತ್ನಿ ಯಾವುದೇ ನೋಟಿಸ್ ಸ್ವೀಕರಿಸುವುದಿಲ್ಲ.ಆದರೆ ಹೆಂಡತಿ ಪದೇ ಪದೇ ಈ ಹಣವನ್ನು ಎಲ್ಲೋ ಹೂಡಿಕೆ ಮಾಡಿ ಅದರಿಂದ ಆದಾಯವನ್ನು ಪಡೆದರೆ, ಆಗ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ವರ್ಷದಿಂದ ವರ್ಷಕ್ಕೆ ಲೆಕ್ಕಹಾಕಿದ ಹೂಡಿಕೆಯ ಆದಾಯವನ್ನು ಹೆಂಡತಿಯ ಆದಾಯವೆಂದು ಪರಿಗಣಿಸಲಾಗುತ್ತದೆ, ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 269SS ಮತ್ತು 269T ಅಡಿಯಲ್ಲಿ, 20 ಸಾವಿರ ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ ದಂಡ ವಿಧಿಸಬಹುದು.

Income Tax notice On Cash Transactions Between Husband And Wife
Image Credit: Astrotalk

ಈ ಸಂದರ್ಭದಲ್ಲಿ ವಿನಾಯಿತಿ ಪಡೆಯಬಹುದು
ಮಿತಿಗಿಂತ ಹೆಚ್ಚಿನ ನಗದು ವಹಿವಾಟಿಗೆ ಆದಾಯ ಇಲಾಖೆಯು ದಂಡವನ್ನು ವಿಧಿಸುತ್ತದೆ. ಆದಾಗ್ಯೂ, ಕೆಲವೊಂದು ಸಮಯದಲ್ಲಿ ಇದರ ಮೇಲೆ ವಿನಾಯಿತಿಯನ್ನು ಪಡೆಯಬಹುದು. ತಂದೆ-ಮಗ, ಪತಿ-ಪತ್ನಿ ಮತ್ತು ಕೆಲವು ಸಂಬಂಧಿಗಳ ನಡುವಿನ ವ್ಯವಹಾರಗಳಿಗೆ ಯಾವುದೇ ದಂಡವಿಲ್ಲ. ಈ ಪ್ರಕರಣಗಳಲ್ಲಿ ವಿನಾಯಿತಿ ನೀಡಲಾಗಿದೆ. ಸರಳವಾಗಿ ಹೇಳುವುದಾದರೆ, ಈ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಹೆಂಡತಿ ಯಾವುದೇ ಸೂಚನೆಯನ್ನು ಸ್ವೀಕರಿಸುವುದಿಲ್ಲ.

Join Nadunudi News WhatsApp Group

Join Nadunudi News WhatsApp Group