Railway Recruitment: ಡಿಪ್ಲೋಮ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ 8000 ಹುದ್ದೆಗೆ ಅರ್ಜಿ ಆಹ್ವಾನ, 45000 ರೂ ಸಂಬಳ

ರೈಲ್ವೆ ಇಲಾಖೆಯಲ್ಲಿ 8,000 ಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ.

Indian Railway Recruitment 2024: ಭಾರತೀಯ ರೈಲ್ವೆ (Indian Railway) ಇಲಾಖೆಯು ಆಗಾಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡುತ್ತಿರುತ್ತದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳು ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ನೀರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ.

ರೈಲ್ವೆ ನೇಮಕಾತಿ ಮಂಡಳಿ ಹೆಚ್ಚಿನ ಖಾಲಿ ಇರುವ ಭರ್ತಿ ಮಾಡಿದೆ. ನಿರುದ್ಯೋಗಿಗಳು ಈ ಬಾರಿ ರೈಲ್ವೆ ಇಲಾಖೆ ನೀಡುತ್ತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹುದ್ದೆಯ ವಿವರ, ಅರ್ಜಿ ಸಲ್ಲಿಕೆ, ವಯೋಮಿತಿ ಸೇರಿದಂತೆ ಹುದ್ದೆಗೆ ಆಯ್ಕೆಯಾದರೆ ಎಷ್ಟು ವೇತನ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Indian Railway Recruitment 2024
Image Credit: Studytechies

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ
ರೈಲ್ವೇ ನೇಮಕಾತಿ ಮಂಡಳಿ (RRB) 8,000 ಕ್ಕೂ ಹೆಚ್ಚು ಟ್ರಾವೆಲ್ ಟಿಕೆಟ್ ಎಕ್ಸಾಮಿನರ್ (TTE) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ, ಅರ್ಜಿ ಸಲ್ಲಿಸುವ ದಿನಾಂಕವನ್ನು ಪ್ರಕಟಿಸಿಲ್ಲ. ಮೇ ತಿಂಗಳಿನಿಂದ ಇದು ಸಾಧ್ಯವಾಗಿದ್ದರೂ ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ಆಸಕ್ತ ಅಭ್ಯರ್ಥಿಗಳು ಈ ನೇಮಕಾತಿಗೆ ಸೇರಲು ಭಾರತೀಯ ರೈಲ್ವೆ ವೆಬ್‌ ಸೈಟ್ Indianrailways.gov.in ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ರೈಲ್ವೆ ಇಲಾಖೆಯಲ್ಲಿ 8,000 ಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ
ರೈಲ್ವೆ ಇಲಾಖೆಯಲ್ಲಿ ಪ್ರಯಾಣ ಟಿಕೆಟ್ ಪರೀಕ್ಷಕ ಅಂದರೆ TTE 8000 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯು ಮೇ 2024 ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಟ ವಯಸ್ಸು 28 ವರ್ಷ ಆಗಿರಬೇಕು. ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹುದ್ದೆಯ ವೇತನವು ರೂ. 27,400 ರಿಂದ ರೂ. 45,600 ವರೆಗೆ ಇರುತ್ತದೆ.

Indian Railway Recruitment
Image Credit: Timesnownews

ಅರ್ಜಿ ಸಲ್ಲಿಕೆಗೆ ಶೈಕ್ಷಣಿಕ ಅರ್ಹತೆ ಏನು…?
•ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

Join Nadunudi News WhatsApp Group

•ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯಾ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

•ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ 500 ರೂ. ಹಾಗೂ SC/ST ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ನಿಗಪಡಿಪಡಿಸಲಾಗಿದೆ.

•ಭಾರತೀಯ ರೈಲ್ವೆಯ ಅಧಿಕೃತ ವೆಬ್‌ ಸೈಟ್‌ Indianrailways.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

indian railways jobs list
Image Credit: Zeebiz

Join Nadunudi News WhatsApp Group