Waiting Ticket: ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಬದಲಾವಣೆ ಮಾಡಿದ ರೈಲ್ವೆ ಇಲಾಖೆ, ಕಟ್ಟಬೇಕು ದಂಡ

ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಬದಲಾವಣೆ ಮಾಡಿದ ರೈಲ್ವೆ ಇಲಾಖೆ

Indian Railways Waiting List Ticket Rules: ರೈಲು ಪ್ರಯಾಣಕ್ಕೆ ಜನರು ಮುಗಿಬೀಳುತ್ತಿದ್ದಾರೆ ಯಾಕೆಂದರೆ ರೈಲು ಸೇವೆ ಈಗ ಹೆಚ್ಚಾಗಿ ಎಲ್ಲಾ ಕಡೆ ಇದೇ, ಅಷ್ಟೇ ಅಲ್ಲದೆ ಈಗ ಮೊದಲಿನಿಗಿಂತ ಉತ್ತಮ ಸೌಲಭ್ಯವನ್ನು ರೈಲು ಇಲಾಖೆ ನೀಡುತ್ತಿದ್ದು, ಆದ್ದರಿಂದ ಜನರು ರೈಲ್ವೆ ಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.

ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚಾಗುತ್ತಿರಲು ಇನ್ನೊಂದು ಮುಖ್ಯ ಕಾರಣವೇನೆಂದರೆ ಟಿಕೆಟ್ ದರ. ಬಸ್ ಗಳಿಗೆ ಹೋಲಿಸಿದರೆ ರೈಲಿನಲ್ಲಿ ಟಿಕೆಟ್ ದರ ಕಡಿಮೆ ಇರುವುದರಿದ ಹಾಗು ರೈಲಿನಲ್ಲಿ ಊಟ, ತಿಂಡಿ ಜೊತೆಗೆ ಮೂಲ ಸೌಕರ್ಯ ಗಳು ಇರುವುದರಿಂದ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟ ಪಡುತ್ತಿದ್ದಾರೆ.

Indian Railways Waiting List Ticket Rules
Image Credit: India Today

ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವವರಿಗೆ ಹೊಸ ನಿಯಮ

ರೈಲು ಪ್ರಯಾಣದಲ್ಲಿ ಬಹಳ ದೊಡ್ಡ ಸಮಸ್ಯೆ ಅಂದರೆ ಟಿಕೆಟ್ ಖರೀದಿಸುವುದು. ಜನಸಂಖ್ಯೆ ಹೆಚ್ಚಿರುವುದರಿಂದ ಎಲ್ಲರಿಗೂ ಟಿಕೆಟ್ ದೊರೆಯುವುದಿಲ್ಲ ಹೆಚ್ಚಿನವರಿಗೆ ಖರೀದಿಸಿದ ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿ ಇರುತ್ತದೆ. ಇ-ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಅದು ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ. ಆದರೆ ಕೌಂಟರ್‌ನಿಂದ ಟಿಕೆಟ್ ಮಾಡಿಸಿದರೆ ಅದು ರದ್ದಾಗುವುದಿಲ್ಲ. ಈ ಕಾರಣದಿಂದಲೇ ವೈಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಕೊಂಡು ಜನರು ರಿಸರ್ವ್ದ್ ಬೋಗಿಯಲ್ಲಿ ಪ್ರಯಾಣಿಸಲು ಆರಂಭಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.

ರಿಸರ್ವ್ದ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಹೊಂದಿರುವವರ ವಿರುದ್ಧ ದೂರು ದಾಖಲಿಸಬಹುದು

Join Nadunudi News WhatsApp Group

ರಿಸರ್ವ್ದ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಹಿಡಿದುಕೊಂಡು ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣಿಕರ ಬಗ್ಗೆ ಇದೀಗ ದೂರು ಸಲ್ಲಿಸುವ ಹೊಸ ಆಪ್ಲಿಕೆಶನ್ ತಯಾರಾಗುತ್ತಿದೆ. ರೈಲ್ವೇ ಮಂಡಳಿಯ ಪ್ರಕಾರ, ವೈಟಿಂಗ್ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ ಎಂಬ ದೂರುಗಳು ಪದೇ ಪದೇ ಬರುತ್ತಿವೆ. ಇದರಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಪ್ರಸ್ತುತ, ಈ ಅಪ್ಲಿಕೇಶನ್‌ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಯಶಸ್ವಿ ಪ್ರಯೋಗದ ನಂತರ ಪ್ರಯಾಣಿಕರು ಅದನ್ನು Google ಮತ್ತು Apple Play ಅಪ್ಲಿಕೇಶನ್ ಮೂಲಕ ಇಲ್ಲಿ ದೂರನ್ನು ದಾಖಲಿಸಬಹುದು.

Indian Railway New Rules
Image Credit: Business League

ಈ ಅಪ್ಲಿಕೇಶನ್ ಕೆಲಸ ಮಾಡುವ ವಿಧಾನ

ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ, ಟಿಟಿಇ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳ ಡೇಟಾವನ್ನು ಹ್ಯಾಂಡ್ ಹೆಲ್ಡ್ ಡಿವೈಸ್ ಮೂಲಕ ಫೀಡ್ ಮಾಡುತ್ತಾರೆ. ಪ್ರಯಾಣಿಕರು ಆ್ಯಪ್‌ನಲ್ಲಿ ರೈಲು ಸಂಖ್ಯೆ ಮತ್ತು ಕೋಚ್ ಅನ್ನು ಫೀಡ್ ಮಾಡುತ್ತಾರೆ. ಇದರ ನಂತರ, ಬೋಗಿಯ ಸೀಟ್ ಬರ್ತ್ ರಿಸರ್ವೇಶನ್ ಲೇಔಟ್ ಕಾಣಿಸುತ್ತದೆ. ಬೋಗಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಕಾಣಿಸಿಕೊಂಡರೆ, ಪ್ರಯಾಣಿಕರು ಆ್ಯಪ್ ಮೂಲಕ ದೂರು ನೀಡಲು ಸಾಧ್ಯವಾಗುತ್ತದೆ.

ಆಪ್ ನಲ್ಲಿ ದೂರು ದಾಖಲಾದ ತಕ್ಷಣ ಸಂಪೂರ್ಣ ಮಾಹಿತಿಯು ಸ್ವಯಂಚಾಲಿತವಾಗಿ ಸೆಂಟ್ರಲೈಸ್ಡ್ ಸಿಸ್ಟಮ್ ಗೆ ಹೋಗುತ್ತದೆ. ಇಲ್ಲಿಂದ TTEಗೆ ಅಲರ್ಟ್ ಬರುತ್ತದೆ. ದೂರನ್ನು ಸ್ವೀಕರಿಸಿದ ನಂತರ, ಟಿಟಿಇ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಸಂಬಂಧಪಟ್ಟ ಕೋಚ್‌ನಲ್ಲಿರುವ ರಿಸರ್ವ್ ಕೋಚ್‌ನಿಂದ ಹೊರಗೆ ಕಳುಹಿಸುತ್ತಾರೆ. ಯಾವುದೇ ಸಮಸ್ಯೆ ಎದುರಾದರೆ ಅವರು ಆರ್‌ಪಿಎಫ್‌ನ ಸಹಾಯ ಪಡೆಯುತ್ತಾರೆ.

Join Nadunudi News WhatsApp Group