IRCTC Facility: ರೈಲ್ವೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಟಿಕೆಟ್ ಬುಕ್ ಮಾಡುವ ಮುನ್ನ ನಿಯಮ ತಿಳಿದುಕೊಳ್ಳಿ

ಆಹಾರಗಳ ವಿತರಣೆ ನಿಯಮದಲ್ಲಿ ಬದಲಾವಣೆ ಮಾಡಿದ ಭಾರತೀಯ ರೈಲ್ವೆ

IRCTC New Service: ಪ್ರಯಾಣಕ್ಕಾಗಿ ಜನರು ಮೊದಲು ರೈಲು ಪ್ರಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇನ್ನಿತರ ವಿಧಾನದ ಪ್ರಯಾಣಕ್ಕೆ ಹೋಲಿಸಿದರೆ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ.

ಇನ್ನು ರೈಲುಗಳಲ್ಲಿ ಕೂಡ ಪ್ರಯಾಣಿಕರಿಗಾಗಿಗೇ ಸಾಕಷ್ಟು ಅನುಕೂಲವಿರುತ್ತದೆ. ರೈಲ್ವೆ ಇಲಾಖೆಯು ಪ್ರಯಾಣಿಕರಿಗೆಂದೇ ಹಲವು ಸೌಲಭ್ಯವನ್ನು ನೀಡಿರುತ್ತದೆ. ಆದರೆ ರೈಲ್ವೆ ಇಲಾಖೆಯು ನೀಡುವ ಎಲ್ಲಾ ಸೌಲಭ್ಯದ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಿಳಿದಿರುವುದಿಲ್ಲ. ಇದೀಗ ನಾವು ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ನೀಡುತ್ತಿರುವ ಹೊಸ ಸೌಲಭ್ಯದ ಬಗ್ಗೆ ತಿಳಿಯೋಣ.

IRCTC New Facility
Image Credit: Businesstoday

ರೈಲ್ವೆ ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ಸದ್ಯ IRCTC ರೈಲ್ವೆ ನಿಯಮದಲ್ಲಿ ಹೊಸ ಹೊಸ ಬದಲಾವಣೆಯನ್ನು ಮಾಡಿದೆ. ಪ್ರಯಾಣಿಕರು ರೈಲ್ವೆಯಲ್ಲಿ ಆಹಾರವನ್ನು ಪಡೆಯಲು ಸರಳ ವಿಧಾನವನ್ನು IRCTC ಪರಿಚಯಿಸಿದೆ. ನೀವು ಪ್ರಯಾಣಿಸಬೇಕಾದರೆ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಊಟದ ಆಯ್ಕೆಯನ್ನು ಆರಿಸಲು ಮರೆತಿದ್ದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. IRCTC ತನ್ನ ಅಪ್ಲಿಕೇಶನ್‌ ನಲ್ಲಿ ಪ್ರಮುಖವಾದ ನವೀಕರಣವನ್ನು ಮಾಡಿದೆ.

ಟಿಕೆಟ್ ಬುಕ್ ಮಾಡುವ ಮುನ್ನ ನಿಯಮ ತಿಳಿದುಕೊಳ್ಳಿ
ಈಗ ನೀವು ಊಟದ ಆಯ್ಕೆಯಿಲ್ಲದೆ ಟಿಕೆಟ್ ಕಾಯ್ದಿರಿಸಿದರೆ, ನೀವು ಆಹಾರದ ಸೌಲಭ್ಯವನ್ನು ಪಡೆದುಕೊಳ್ಳಬಹುದು. IRCTC ಅಪ್ಲಿಕೇಶನ್‌ ನಲ್ಲಿ ಈ ನವೀಕರಣವನ್ನು ಮಾಡಿದೆ. ಇಷ್ಟೇ ಅಲ್ಲ, ನೀವು ಟಿಕೆಟ್ ಬುಕ್ ಮಾಡಿದರೂ, ನೀವು ಎಡಿಟ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ಅದರ ಸಹಾಯದಿಂದ ನೀವು ಕೊನೆಯವರೆಗೂ ನಿಮ್ಮ ವೈಶಿಷ್ಟ್ಯಗಳನ್ನು ಸೇರಿಸಬಹುದು ಅಥವಾ ರದ್ದುಮಾಡಬಹುದು.

IRCTC New Service
Image Credit: Economictimes

ಈ ಹಿಂದೆ ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರಿಗೆ ಆಹಾರವನ್ನು ಸೇರಿಸುವ ಆಯ್ಕೆ ಇರಲಿಲ್ಲ. ಆದರೆ ಈಗ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಆ್ಯಪ್‌ ನಲ್ಲಿ ಈ ಸೆಟ್ಟಿಂಗ್‌ ಗಳನ್ನು ಮಾಡಬಹುದು. ಈ ಅಪ್ಲಿಕೇಶನ್‌ ನಲ್ಲಿ, ಏಜೆಂಟ್‌ ನಿಂದ ಪ್ರತಿ ಪ್ರಯಾಣಿಕರು ಬದಲಾವಣೆಗಳನ್ನು ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ಈ ಸೌಲಭ್ಯವನ್ನು ನೀಡಲು ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಸೌಲಭ್ಯಗಳನ್ನು ಒದಗಿಸಲು IRCTC Zomato, Swigy, PizzaaHut, Eat Sure ಸೇರಿದಂತೆ ಹಲವು ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Join Nadunudi News WhatsApp Group

Join Nadunudi News WhatsApp Group