Insta360 Go 3: ಅತೀ ಕಡಿಮೆ ಬೆಲೆಯ ವಿಶ್ವದ ಅತೀ ಚಿಕ್ಕ ಕ್ಯಾಮೆರಾ ಬಿಡುಗಡೆ, ಫೋಟೋ ಪ್ರಿಯರಿಗಾಗಿ ಈ ಕ್ಯಾಮೆರಾ.

ಹೆಚ್ಚು ಫೋಟೋ ತೆಗೆಯುವ ಜನರಿಗಾಗಿ ಬಿಡುಗಡೆ ಆಗಿದೆ ವಿಶ್ವದ ಅತೀ ಚಿಕ್ಕ ಕ್ಯಾಮೆರಾ.

Insta360 Go 3 Camera: ಇದೀಗ ಹೊಸ ಕ್ಯಾಮರಾ ಒಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತದೆ. ಇದು ವಿಶ್ವದ ಚಿಕ್ಕ ಕ್ಯಾಮೆರಾ ಆಗಿದೆ. ಇನ್ನು ಇದರ ವಿಶೇಷತೆ ಬಗ್ಗೆ ತಿಳಿವುಕೊಳ್ಳೋಣ.

ಇನ್ ಸ್ಟಾ 360 ಗೋ 3 ಕ್ಯಾಮೆರಾ
ಪ್ರಮುಖ ಕ್ಯಾಮೆರಾ ತಯಾರಿಕಾ ಕಂಪನಿಗಳು ಹೊಸ ಹೊಸ ಮಾದರಿಯ ಕ್ಯಾಮೆರಾ ಗಳನ್ನೂ ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದೆ. ಈ ನಡುವೆ ವಿಶ್ವದ ಅತಿ ಚಿಕ್ಕ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

The world's smallest camera has been launched for people who take a lot of photos.
Image Credit: pcmag

ಕ್ಯಾಮೆರಾ ಕಂಪೆನಿಯಾದ ಇನ್ ಸ್ಟಾ 360 ಇಂದು ಇನ್ ಸ್ಟಾ 360 ಗೋ 3 ಕ್ಯಾಮೆರಾವನ್ನು ಅನಾವರಣ ಮಾಡಿದೆ. ಈ ಕ್ಯಾಮೆರಾ ಅಲ್ಟ್ರಾ ಪೋರ್ಟಬಿಲಿಟಿ ಆಗಿದ್ದು ಫ್ಲಿಪ್ ಟಚ್ ಸ್ಕ್ರೀನ್ ಹೊಂದಿರುವ ಆಕ್ಷನ್ ಪಾಡ್ ನೊಂದಿಗೆ ಕಂಡು ಬಂದಿದೆ ಜೊತೆಗೆ ನೀರಿನ ಒಳಗು ಇದನ್ನು ಬಳಕೆ ಮಾಡಬಹುದು.

ಇನ್ ಸ್ಟಾ 360 ಗೋ 3 ಕ್ಯಾಮೆರಾದ ವಿಶೇಷತೆ
ಇನ್ ಸ್ಟಾ 360 ಗೋ 3 ಸ್ಮಾರ್ಟ್ ಕ್ಯಾಮೆರಾ ತುಂಬಾ ಚಿಕ್ಕದಾಗಿದ್ದು ಇದು ಕೇವಲ 35 ಗ್ರಾಂ ತೂಗುತ್ತದೆ. ಇದರಿಂದಾಗಿ ನೀವು ಇದನ್ನು ಎಲ್ಲಿ ಬೇಕಾದರೂ ಸಹ ಸುಲಭವಾಗಿ ಬಳಸಬಹುದು. ಇನ್ನು ಈ ಕ್ಯಾಮೆರಾದಲ್ಲಿ INSP ಮತ್ತು DNG ಸ್ವರೂಪಗಳಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ. ಅಲ್ಲದೆ MP4 ಫಾರ್ಮ್ಯಾಟ್ ನಲ್ಲಿ ವಿಡಿಯೋ ಗಳನ್ನೂ ರೆಕಾರ್ಡ್ ಮಾಡಬಹುದಾಗಿದೆ.

Insta360 Go has launched its smallest camera in the market.
Image Credit: camerajabber

ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಮೂರೂ ಮೋಡ್ ಆಯ್ಕೆ ಇದ್ದು ಯಾವ ಸಮಯದಲ್ಲಾದರೂ ನಿಮಗೆ ಅಗತ್ಯ ಎನಿಸುವ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು. ಅಂದರೆ ಸೂರ್ಯೋದಯದ ಟೈಮರ್ ಲ್ಯಾಂಪ್ಸ್ ಅನ್ನು ಸೆರೆಹಿಡಿಯಲು ನೀವು ಬೆಳಗ್ಗೆ ಬೇಗನೆ ನಿಮ್ಮ ಗಾಢ ನಿದ್ರೆಯಿಂದ ಏಳಲೇಬೇಕು ಎನ್ನುಹಾಗಿಲ್ಲ. ಇದಕ್ಕಾಗಿ ಟೈಮ್ಡ್ ಕ್ಯಾಪ್ಟರ್ ಮಾಡ್ ಆಯ್ಕೆ ಇದೆ. ಇನ್ನುಳಿದಂತೆ ಪ್ರಿ-ರೆಕಾರ್ಡಿಂಗ್, ಲೂಪ್ ರೆಕಾರ್ಡಿಂಗ್ ಸಹ ಇದೆ.

Join Nadunudi News WhatsApp Group

ಇನ್ನು ಈ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ನಂತರ ಆಕಾರ ಅನುಪಾತವನ್ನು ಸೆಟ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಅಂದರೆ ನೀವು ಯಾವ ಪ್ಲಾಟ್ ಫಾರ್ಮ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುತ್ತಿರುವ ಆ ಪ್ಲಾಟ್ ಫಾರ್ಮ್ ಗೆ ತಕ್ಕ ಅನುಪಾತವನ್ನು ಹೊಂದಿಸಬಹುದು. ಅಂದರೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಅಪ್ಲೋಡ್ ಮಾಡಲು 9:16 ಆಕಾರ ಅನುಪಾತ ಹಾಗು ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಲು 16:9 ಅಕಾರ ಅನುಪಾತದಲ್ಲಿ ರೆಕಾರ್ಡ್ ಮಾಡಬಹುದು.

Insta 360 camera which is very useful for people is now launched in the market at a low price
Image Credit: theverge

ಇನ್ ಸ್ಟಾ 360 ಗೋ 3 ಕ್ಯಾಮೆರಾದ ಬೆಲೆ
ಈ ಸ್ಮಾರ್ಟ್ ಕ್ಯಾಮೆರಾದಲ್ಲಿ 1270 mAh ಸಾಮರ್ಥ್ಯದ ಬ್ಯಾಟರಿ ಇದೆ. ಇನ್ನು ಇದು ಯು ಏ ಬಿ ಟೈಪ್ ಸಿ ಪೋರ್ಟ್ ಹೊಂದಿದೆ. ಅದರಂತೆ 65 ನಿಮಿಷಗಳಲ್ಲಿ 100 5 ವರೆಗೆ ಚಾರ್ಜ್ ಆಗುತ್ತದೆ. ಇನ್ನು ಆಕ್ಷನ್ ಕ್ಯಾಮೆರಾ 310 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇನ್ನು ಈ ಸ್ಮಾರ್ಟ್ ಕ್ಯಾಮೆರಾದ ಬೆಲೆ 32GB , 64GB ಹಾಗು 128 GB ಸ್ಟೋರೇಜ್ ಕ್ಯಾಮೆರಾಗಳಿಗೆ ಕ್ರಮವಾಗಿ 36,890 , 38,940 ಹಾಗು 42,630 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ.

Join Nadunudi News WhatsApp Group