Railway Penalty: ಇನ್ಮುಂದೆ ರೈಲಿನಲ್ಲಿ ಈ ತಪ್ಪು ಮಾಡಿದರೆ ಕಟ್ಟಬೇಕು 1000 ರೂ ದಂಡ, ಇನ್ನುಮುಂದೆ ರೈಲ್ವೆ ಕಾನೂನು ಕಾರಿಗೆ.

ರೈಲು ಪ್ರಯಾಣದ ಸಮಯದಲ್ಲಿ ಈ ತಪ್ಪು ಮಾಡಿದರೆ 1000 ರೂ ದಂಡ ಖಚಿತ

Indian Railway Penalty Rules: ಪ್ರತಿನಿತ್ಯ ಕೋಟ್ಯಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೇಯು ಪ್ರಯಾಣಿಕರಿಗಾಗಿ ಹಲವು ನಿಯಮಗಳನ್ನು ಮತ್ತು ಹೊಸ ಸೌಲಭ್ಯಗಳನ್ನು ತರುತ್ತದೆ. ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್(Ticket) ಖರೀದಿಸುವುದು ಅವಶ್ಯಕ.

ಕೇವಲ ಟಿಕೆಟ್ ವಿಚಾರಕ್ಕೆ ಮಾತ್ರವಲ್ಲದೆ ರೈಲಿನಲ್ಲಿ ಇನ್ನು ಹಲವು ನಿಯಮಗಳಿವೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಭಾರತೀಯ ರೈಲ್ವೆಯ ಕೆಲವು ಪ್ರಮುಖ ನಿಯಮಗಳನ್ನು ತಿಳಿದಿರಬೇಕು. ಈ ನಿಯಮಗಳನ್ನು ಅನುಸರಿಸದಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ.

Indian Railway Penalty Rules
Image Credit: Curlytales

ಟಿಕೆಟ್ ಇಲ್ಲದೆ ಪ್ರಯಾಣಿಸುದರ ಜೊತೆಗೆ ಟಿಕೆಟ್ ಗೆ ಸಂಬಂಧಿಸಿದ ಇನ್ನಿತರ ನಿಯಮಗಳು

ರೈಲ್ವೆ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ, ಅವನಿಗೆ ಗರಿಷ್ಠ 1000 ರೂ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ಪ್ರಯಾಣಿಕನು ಬೇರೆ ಕೋಚ್‌ನ ಟಿಕೆಟ್ ತೆಗೆದುಕೊಂಡು ಇನ್ಯಾವುದೋ ಬೇರೆ ಕೋಚ್‌ನಲ್ಲಿ ಪ್ರಯಾಣಿಸಿದರೆ. ನಂತರ ಟಿಕೆಟ್ ನಡುವಿನ ವ್ಯತ್ಯಾಸವನ್ನು ವಿಧಿಸಲಾಗುತ್ತದೆ. ಇದರಲ್ಲಿ ಹೆಚ್ಚುವರಿ ಶುಲ್ಕವನ್ನು TTE ವಿಧಿಸಬಹುದು. ಒಬ್ಬ ಪ್ರಯಾಣಿಕನು ಸ್ಲೀಪರ್ ಕೋಚ್ ಟಿಕೆಟ್ ತೆಗೆದುಕೊಂಡು ಎಸಿ ಕೋಚ್‌ ನಲ್ಲಿ ಪ್ರಯಾಣಿಸುತ್ತಿದ್ದರೆ ಆ ವ್ಯಕ್ತಿ ಎರಡು ಟಿಕೆಟ್‌ಗಳ ನಡುವಿನ ವ್ಯತ್ಯಾಸವನ್ನು ಪಾವತಿಸಬೇಕಾಗುತ್ತದೆ.

ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸುವಂತಿಲ್ಲ

Join Nadunudi News WhatsApp Group

ಮದ್ಯ ಸೇವಿಸಿ ರೈಲಿನಲ್ಲಿ ಪ್ರಯಾಣಿಸಿದರೆ ಆತನಿಗೆ 500 ರೂ. ದಂಡ ಹಾಗು ಕುಡಿದ ಅಮಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಬಹುದು.

Indian Railway Rules
Image Credit: Business League

ರೈಲಿನಲ್ಲಿ ಧೂಮಪಾನ ಮಾಡಿದರೆ ದಂಡ ಕಟ್ಟಬೇಕು

ರೈಲಿನಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಧೂಮಪಾನ ಮಾಡಿ ಸಿಕ್ಕಿಬಿದ್ದರೆ 200 ರೂಪಾಯಿ ದಂಡ ತೆರಬೇಕಾಗುತ್ತದೆ.

ಗುರುತಿನ ಚೀಟಿ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುವಂತಿಲ್ಲ

ಒಬ್ಬ ವ್ಯಕ್ತಿಯು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಪ್ರಯಾಣದ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊಂಡೊಯ್ಯದಿದ್ದರೆ,ಆ ವ್ಯಕ್ತಿಯನ್ನು TTE ಟಿಕೆಟ್ ಇಲ್ಲದ ಪ್ರಯಾಣಿಕ ಎಂದು ಪರಿಗಣಿಸಬಹುದು ಮತ್ತು ದಂಡ ವಿಧಿಸಬಹುದು.

Railway Act and Punishment
Image Credit: News 18

ವಿನಾಕಾರಣ ಚೈನ್ ಎಳೆಯುವುದು

ಯಾವುದೇ ತುರ್ತು ಕಾರಣವಿಲ್ಲದೆ ಅಥವಾ ಯಾವುದೇ ಸರಿಯಾದ ಕಾರಣವಿಲ್ಲದೆ ಯಾರಾದರೂ ರೈಲಿನ ಚೈನ್ ಅನ್ನು ಎಳೆದರೆ, ಅಂತಹ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಲಾಗುತ್ತದೆ. ಅವನಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ರೂ 1,000 ದಂಡ ಅಥವಾ ಎರಡನ್ನೂ ವಿಧಿಸಬಹುದು. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವವರು ಇಂತಹ ವಿಚಾರಗಳನ್ನೆಲ್ಲ ತಿಳಿದಿರುವುದು ಮುಖ್ಯ ಆಗಿದೆ.

Join Nadunudi News WhatsApp Group