Indira Canteen: ಜನವರಿಯಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ ಈ ಆಹಾರ, ಕಡಿಮೆ ಬೆಲೆಗೆ ಇಂದು ಆನಂದಿಸಿ

ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಬದಲಾವಣೆ ಮಾಡಿದ ಸರ್ಕಾರ

Indira Canteen Menu Change In 2024: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳು (Indira Canteen) ಬಡ ಜನರ ಹಸಿವನ್ನು ನೀಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿದೆ. ಇಂದಿರಾ ಕ್ಯಾಂಟೀನ್ ಗಳು ಪ್ರಾರಂಭ ಆಗಿ ಹಲವು ವರ್ಷಗಳಾದರೂ ಇನ್ನು ಕೂಡ ಉತ್ತಮ ರೀತಿಯಲ್ಲಿ ನೆಡೆಸಿಕೊಂಡು ಹೋಗಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಭಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ತಾಲೂಕು ಕ್ಷೇತ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಆಗಿದ್ದು, ಈ ಕ್ಯಾಂಟೀನ್ ಗಳ ಮೂಲಕ ಹಸಿವಿನ ದಾಹವನ್ನು ಕಡಿಮೆ ಹಣದ ವೆಚ್ಚದಲ್ಲಿ ನೀಗಿಸಲಾಗುತ್ತಿದೆ. ಈಗ ಇಂತಹ ಇಂದಿರಾ ಕ್ಯಾಂಟೀನ್ ಊಟದ ಮೆನುವಿಗೆ ರಾಗಿ ಮುದ್ದೆ ಊಟವನ್ನು ಸೇರ್ಪಡೆ ಮಾಡಿ ಆಹಾರ ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ.

Indira Canteen Menu Change
Image Credit: Hindustantimes

ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಬದಲಾವಣೆ

ಹಲವು ಜಿಲ್ಲೆಗಳ ಇಂದಿರಾ ಕ್ಯಾಂಟೀನ್ ನಲ್ಲಿ ಸಹಜವಾಗಿ ಅನ್ನ ಸಾಂಬಾರ್ ಹಾಗು ಇನ್ನಿತರ ಆಹಾರವನ್ನು ನೀಡಲಾಗುತ್ತಿತ್ತು. ಸದ್ಯ ಬೆಂಗಳೂರು ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ರೈಸ್‌ಭಾತ್‌, ಉಪ್ಪಿಟ್ಟು, ಅನ್ನ, ಸಾಂಬಾರ್‌ ಮಾತ್ರ ಸಿಗುತ್ತಿದೆ. ಇನ್ನು ಮುಂದಿನ ವರ್ಷ 2024 ರ ಜನವರಿಯಿಂದ ಬೆಂಗಳೂರು ನಗರದ 169 ಇಂದಿರಾ ಕ್ಯಾಂಟೀನ್ ಗಳಲ್ಲಿ ನಿತ್ಯ ರಾಗಿ ಮುದ್ದೆ ಊಟ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಹಿತಿ ನೀಡಿದ್ದು. ಮುಂದಿನ ವರ್ಷದಿಂದ ರಾಗಿ ಮುದ್ದೆ ಊಟವನ್ನು ಮೆನುವಿನಲ್ಲಿ ಸೇರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

Indira Canteen Menu Change In 2024
Image Credit: Vistaranews

ಸಾವಿರಾರು ಜನರ ಹಸಿವನ್ನು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್

Join Nadunudi News WhatsApp Group

ರಾಜ್ಯದಲ್ಲಿಇಂದಿರಾ ಕ್ಯಾಂಟೀನ್ ನಿಂದ ಹಲವಾರು ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ತುಂಬಾನೇ ಸಹಾಯ ಆಗುತ್ತಿದೆ. ಬಹಳ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಇನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಆದರೆ ಇನ್ನಷ್ಟು ಜನರಿಗೆ ಸಹಾಯ ಆಗುತ್ತದೆ. ಅಷ್ಟೇ ಅಲ್ಲದೆ ಬೆಂಗಳೂರು ಮಾತ್ರವಲ್ಲದೇ ಎಲ್ಲಾ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಲಾಗಿದೆ.

Join Nadunudi News WhatsApp Group