Infinix New: 5000 mAh ಬ್ಯಾಟರಿ ಮತ್ತು 128 GB ಸ್ಟೋರೇಜ್ ಇರುವ ಮೊಬೈಲ್ ಕೇವಲ 7499 ರೂಪಾಯಿಗೆ, ಅಗ್ಗದ ಮೊಬೈಲ್

ಕೇವಲ 10 ಸಾವಿರಕ್ಕಿಂತಲೂ ಕಡಿಮೆಬೆಲೆಗೆಖರೀದಿಸಿ Infinix ನ್ಯೂ ಸ್ಮಾರ್ಟ್ ಫೋನ್

Infinix Smart 8 Launch In India: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Infinix ಸದ್ಯ 2024 ರ ಆರಂಭದಲ್ಲಿ ತನ್ನ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಮಾದರಿಯನ್ನು ಪರಿಚಯಿಸಿದೆ. Infinix ನ ನೂತನ ಮಾದರಿ ಗ್ರಾಹಕರ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಕೇವಲ 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್ ಫೋನ್ ಗಳ ಲಿಸ್ಟ್ ನಲ್ಲಿ ಇದೀಗ ಹೊಸತಾಗಿ Infinix ನ ನೂತನ ಮಾದರಿ ಸೇರಿಕೊಳ್ಳಲಿದೆ. ಐಫೋನ್ ಮಾದರಿಯಂತೆ ಕಾಣುವ ಈ Infinix ಸ್ಮಾರ್ಟ್ ಫೋನ್ ಇಂದಿನಿಂದ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಈ ಹೊಸ ಸ್ಮಾರ್ಟ್ ನ್ ಬೆಲೆ, ವಿಶೇಷತೆ ಸೇರಿದಂತೆ ಇನ್ನಿತರ ಎಲ್ಲ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೋಡಬಹುದು.

Infinix Smart 8 Launch In India
Image Credit: Lokaltak

ಕೇವಲ 7499 ರೂ. ಗೆ ಲಾಂಚ್ ಆಗಿದೆ ಈ ಹೊಸ ಮಾದರಿ
Infinix ಕಂಪನಿಯು Infinix Smart 8 ಅನ್ನು ಮಾರುಕಟ್ಟೆಯಲ್ಲಿ ಒಂದು ರೂಪಾಂತರದಲ್ಲಿ ಪರಿಚಯಿಸಲಾಗಿದೆ. 4GB RAM, 64GB ಸ್ಟೋರೇಜ್ ರೂಪಾಂತರದ ಆಯ್ಕೆಯಲ್ಲಿ ನೀವು Infinix Smart 8 ಅನ್ನು ಖರೀದಿಸಬಹುದು. ಇನ್ನು ಈ ಮಾದರಿಯ ಬೆಲೆಯ ಬಗ್ಗೆ ಹೇಳುವುದಾದರೆ ರೂ. 7499 ನಿಗದಿಪಡಿಸಲಾಗಿದೆ. ಮೊದಲ ಸೆಲ್ ನಲ್ಲಿ ನೀವು ಕೇವಲ 6749 ರೂ. ಗೆ ಈ ಮಾದರಿಯನ್ನು ಖರೀದಿಸಬಹುದು.

infinix Smart 8 ಫೋನ್ 6.6-ಇಂಚಿನ HD ಡಿಸ್‌ ಪ್ಲೇಯನ್ನು ಹೊಂದಿದ್ದು, 90Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರಲಿದೆ. Octa core Unisoc T606 SoC ಚಿಪ್ ಅನ್ನು ಫೋನ್‌ ನಲ್ಲಿ ಪ್ರೊಸೆಸರ್ ಆಗಿ ಬಳಸಲಾಗಿದೆ. ಕಂಪನಿಯ ಈ ಫೋನ್ ನಲ್ಲಿ 4GB 128GB ರೂಪಾಂತರದಲ್ಲಿ ಪರಿಚಯಿಸಿದೆ. ಹಾಗೆಯೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ವಿಸ್ತರಿಸಬಹುದು.

Infinix Smart 8 Price And Features
Image Credit: Original Source

ಐಫೋನ್ ಮಾದರಿಯಂತೆ ಕಾಣಲಿದೆ Infinix ನ್ಯೂ ಸ್ಮಾರ್ಟ್ ಫೋನ್
ಇನ್ನು infinix Smart 8 ನಲ್ಲಿ 10W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಒದಗಿಸಿದೆ. Infinix Smart 8 ಸೆಟ್ ಅನ್ನು ಕ್ರಿಸ್ಟಲ್ ಗ್ರೀನ್, ಗ್ಯಾಲಕ್ಸಿ ವೈಟ್, ಟಿಂಬರ್ ಬ್ಲಾಕ್ ಮತ್ತು ಶೈನಿ ಗೋಲ್ಡ್ ಬಣ್ಣ ಆಯ್ಕೆಗಳೊಂದಿಗೆ ಲಭ್ಯವಾಗಬಹುದು. ಜನಪ್ರಿಯ ಇಕಾಮರ್ಸ್ ವೆಬ್ ಸೈಟ್ ನಲ್ಲಿ ನೀವು ಇ ಸ್ಮಾರ್ಟ್ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.

Join Nadunudi News WhatsApp Group

Infinix Smart 8 ಸ್ಮಾರ್ಟ್‌ಫೋನ್ ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50- ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಸೆನ್ಸಾರ್ ಮತ್ತು ಸೆಕೆಂಡರಿ AI-ಸಹಾಯ ಸಂವೇದಕವನ್ನು ಹೊಂದಿದೆ. ಇನ್ನು ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಿದೆ. ಇದಲ್ಲದೇ ಡ್ಯುಯಲ್ ಸಿಮ್ 4G VoLTE, Wi-Fi, Bluetooth 5, GPS ಮತ್ತು USB Type-C ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ನೀವು ಈ ನೂತನ ಸ್ಮಾರ್ಟ್ ಫೋನ್ ನಲ್ಲಿ ನೋಡಬಹುದಾಗಿದೆ.

Join Nadunudi News WhatsApp Group