Infinix Laptop: ಅತೀ ಅಗ್ಗದ ಬೆಲೆಗೆ ಲ್ಯಾಪ್ ಟಾಪ್ ಲಾಂಚ್ ಮಾಡಿದ Infinix, ಮೊಬೈಲ್ ಗಿಂತ ಅಗ್ಗದ ಬೆಲೆಗೆ ಖರೀದಿಸಿ

ಮೊಬೈಲ್ ಗಿಂತ ಕಡಿಮೆ ಬೆಲೆಗೆ ಈಗ ಲ್ಯಾಪ್ ಟಾಪ್ ಖರೀದಿ ಮಾಡಬಹುದು, ವಿದ್ಯಾರ್ಥಿಗೆ ಬೆಸ್ಟ್ ಲ್ಯಾಪ್ ಟಾಪ್

Infinix INBook Y2 Plus Laptop: ಇತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಬಹಳ ಉಪಯೋಗಿ ವಸ್ತು ಆಗಿದೆ. ಉದ್ಯೋಗಿಗಳಿಂದ, ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳವರೆಗೂ ಲ್ಯಾಪ್ಟಾಪ್ ಅವಶ್ಯಕತೆ ಇದೆ. ಅಷ್ಟೇ ಅಲ್ಲದೆ ಬೇಡಿಕೆಯ ಜೊತೆಗೆ ಬೆಲೆಗೇನು ಕಡಿಮೆ ಬಹಳ ದುಬಾರಿಯ ಲ್ಯಾಪ್ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ. ಹಾಗೆಯೆ ಇನ್ಫಿನಿಕ್ಸ್ (Infinix) ತನ್ನ ಬಹುಬೇಡಿಕೆಯ ಲ್ಯಾಪ್ಟಾಪ್ ಗಳನ್ನೂ ರಿಯಾಯಿತಿ ದರದಲ್ಲಿ ನೀಡುತ್ತಿದ್ದು ಅತೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಮಾತ್ರವಲ್ಲದೆ ಇದೀಗ ಲ್ಯಾಪ್‌ಟಾಪ್‌ ವಿಚಾರಕ್ಕೂ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಇನ್ಫಿನಿಕ್ಸ್ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಪಡೆದುಕೊಂಡಿದೆ. ಅದರಂತೆ ಈಗ ಅಗ್ಗದ ಬೆಲೆಯಲ್ಲಿ ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ (Infinix INBook Y2 Plus) ಅನ್ನು ಅನಾವರಣ ಮಾಡಿದೆ.

Infinix INBook Y2 Plus Laptop
Image Credit: Original Source

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ (Infinix INBook Y2 Plus) ರಚನೆ

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ ಲ್ಯಾಪ್‌ಟಾಪ್ 15.6 ಇಂಚಿನ ಆಂಟಿ-ಗ್ಲೇರ್ LCD ಡಿಸ್ಪ್ಲೇಯನ್ನು ಹೊಂದಿದೆ. ಇದು ಪೂರ್ಣ ಎಚ್‌ಡಿ ರೆಸಲ್ಯೂಶನ್ ಬೆಂಬಲ ಮತ್ತು 260 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಈ ಸ್ಲಿಮ್ ಮತ್ತು ಹಗುರವಾಗಿದೆ. ಜೊತೆಗೆ ಇದು ಅಲ್ಯೂಮಿನಿಯಂ ಬಾಡಿಯೊಂದಿಗೆ ಪ್ರೀಮಿಯಂ ನೋಟವನ್ನು ನೀಡಲಿದ್ದು, ಇತ್ತೀಚಿನ ಯುವ ಪೀಳಿಗೆಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಈ ಮೂಲಕ ಯಾವುದೇ ಕಾರ್ಯಗಳನ್ನು ಸುಗಮವಾಗಿ ಮಾಡಬಹುದಾಗಿದೆ. ಈ ಲ್ಯಾಪ್ಟಾಪ್ ಈ ವರ್ಷದ ಆರಂಭದಲ್ಲಿ ಕಂಪನಿಯು ಬಿಡುಗಡೆ ಮಾಡಿದ ಇನ್ಫಿನಿಕ್ಸ್ ಇನ್‌ಬುಕ್ Y1 ಪ್ಲಸ್‌ ಮಾದರಿಯ ಉತ್ತರಾಧಿಕಾರಿಯಾಗಿದೆ.

Infinix INBook Y2 Plus Processor

Join Nadunudi News WhatsApp Group

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ (Intel processor) ನಿಂದ ಕಾರ್ಯನಿರ್ವಹಿಸಲಿದ್ದು, i3-1115G4 + 8GB RAM ಮತ್ತು i5-1155G7 + 16GB RAM ಎಂಬ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ. ಎರಡೂ ವೇರಿಯಂಟ್‌ 512GB PCIe 3.0 SSD ಸ್ಟೋರೇಜ್‌ ಆಯ್ಕೆ ಪಡೆದಿವೆ. ಅದಾಗ್ಯೂ ಕಂಪನಿಯು 1TB SSD ಸ್ಟೋರೇಜ್ ವೇರಿಯಂಟ್‌ ಪರಿಚಯಿಸಲಿದೆ ಎನ್ನಲಾಗಿದೆ.

Infinix INBook Y2 Plus Laptop Launch
Image Credit: Khabarstudio

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ (Infinix INBook Y2 Plus) ಬ್ಯಾಟರಿ ಪವರ್

ಇನ್ಫಿನಿಕ್ಸ್ ಇನ್‌ಬುಕ್‌ Y2 ಪ್ಲಸ್ ಲ್ಯಾಪ್‌ಟಾಪ್‌ 50Wh ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 10 ಗಂಟೆಗಳವರೆಗೆ ಬ್ಯಾಕಪ್ ಪಡೆಯಬಹುದಾಗಿದೆ. ಜೊತೆಗೆ ಯುಎಸ್‌ಬಿ ಟೈಪ್‌ ಸಿ ಮೂಲಕ 65W ಚಾರ್ಜಿಂಗ್‌ಗೆ ಬೆಂಬಲ ಪಡೆದಿದ್ದು, ಲ್ಯಾಪ್‌ಟಾಪ್ ಅನ್ನು 1 ಗಂಟೆಯಲ್ಲಿ 0-75% ನಿಂದ ಚಾರ್ಜ್ ಮಾಡಲಿದೆ.

Infinix INBook Y2 Plus Price

ಈ ಲ್ಯಾಪ್‌ಟಾಪ್‌ ಎರಡು ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಅದರಂತೆ ಇಂಟೆಲ್ ಕೋರ್ i3-1115G4 + 8GB RAM ಗೆ 27,490 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇಂಟೆಲ್ ಕೋರ್ i5-1155G7 + 16GB RAM ಗೆ 34,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಡಿವೈಸ್‌ ಬೆಳ್ಳಿ, ನೀಲಿ ಮತ್ತು ಬೂದು ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದ್ದು, ಫ್ಲಿಪ್‌ಕಾರ್ಟ್‌ (Flipkart) ಮೂಲಕ ಈ ಲ್ಯಾಪ್ಟಾಪ್ ಅನ್ನು ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group