Income Tax Rule: ಆದಾಯ ತೆರಿಗೆ ಪಾವತಿ ಮಾಡುವವರಿಗೆ ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ, ತೆರಿಗೆ ಪಾವತಿಸುವ ಮುನ್ನ ನಿಯಮಗಳ ಬಗ್ಗೆ ಎಚ್ಚರ ಇರಲಿ.

Income Tax Rules Changes: ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗಿವೆ ಹಾಗೂ ಹೊಸ ಹೊಸ ನಿಯಮಗಳು ಜಾರಿಗೆ ಬಂದಿದೆ. ಇನ್ನೇನು ಮಾರ್ಚ್ ಮುಗಿಯುತ್ತಿದ್ದಂತೆ ಏಪ್ರಿಲ್ ತಿಂಗಳು ಆರಂಭವಾಗಲಿದೆ.

ಏಪ್ರಿಲ್ 2023 ರಿಂದ ಹೊಸ ಹಣಕಾಸು ವರ್ಷ (Financial Year)  ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಹಣಕಾಸು ವರ್ಷದ ಕೆಲವು ನಿಯಮಗಳು ಬದಲಾಗಲಿವೆ.

Income Tax Rules Changes
Image Source: India Today

ಆದಾಯ ತೆರಿಗೆ ಸಂಬಂಧಿತ ನಿಯಮಗಳು ಬದಲಾವಣೆ
ಏಪ್ರಿಲ್ 2023 ರಿಂದ ಹೊಸ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಗೆ ಸಂಬಂಧಿತ ಹಲವು ನಿಯಮಗಳು ಬದಲಾಗಲಿವೆ. ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಈ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ.

ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಸಂಬಳದಾರರು ಪ್ರಯೋಜನ ಪಡೆಯಲಿದ್ದಾರೆ. ಅಂತವರಿಗೆ TDS ಕಡಿತಗೊಳಿಸಬಹುದು. ಇಂತಹ ತೆರಿಗೆದಾರರು ಅವರ ತೆರಿಗೆಯ ಆದಾಯವು 7 ಲಕ್ಷಕ್ಕಿಂತ ಕಡಿಮೆಯಿರುತ್ತದೆ ಹಾಗೂ ಅವರು ಹೊಸ ತೆರಿಗೆಯನ್ನು ಆಚರಿಸುತ್ತಾರೆ.

Income Tax Rules Changes
Image Source: Asiant Suvarna News

ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87 ಎ ಅಡಿಯಲ್ಲಿ ಹೆಚ್ಚುವರಿ ವಿನಾಯಿತಿ ನೀಡಲಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪಾವತಿಸಿದ ಬಡ್ಡಿಯಲ್ಲಿ TDS ಅನ್ನು ಕಡಿತಗೊಳಿಸಲಾಗುವುದಿಲ್ಲ. ಇದನ್ನು ಹೊರತುಪಡಿಸಿ ಎಲ್ಲಾ ಇತರ ಪಾವತಿಗಳ ಮೇಲೆ 10 ಪ್ರತಿಶತ TDS ಅನ್ನು ಕಡಿತಗೊಳಿಸಲಾಗುತ್ತದೆ.

Join Nadunudi News WhatsApp Group

ಆನ್ಲೈನ್ ನ ಆಟಗಳನ್ನು ಗೆದ್ದರೆ ಅದರ ಮೇಲೆ ಬಾರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆಯ ಹೊಸ ಸೆಕ್ಷನ್ 115 BBJ ಅಡಿಯಲ್ಲಿ ಅಂತಹ ಗೆಲುವಿನ ಮೇಲೆ 30 % ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯನ್ನು ಟಿಡಿಎಸ್ ಆಗಿ ವಿಧಿಸಲಾಗುತ್ತದೆ. ಏಪ್ರಿಲ್ 1 2023 ರಿಂದ ಆಸ್ತಿಯ ಮಾರಾಟದಿಂದ ಗಳಿಸಿದ ಲಾಭದ ಮೇಲೆ ಹೆಚ್ಚಿನ ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Income Tax Rules Changes
Image Source: India Today

Join Nadunudi News WhatsApp Group