T20 2024: 2024 ರ ವಿಶ್ವಕಪ್ ಭಾರತದ ತಂಡಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಆಟಗಾರ, ರೋಹಿತ್ ಪಡೆಗೆ ಬಂತು ಆನೆಬಲ.

ಭಾರತದ ತಂಡಕ್ಕೆ ಎಂಟ್ರಿ ಕೊಟ್ಟ ಇನ್ನೊಬ್ಬ ಬಲಿಷ್ಠ ಆಟಗಾರ, T20 ವಿಶ್ವಕಪ್ ಗೆ ಭಾರತದ ರೆಡಿ

Indian Team For T20 World Cup 2024: ಸದ್ಯ T20 ಪಂದ್ಯ ಕ್ರಿಕೆಟ್ (Cricket) ಪ್ರಿಯರ ಗಮನ ಸೆಳೆಯುತ್ತಿದೆ. ವಿವಿಧ ತಂಡಗಳ ನಡುವೆ ಟಿ20 ಪಂದ್ಯ ರೋಚಕವಾಗಿದೆ. ಇನ್ನು IND v/s AFG ನಡುವೆ ಎರಡನೇ T20 ಪಂದ್ಯ ನೆರವೇರಿದೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ನಡೆದಿದ್ದು ಈ ಪಂದ್ಯ ರೋಚಕ ಹಂತವನ್ನ ತಲುಪಿದ್ದು ಭಾರತ ಕೊನೆಯ ಗಳಿಗೆಯಲ್ಲಿ ಜಯ ಗಳಿಸಿದೆ ಎಂದು ಹೇಳಬಹುದು.

ಮುಂದಿನ ಪಂದ್ಯ ಜನವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನು 2024 ರ ವಿಶ್ವಕಪ್ ಗೆ ಭಾರತದ ತಂಡಕ್ಕೆ ಈ ಸ್ಟಾರ್ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಈ ಆಟಗಾರನ ಎಂಟ್ರಿ ಇಂದಾಗಿ ಕ್ರಿಕೆಟ್ ಅಭಿಮಾನಿಗಳು ಸಂಸತದಲ್ಲಿದ್ದಾರೆ. ಈ ಆಟಗಾರನ ಆಯ್ಕೆಯಿಂದ ಭಾರತದ ತಂಡ ಇನ್ನಷ್ಟು ಬಲಿಷ್ಠವಾಗಿದೆ ಎಂದು ಹೇಳಬಹುದು. ಹಾಗಾದರೆ ಆ ಆಟಗಾರ ಯಾರು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ 

ICC T20 World Cup 2024 Latest News
Image Credit: NDTV

ರೋಹಿತ್ ಪಡೆಗೆ ಬಂತು ಆನೆಬಲ
ಅಫ್ಘಾನ್ ತಂಡದ ವಿರುದ್ಧ ಮೊದಲ ಎರಡನೆಯ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮನ್ ಗಳಾದ ಯಶವ್ ಜೈಸ್ವಾಲ್ 68 ರನ್ ಹಾಗೂ ಶಿವಂ ದುಬೆ 63 ರನ್ ಗಳಿಸಿ ಅರ್ಧಶತಕ ಗಳಿಸಿದರು. ಭಾರತ 15.4 ಓವರ್‌ ಗಳಲ್ಲಿ 4 ವಿಕೆಟ್‌ ಗೆ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಅಕ್ಷರ್ ಪಟೇಲ್ ತಮ್ಮ ಅಮೋಘ ಬೌಲಿಂಗ್‌ ನಿಂದ ಪ್ರಭಾವಿತರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆದರೆ, ಶಿವಂ ದುಬೆ ಮತ್ತೊಮ್ಮೆ ತಮ್ಮ ಅಮೋಘ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಅವರು ಕೇವಲ 32 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಬೌಲಿಂಗ್ ನಲ್ಲೂ ಒಂದು ವಿಕೆಟ್ ಪಡೆದರು. ಮೊದಲ T20I ನಲ್ಲಿ ಶಿವಂ ದುಬೆ 60 ರನ್‌ ಗಳ ಅಜೇಯ ಅರ್ಧಶತಕದೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡು ಓವರ್ ಬೌಲ್ ಮಾಡಿದ ಶಿವಂ ದುಬೆ ಕೇವಲ 9 ರನ್ ನೀಡಿ ಒಂದು ವಿಕೆಟ್ ಪಡೆದರು. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಈ ಪ್ರದರ್ಶನದಿಂದಾಗಿ ಹಾರ್ದಿಕ್ ಪಾಂಡ್ಯ ಸ್ಥಾನ ಬಿಕ್ಕಟ್ಟಿನಲ್ಲಿದೆ ಎನ್ನಲಾಗಿದೆ.

rohit sharma retirement t20
Image Credit: abplive

2024 ರ ವಿಶ್ವಕಪ್ ಭಾರತದ ತಂಡಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಆಟಗಾರ
ಪದೇ ಪದೇ ಫಿಟ್‌ ನೆಸ್ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಬದಲಿಗೆ ಶಿವಂ ದುಬೆ ಅವರನ್ನು ಸಿದ್ಧಗೊಳಿಸಬೇಕು ಎಂದು ಮಾಜಿ ಕ್ರಿಕೆಟಿಗರು ಈಗಾಗಲೇ ಹೇಳುತ್ತಿದ್ದಾರೆ. ಗೌತಮ್ ಗಂಭೀರ್ ಈಗಾಗಲೇ ಶಿವಂ ದುಬೆ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಗಾಯದ ಸಮಸ್ಯೆಯಿಂದ ಏಕದಿನ ವಿಶ್ವಕಪ್‌ ನಿಂದ ಹೊರಗುಳಿದಿದ್ದರು. ಆಗ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಆಟಗಾರ ಇರಲಿಲ್ಲ. ಆದರೆ ರೋಹಿತ್ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಬದಲಿಗೆ ಶಿವಂ ದುಬೆ ಅವರನ್ನು ಆಯ್ಕೆ ಮಾಡಿದ್ದಾರೆ.

Join Nadunudi News WhatsApp Group

ಅಲ್ಲದೇ ರೋಹಿತ್ ಅಭಿಮಾನಿಗಳು ಕೂಡ ಶಿವಂ ದುಬೆ ಆಟದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಫಿನಿಶರ್ ಆಗಿರುವ ಶಿವಂ ಬ್ಯಾಟಿಂಗ್ ಕ್ರಮಾಂಕದಲ್ಲಿ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದಾರೆ. ಜೊತೆಗೆ ಶಿವಂ ದುಬೆಯಿಂದ ರೋಹಿತ್ ಗೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಶಿವಂ ದುಬೆಗೆ ಅವಕಾಶ ನೀಡುವ ಮೂಲಕ ಹಾರ್ದಿಕ್ ಗೆ ರೋಹಿತ್‌ ಕೌಂಟರ್‌ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

Join Nadunudi News WhatsApp Group