Lower Berth: ರೈಲು ಪ್ರಯಾಣ ಮಾಡುವ ಎಲ್ಲರಿಗೂ ಇಂದಿನಿಂದ ಹೊಸ ನಿಯಮ, ಕೆಳಗಿನ ಸೀಟ್ ಇಂತವರಿಗೆ ಮಾತ್ರ.
ಲೋವರ್ ಬರ್ತ್ ಸೀಟ್ ಮೇಲೆ ಇನ್ನೊಂದು ನಿಯಮ ಹೊರಡಿಸಿದ ಇಂಡಿಯನ್ ರೈಲ್ವೆ.
Lower Seat Reservation: ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇನ್ನು Indian Railway ಪ್ರಯಾಣಿಕರಿಗಾಗಿ ಸಾಕಷ್ಟು ಸೌಲಭ್ಯವನ್ನು ನೀಡುತ್ತಿದೆ. ರೈಲು ಪ್ರಯಾಣವು ಆರಾಮದಾಯಕ ಹಾಗೂ ಹೆಚ್ಚು ಸುರಕ್ಷಿತವಾಗಿರುವ ಕಾರಣ ಹೆಚ್ಚಿನ ಜನರು ರೈಲು ಪ್ರಯಾಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ರೈಲು ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಹೆಚ್ಚಿನ ಅನುಕೂಲಗಳನ್ನು ನೀಡುತ್ತಲೇ ಇರುತ್ತದೆ.
ರೈಲ್ವೆ ಇಲಾಖೆ ಮಹತ್ವದ ನಿರ್ಧಾರ
ಪ್ರಯಾಣಿಕರಿಗಾಗಿ ರೈಲುಗಳಲ್ಲಿ ಊಟ, ತಿಂಡಿ, ನಿದ್ದೆ ಯಾವುದಕ್ಕೂ ತೊಂದರೆ ಆಗಬಾರದು ಎಂದು ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಇನ್ನು ರೈಲುಪ್ರಯಾಣದಲ್ಲಿ ಅಂಗವಿಕರು ಹೆಚ್ಚು ಪ್ರಯಾಣ ಮಾಡಲು ಬಯಸುತ್ತಾರೆ. ಏಕೆಂದರೆ ರೈಲುಗಳಲ್ಲಿ ಅಂಗವಿಕಲರಿಗಾಗಿ ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತದೆ. ಇದೀಗ ಅಂಗವಿಕಲರ ರೈಲ್ವೆ ಪ್ರಯಾಣವನ್ನು ಇನ್ನಷ್ಟು ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಇನ್ನುಮುಂದೆ ಸಾಮಾನ್ಯ ಪ್ರಯಾಣಿಕರು ಈ ಆಸನಗಳನ್ನು ಬುಕ್ ಮಾಡುವಂತಿಲ್ಲ
ಸಾಮಾನ್ಯವಾಗಿ ರೈಲು ಪ್ರಯಾಣಿಕರು ತಮ್ಮ ಅನುಕೂಲಕ್ಕಾಗಿ ಪ್ರಯಾಣದ ಮುಂಚಿತವಾಗಿಯೇ ಸೀಟ್ ಗಳನ್ನೂ ಕಾಯ್ದಿರಿಸುತ್ತಾರೆ. ಇನ್ನು ಪ್ರಯಾಣಿಕರು ಆರಾಮದಾಯಕ ಆಸನಗಳನ್ನು ಬುಕ್ ಮಾಡಲು ಇಷ್ಟಪಡುತ್ತಾರೆ. ಆರಾಮದಾಯ ಆಸನಗಳಲ್ಲಿ Lower Berth ಅಥವಾ Side lower berth ಹೆಚ್ಚಿನ ಜನರ ಆಯ್ಕೆಯಾಗಿರುತ್ತದೆ. ಆದರೆ ರೈಲ್ವೆ ಹೊಸ ನಿಯಮದ ಪ್ರಕಾರ ಇನ್ನುಮುಂದೆ ನೀವು ಈ ಸಿಟಗಳನ್ನು ಬುಕ್ ಮಾಡುವಂತಿಲ್ಲ. ಲೋವರ್ ಬರ್ತ್ ಆಸನವನ್ನು ರೈಲ್ವೆ ಇಲಾಖೆ ಕೆಲ ವರ್ಗದವರಿಗೆ ಮೀಸಲಿರಿಸಿದೆ.
ಲೋವರ್ ಬರ್ತ್ ನಲ್ಲಿ ಪ್ರಯಾಣಿಸುವವರಿಗೆ ಹೊಸ ನಿಯಮ
ರೈಲ್ವೆ ಇಲಾಖೆಯು ಅಂಗವಿಕಲರ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು ಹೊಸ ಸೌಲಭ್ಯವನ್ನು ನೀಡುತ್ತಿದೆ. ರೈಲಿನ ಕೆಳಗಿನ ಬರ್ತ್ ಅನ್ನು ಅಂಗವಿಕರು ಅಥವಾ ದೈಹಿಕ ವಿಕಲಚೇತನರಿಗೆ ಮೀಸಲಿರಿಸಿದೆ. ರೈಲಿನಲ್ಲಿ ಲೋವರ್ ಬರ್ತ್ ನಲ್ಲಿ ಇನ್ನುಮುಂದೆ ಅಂಕವಿಕಲರು ಮಾತ್ರ ಪ್ರಯಾಣಿಸಬಹುದಾಗಿದೆ. ನಾಲ್ಕು ಸೀಟುಗಳು, 2 ಕೆಳಭಾಗದ 2 ಮಧ್ಯದ ಸೀಟುಗಳು, ಥರ್ಡ್ ಎಸಿಯಲ್ಲಿ ಎರಡು ಸೀಟುಗಳು, ಎಸಿ 3 ಎಕಾನಮಿಯಲ್ಲಿ ಎರಡು ಸೀಟುಗಳನ್ನು ಸ್ಲೀಪರ್ ಕ್ಲಾಸ್ ನಲ್ಲಿ ಅಂಗವಿಕಲರಿಗೆ ಮೀಸಲಿಡಲಾಗಿದೆ.