Infinix: ಸೆಲ್ಫಿ ಪ್ರಿಯರಿಗಾಗಿ ಬಂತು 108 MP ಕ್ಯಾಮೆರಾ ಹೊಂದಿರುವ ಮೊಬೈಲ್, ಲಕ್ಷಕ್ಕೂ ಅಧಿಕ ಬುಕಿಂಗ್.

ಆಗಸ್ಟ್ 3 ರಂದು ದೇಶದಾದ್ಯಂತ ಬಿಡುಗಡೆಗೊಳ್ಳಲಿದೆ Infinix ಕಂಪನಿಯ ಹೊಸ ಸ್ಮಾರ್ಟ್ ಫೋನ್.

Infinix GT 10 Pro Price And Camera: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ

ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಹೊಸ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಈಗಾಗಲೇ ದೇಶದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ Infinix ಮಾರುಕಟ್ಟೆಯಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಈ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಬಜೆಟ್ ಬೆಲೆಗೆ ಲಭ್ಯವಾಗಲಿದೆ.

Infinix's new smartphone will be released on August 3.
Image Credit: Beebom

Infinix GT 10 Pro ಸ್ಮಾರ್ಟ್ ಫೋನ್ (Infinix GT 10 Pro Smartphone) 
ಇನ್ ಫೀನಿಕ್ಸ್ ಕಂಪನಿ ಆಗಸ್ಟ್ ನಲ್ಲಿ ಹೊಸ ಮಾದರಿಯ Infinix GT 10 Pro ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲಿದೆ. ಆಗಸ್ಟ್ 3 ರಂದು Infinix GT 10 Pro ಸ್ಮಾರ್ಟ್ ಫೋನ್ ದೇಶದಾದ್ಯಂತ ಬಿಡುಗಡೆಗೊಳಲಿದೆ.

ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್ ಫೋನ್ ನ ಬೆಲೆ ಮತ್ತು ಫೀಚರ್ ಬಹಿರಂಗವಾಗಿದೆ. ಕಂಪನಿಯು ತನ್ನ ಹೊಸ ವಿನ್ಯಾಸದ ಸ್ಮಾರ್ಟ್ ಫೋನ್ ಬಗ್ಗೆ ವಿವಿಧ ಮಾಹಿತಿಯನ್ನು ಹಂಚಿಕೊಂಡಿದೆ.

Infinix's new smartphone will be released on August 3.
Image Credit: Telepolis

Infinix GT 10 Pro ಸ್ಮಾರ್ಟ್ ಫೋನ್ ಕ್ಯಾಮರಾ ವಿಶೇಷತೆ
Infinix GT 10 Pro ಸ್ಮಾರ್ಟ್ ಫೋನ್ 120Hz ರಿಫ್ರೆಶ್ ದರದೊಂದಿಗೆ AMOLED ಡಿಸ್ ಪ್ಲೇ ಅನ್ನು ಹೊಂದಿದೆ. ಈ ಫೋನ್ ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Join Nadunudi News WhatsApp Group

108 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ನೀಡಬಹುದಾದ ಕ್ಯಾಮರಾ ಇದರಲ್ಲಿದೆ.ಇನ್ನು ಎರಡು 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮರನ್ನು ಹೊಂದಿದೆ. ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಫೋನ್ ನ ಮುಂಭಾಗದಲ್ಲಿ 32 ಮೇಗಫಿಕ್ಸೆಲ್ ಕ್ಯಾಮರಾವನ್ನು ಅಳವಡಿಸಲಾಗಿದೆ.

Infinix GT 10 Pro ಸ್ಮಾರ್ಟ್ ಫೋನ್ ಬ್ಯಾಟರಿ ಸಾಮರ್ಥ್ಯ
Infinix GT 10 Pro ಸ್ಮಾರ್ಟ್ ಫೋನ್ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸಂವೇದಕವನ್ನು ಹೊಂದಿದ್ದು, MediaTek Dimensity 1300 SoC ಚಿಪ್ ಸೆಟ್ ಅನ್ನು ಪ್ರೊಸೆಸರ್ ಆಗಿ ಬಳಸಲಾಗಿದೆ.

Infinix GT 10 Pro smartphone camera
Image Credit: Mobility

ಈ Infinix GT 10 Pro ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇನ್ನು ಈ ಫೋನ್ ನ ಬೆಳೆಯ ಬಗ್ಗೆ ಹೇಳುವುದಾದರೆ, 20 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ನೀವು ಈ ಫೋನ್ ಅನ್ನು ಖರೀದಿಸಬಹುದಾಗಿದೆ. ಇನ್ನು ಜನಪ್ರಿಯ ಇ ಕಾಮರ್ಸ್ ಅಪ್ಲಿಕೇಶನ್ ಆಗಿರುವ Flipkart ನ ಮೂಲಕ ಕೂಡ ಖರೀದಿಸಬಹುದಾಗಿದೆ.

Join Nadunudi News WhatsApp Group