ಭಾರತದ ಕ್ರಿಕೆಟ್ ಆಟಗಾರರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ, ಯಾವ ಆಟಕ್ಕೂ ಸಿಗಲ್ಲ ಇಷ್ಟು ಸಂಬಳ.

ಕ್ರಿಕೆಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟಪಡುವ ಆಟವೆಂದರೆ ಅದೂ ಕ್ರಿಕೆಟ್ ಎಂದು ಹೇಳಬಹುದು. ಬೇರೆಬೇರೆ ದೇಶದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಒಂದೇ ಒಂದು ತಂಡವೆಂದರೆ ಅದು ಭಾರತ ಎಂದು ಹೇಳಬಹುದು. ಅದೆಷ್ಟೋ ಗ್ರೇಟ್ ಆಟಗಾರರು ಭಾರತವನ್ನ ಪ್ರತಿನಿಧಿಸಿ ಈಗ ದೊಡ್ಡ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಭಾರತ ಬಹುತೇಕ ಎಲ್ಲಾ ಕ್ರಿಕೆಟ್ ಆಟಗಾರರು ದೊಡ್ಡ ಸೆಲೆಬ್ರಿಟಿಗಳು ಆಗಿದ್ದಾರೆ. ಇನ್ನು ಇದರ ನಡುವೆ ಭಾರತ ತಂಡದ ಆಟಗಾಗರಿಗೆ ಒಂದು ತಿಂಗಳಿಗೆ ಎಷ್ಟು ಸಂಬಳವನ್ನ ನೀಡಲಾಗುತ್ತದೆ ಮತ್ತು ಅವರಿಗೆ ಏನೇನು ಸವಲತ್ತುಗಳನ್ನ ನೀಡಲಾಗುತ್ತದೆ ಎಂದು ತಿಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ.

ಹಾಗಾದರೆ ಭಾರತದ ಕ್ರಿಕೆಟ್ ತಂಡದ ಆಟಗಾರರ ಒಂದು ತಿಂಗಳ ಸಂಬಳ ಎಷ್ಟು ಮತ್ತು ಅವರಿಗೆ ಯಾವ ಯಾವ ಸವಲತ್ತುಗಳನ್ನ ನೀಡಲಾಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಭಾರತ ತಂಡವನ್ನ ಪ್ರತಿನಿಧಿಸುವ ಪ್ರತಿಯೊಬ್ಬ ಆಟಗಾರನಿಗೂ ಒಂದೇ ತರನಾದ ಸಂಬಳವನ್ನ ನೀಡಲಾಗುವುದಿಲ್ಲ ಮತ್ತು ಅದರ ಹೊರಟಿ ಒಬ್ಬೊಬ್ಬರ ಸಂಬಳ ಒಂದೊಂದು ರೀತಿ ಇರುತ್ತದೆ ಎಂದು ಹೇಳಬಹುದು. ಭಾರತದ ತಂಡದ ಆಟಗಾರರನ್ನ 4 ವಿಧಗಳಾಗಿ ವಿಂಗಡಣೆ ಮಾಡಲಾಗುತ್ತದೆ ಮತ್ತು ಮೊದಲ ಹಂತದ ಆಟಗಾರರಿಗೆ ಬಹಳ ಹೆಚ್ಚಿನ ಸಂಬಳವನ್ನ ನೀಡಲಾಗುತ್ತದೆ.

Indian cricketers salary

ಭಾರತ ತಂಡದ ಆಟಗಾರರನ್ನ ABCD ವಿಭಾಗವಾಗಿ ವಿಂಗಡಣೆ ಮಾಡಲಾಗುತ್ತದೆ ಮತ್ತು ಮೊದಲ ಹಂತದ ಆಟಗಾರರಿಗೆ ಸುಮಾರು 7 ಕೋಟಿ ರೂಪಾಯಿಯನ್ನ ವಾರ್ಷಿಕ ಸಂಬಳದ ರೂಪದಲ್ಲಿ ನೀಡಲಾಗುತ್ತದೆ. ಹೌದು ದೊಡ್ಡ ಮಟ್ಟದ ಆಟಗಾರಿಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿ ಸಂಬಳವನ್ನ ನೀಡಿದರೆ ಎರಡನೆಯ ವಿಭಾಗದಲ್ಲಿ ಆಡುವ ಆಟಗಾರರಿಗೆ ಸುಮಾರು 5 ಕೋಟಿ ರೂಪಾಯಿಯನ್ನ ವಾರ್ಷಿಕ ಸಂಬಳದ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ ಮೂರನೇ ವಿಭಾಗದಲ್ಲಿ ಆಡುವ ಆಟಗಾರರಿಗೆ 3 ಕೋಟಿ ರೂಪಾಯಿ ವಾರ್ಷಿಕ ಸಂಬಳವನ್ನ ನೀಡಿದರೆ ನಾಲ್ಕನೇ ವಿಭಾಗದಲ್ಲಿ ಆಟವನ್ನ ಆಡುವ ಆಟಗಾರರಿಗೆ 1 ಕೋಟಿ ರೂಪಾಯಿಯನ್ನ ವಾರ್ಷಿಕ ಸಂಬಳದ ರೂಪದಲ್ಲಿ ನೀಡಲಾಗುತ್ತದೆ.

ಇನ್ನು ಅಷ್ಟೇ ಅಲ್ಲದೆ ಅವರ ಪ್ರಯಾಣದ ಖರ್ಚು, ಊಟದ ಖರ್ಚು, ವಸತಿಯ ಖರ್ಚನ್ನ ಕೂಡ ಸಂಸ್ಥೆ ನೋಡಿಕೊಳ್ಳುತ್ತದೆ. ಇನ್ನು ಸಂಬಳ ಮಾತ್ರವಲ್ಲದೆ ಒಂದು ಪಂದ್ಯವನ್ನ ಆಡಿದರು ಕೂಡ ಅವರಿಗೆ ಸಂಬಳವನ್ನ ನೀಡಲಾಗುತ್ತದೆ. ಹೌದು ಭಾರತ ತಂಡದ ಆಟಗರು ಒಂದು ಟೆಸ್ಟ್ ಪಂದ್ಯವನ್ನ ಆಡಿದರೆ 16 ಲಕ್ಷ ಮತ್ತು ಏಕದಿನ ಪಂದ್ಯವನ್ನ ಆಡಿದರೆ 6 ಲಕ್ಷ ರೂಪಾಯಿಯನ್ನ ನೀಡಲಾಗುತ್ತದೆ. ಇನ್ನು ಅದರ ಜೊತೆಗೆ ಆಟಗಾರರಿಗೆ ಸರ್ಕಾರೀ ಕೆಲಸವನ್ನ ನೀಡಲಾಗುತ್ತದೆ. ಈಗಿನ ಕಾಲದಲ್ಲಿ ಕೆಲವು ಆಟಗಾರರು ಹಣವನ್ನ ಸಂಪಾಧನೆ ಮಾಡುವ ಉದ್ದೇಶದಿಂದ ಹಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದು ಕೋಟಿ ಹಣವನ್ನ ಸಂಪಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಭಾರತ ತಂಡದ ಆಟಗಾರರಿಗೆ ನೀಡಲಾಗುತ್ತಿರುವ ಈ ಸಂಬಳದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Indian cricketers salary

Join Nadunudi News WhatsApp Group