Income Tax Rules: ಒಬ್ಬ ವ್ಯಕ್ತಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು, ಸರ್ಕಾರದ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

ಆದಾಯ ತೆರಿಗೆ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು.

Indian Income Tax Rules: ಭಾರತದಲ್ಲಿ ಡಿಜಿಟಲ್ (Digital) ವಹಿವಾಟುಗಳನ್ನು ಬಳಸುವುದು ಹೆಚ್ಚಳವಾಗುತ್ತಿದ್ದಂತೆ, ನಾಗರಿಕರು ಹೊಸದಾದ ಈ ಸಾಮಾನ್ಯ ವ್ಯವಸ್ಥೆಗೆ ತೊಡಗಿಕೊಳ್ಳುತ್ತಾರೆ.

ಇನ್ನೊಂದು ಬದಿಯಲ್ಲಿ ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳುವ ಸಾಂಪ್ರದಾಯಿಕ ವಿಧಾನವನ್ನು ಅವಲಂಭಿಸಿರುವ ಮತ್ತು ನಂಬುವ ಬಹುಪಾಲು ಭಾರತೀಯರು ಸಹ ಇನ್ನೂ ಇದ್ದಾರೆ.

If you keep more than necessary money at home, you have to pay a fine
Image Credit: financialexpress

ಆದಾಯ ತೆರಿಗೆ ಕಾಯ್ದೆಯ ನಿಯಮ
ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಮನೆಯಲ್ಲಿ ಸಂಗ್ರಹಿಸಿ ಇಡಬಹುದಾದ ನಗದು ಅಥವಾ ಹಣಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಮನೆಗೆ ಆದಾಯ ತೆರಿಗೆ ದಾಳಿ ನಡೆಸಿದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಈ ಹಣ ಮೂಲವನ್ನು ಸಾಭೀತುಪಡಿಸಬೇಕು ಮತ್ತು ಸರಿಯಾದ   ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಮುಖ್ಯವಾಗಿ ನಿಮ್ಮ ಮನೆಯಲ್ಲಿ ಇರುವ ಮೊತ್ತವು ನಿಮ್ಮ ಆದಾಯದಲ್ಲಿ ಯಾವುದೇ ಲೆಕ್ಕಾಚಾರಕ್ಕೆ ಒಳಪಡದೆ ಇರಬಾರದು. ನಿಮ್ಮ ದಾಖಲೆಗಳು ನಿಮ್ಮ ಮನೆಯಲ್ಲಿ ಇರುವ ನಗದಿನ ಮೊತ್ತಕ್ಕೆ ಹೊಂದಿಕೆಯಾಗದಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ದಂಡ ವಿಧಿಸಬಹುದು.

As per the tax rules, if you keep more money at home than required, you have to pay penalty
Image credit: moneycontrol

ನಗದು ಹಣಕ್ಕೆ ದಾಖಲು ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ
ನಿಮ್ಮಲ್ಲಿರುವ ನಗದಿಗೆ ಯಾವುದೇ ದಾಖಲೆಗಳು ಇಲ್ಲವೆಂದಾದರೆ ಆದಾಯ ತೆರಿಗೆ ಸಿಬ್ಬಂದಿ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳುತ್ತಾರೆ, ದಂಡ ವಿಧಿಸುತ್ತಾರೆ. ದಂಡವು ಒಟ್ಟು ಮೊತ್ತದ ಶೇಕಡಾ 137 ರವರೆಗೆ ಇರುತ್ತದೆ.

Join Nadunudi News WhatsApp Group

ಆದಾಯ ತೆರಿಗೆ ಇಲಾಖೆ ರೂಪಿಸಿರುವ ನಗದು ಹಣಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ವ್ಯಕ್ತಿಯು ಪಡೆಯುವ ಅಥವಾ ಮಾಡುವ ಯಾವುದೇ ಸಾಲ ಅಥವಾ ಠೇವಣಿಗೆ 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಲು ಅನುಮತಿಸಲಾಗುವುದಿಲ್ಲ.

According to tax rules, a person cannot keep more money in the house.
Image Credit: rightsofemployees

ದಂಡ ವಿಧಿಸುವ ನಿಯಮ
ಯಾವುದೇ ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಹಿವಾಟುಗಳು ಲೆಕ್ಕಕ್ಕೆ ಸಿಗದಿದ್ದರೆ ಅಥವಾ ಅದಕ್ಕೆ ದಾಖಲೆ ಸರಿಯಾದ ರೀತಿಯಲ್ಲಿ ಇಲ್ಲದೆ ಇದ್ದರೆ ಮಾತ್ರ ದಂಡವನ್ನು ವಿಧಿಸಬಹುದು. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ಪ್ರಕಾರ, ಒಂದು ಬಾರಿಗೆ 50,000 ರೂಪಾಯಿಗಿಂತ ಅಧಿಕ ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಪ್ಯಾನ್ ವಿವರ ತೋರಿಸುವುದು ಅಗತ್ಯವಾಗಿದೆ.

Join Nadunudi News WhatsApp Group