ITR Fine: ಆದಾಯ ತೆರಿಗೆ ಕಟ್ಟುವಾಗ ಈ ತಪ್ಪಾದರೆ 5000 ರೂ ದಂಡ, ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ.

ಆದಾಯ ತೆರಿಗೆ ಪಾವತಿಸುವವರು ಈ ತಪ್ಪು ಮಾಡಿದರೆ 5000 ರೂ ದಂಡವನ್ನು ಕಟ್ಟಬೇಕಾಗುತ್ತದೆ.

Income Tax Return Last Date: ಆದಾಯ ತೆರಿಗೆಗೆ (Income Tax) ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಇನ್ನು ಆದಾಯ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಕೂಡ ಹತ್ತಿರವಾಗುತ್ತಿದೆ. ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ತೆರಿಗೆದಾರರು ಹೆಚ್ಚಿನ ದಂಡವನ್ನು ಪಾವತಿಸಬೇಕುತ್ತದೆ.

ಪ್ರಸ್ತುತ 2022 -23 ಹಣಕಾಸು ವರ್ಷದ ಆದಾಯ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದಾಯ ತೆರಿಗೆ ಪಾವತಿಯಲ್ಲಿ ಈ ರೀತಿಯ ತಪ್ಪಾದರೆ ನೀವು ಐದು ಸಾವಿರ ದಂಡ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಪಾವತಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಾಗಿದೆ.

ಜುಲೈ 31 ತೆರಿಗೆ ಪಾವತಿದಾರರಿಗೆ ಕೊನೆಯ ದಿನಾಂಕ
ಹೊಸ ಹಣಕಾಸು ವರ್ಷದಿಂದ ಐಟಿ ರಿಟರ್ನ್ ಸಲ್ಲಿಕೆಯ್ಲಲಿ ಕೂಡ ಅನೇಕ ನಿಯಮಗಳು ಬದಲಾಗಿವೆ.

If you make this mistake while paying income tax, you will be fined Rs 5000
Image Credit: Indiafilings

ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಒಂದು ವರ್ಷದಲ್ಲಿ ತೆರಿಗೆ ಅನ್ವಯ ಆಗುವಂತಹ 50 ಲಕ್ಷ ಆದಾಯ ಇರುವ ಭಾರತೀಯ ಪ್ರಜೆಗಳು ಐಟಿಆರ್ 1 ಅನ್ನು ಸಲ್ಲಿಸಬೇಕು.

ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ಏಳು ರೀತಿಯ ಐಟಿಆರ್ ಫಾರ್ಮ್ ಗಳಿರುತ್ತದೆ. ಹಳೆ ತೆರಿಗೆ ಪದ್ಧತಿ ಹಾಗು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ.

Join Nadunudi News WhatsApp Group

If you make this mistake while paying income tax, you will be fined Rs 5000
Image Credit: Herofincorp

ಆದಾಯ ತೆರಿಗೆ ಕಟ್ಟುವಾಗ ಈ ತಪ್ಪಾದರೆ 5000 ರೂ ದಂಡ
ವಿವಿಧ ರೀತಿಯ ಐಟಿಆರ್ ಫಾರ್ಮ್ ಗಳನ್ನೂ ಅಗತ್ಯಕ್ಕೆ ಅನುಗುಣವಾಗಿ ಸಲ್ಲಿಸಲಾಗುತ್ತದೆ. ITR -1 ಮತ್ತು ITR -4 ಅನ್ನು ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರು ಸಲ್ಲಿಸುತ್ತಾರೆ.ಐಟಿ ರಿಟರ್ನ್ ಪಾವತಿಗೆ ನೀಡಿರುವ ನಿಗದಿತ ಸಮಯದೊಳಗೆ ತೆರಿಗೆ ಪಾವತಿ ಆಗದಿದ್ದರೆ 5000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ಈ ವರ್ಷದ ITR ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ.

ಇನ್ನು ತೆರಿಗೆ ಪಾವತಿದಾರರು ಐಟಿಆರ್ ಅನ್ನು ಸಲ್ಲಿಸಲು ಡಿಸೇಂಬರ್ 31 ರವಗೆ ಸಮಯಾವಕಾಶವನ್ನು ಆದಾಯ ಇಲಾಖೆ ನೀಡಿದೆ. ನಿಮ್ಮ ಐಟಿಆರ್ ಅನ್ನು ತಡವಾಗಿ ರಿಟರ್ನ್ ಫೈಲ್ ನೊಂದಿಗೆ ಡಿಸೇಂಬರ್ ನವರೆಗೂ ಸಲ್ಲಿಸಬಹುದು. ಆದರೆ ಜುಲೈ ನಂತರ ಐಟಿಆರ್ ಸಲ್ಲಿಕೆಗೆ 5000 ದಂಡವನ್ನು ಆದಾಯ ಇಲಾಖೆ ನಿಗದಿಪಡಿಸಿದೆ. ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ದಂಡದ ಮೊತ್ತ ದ್ವಿಗುಣವಾಗುತ್ತದೆ.

Join Nadunudi News WhatsApp Group