Indian Gold Price: ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಲು ಕಾರಣ ಏನು, 2024 ಕ್ಕೆ ಬೆಲೆ ಎಷ್ಟಾಗಲಿದೆ.

ದೇಶದಲ್ಲಿ ಪ್ರತಿನಿತ್ಯ ಚಿನ್ನದ ಬೆಲೆ ಏರಿಕೆ ಆಗುತ್ತಿರಲು ಕಾರಣಗಳು ಏನು ಅನ್ನುವುದರ ಬಗ್ಗೆ ತಿಳಿದುಕೊಳ್ಳಿ.

Gold Rate Hike Reason: ದೇಶದಲ್ಲಿ ಚಿನ್ನದ ಬೆಲೆ ಸತತ ಏರಿಕೆಯಾಗುತ್ತಲೇ (Gold Rate Hike) ಇದೆ. ಈ ವರ್ಷದ ಆರಂಭದಿಂದ ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆ ಕಂಡು ಬರುತ್ತಿದೆ. ಚಿನ್ನ ಖರೀದಿಸಲು ಬಯಸುವವರಿಗೆ ಚಿನ್ನದ ಬೆಲೆಯಲ್ಲಿ ಯಾವುದೇ ಸಿಹಿ ಸುದ್ದಿ ಸಿಗುತ್ತಿಲ್ಲ. ದಿನ ಕಳೆಯುತ್ತಿದ್ದಂತೆ ಚಿನ್ನ ದುಬಾರಿಯಾಗುತ್ತಲೇ ಇದೆ. ಇನ್ನು ಚಿನ್ನದ ಬೆಲೆಯ ಏರಿಕೆಗೆ ಕಾರಣ ಏನಿರಬಹುದು ಎನ್ನುವುದನ್ನು ತಿಳಿಯೋಣ.

Due to the daily increase in the price of gold in the international market, the price of gold in India is also increasing daily
Image Credit: gulfnews

ಚಿನ್ನದ ಬೆಲೆಯಲ್ಲಿ ಏರಿಕೆ
ಏಪ್ರಿಲ್ 1 ರಿಂದ ಹಣಕಾಸು ವರ್ಷ ಆರಂಭಗೊಂಡಿದೆ. ಈ ವರ್ಷದ ಹಣಕಾಸು ವರ್ಷ ಹಣದುಬ್ಬರದ ಪರಿಸ್ಥಿಯನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಹಣಕಾಸು ವರ್ಷದ ಆರಂಭಕ್ಕೂ ಮುನ್ನವೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿತ್ತು. ಕಳೆದ ನಾಲ್ಕು ತಿಂಗಳಿನಲ್ಲಿ 4,600 ರ ಗಡಿಯಲ್ಲಿದ್ದ ಚಿನ್ನದ ಬೆಲೆ ಇದೀಗ ಏಕಾಏಕಿ 5600 ಗಡಿ ತಲುಪಿದೆ. ಕೇವಲ ನಾಲ್ಕೇ ತಿಂಗಳಲ್ಲಿ 1,000 ರೂ. ಹೆಚ್ಚಳವಾಗಿದೆ.

ಇಂದಿನ ಚಿನ್ನದ ಬೆಲೆಯಲ್ಲಿನ ಏರಿಕೆ
ಇಂದು 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 56,710 ರೂ. ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ 5,67,100 ಆಗಿದೆ. ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 24 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 61,860 ರೂ. ಆಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ 6,18,600 ಆಗಿದೆ.

The price of gold in the country is increasing due to the daily decrease in the stock market of the country
Image Credit: shopb

ಚಿನ್ನದ ಬೆಲೆಯ ಏರಿಕೆಗೆ ಕಾರಣ
ಚಿನ್ನದ ಬೆಲೆಯಲ್ಲಿನ ಏರಿಕೆಯು ಆಭರಣ ಪ್ರಿಯರನ್ನು ನಿರಾಶೆಗೊಳಿಸುತ್ತಿದೆ. ಚಿನ್ನದ ಬೆಲೆಯಲ್ಲಿನ ನಿರಂತರ ಏರಿಕೆಯ ಕಾರಣ ಏನಿರಬಹುದು ಎನ್ನುವ ಬಗ್ಗೆ ತಿಳಿಯೋಣ. ದೇಶದ ಷೇರು ಮಾರುಕಟ್ಟೆಯಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದೆ ಅನ್ನುವುದು ತಜ್ಞರ ಅಭಿಪ್ರಾಯ ಆಗಿದೆ.

ಅದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯ ರೀತಿಯಲ್ಲಿ ಏರಿಕೆ ಆಗುತ್ತಿರುವ ಕಾರಣ ಭಾರತದಲ್ಲಿ ಕೂಡ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದನ್ನ ನಾವು ಗಮನಿಸಬಹುದು.

Join Nadunudi News WhatsApp Group

After the increase in the number of people investing in gold, the price of gold in the country has increased
Image Credit: shopb

ಅದೇ ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಕೂಡ ಪ್ರತಿನಿತ್ಯ ಏರಿಕೆಯಾದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಅಧಿಕವಾಗಿದೆ. ದೇಶದಲ್ಲಿ ಚಿನ್ನದ ಬೆಲೆ 5600 ರೂಪಾಯಿಯ ಗಡಿಯನ್ನ ದಾಟಿದ ಕಾರಣ ದೇಶದಲ್ಲಿ ಚಿನ್ನದ ವಹಿವಾಟು ಕೂಡ ಕುಸಿತವಾಗಿದೆ. 2024 ರ ಅವಧಿಯಲ್ಲಿ ಚಿನ್ನದ ಬೆಲೆ 6,000 ರೂಪಾಯಿ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group