Agricultural Loan: ರೈತರಿಗೆ ಸಿಗಲಿದೆ 5 ಲಕ್ಷದ ತನಕ ಬಡ್ಡಿ ರಹಿತ ಸಾಲ, ರಾಜ್ಯ ಸರ್ಕಾರದ ಮತ್ತೊಂದು ಯೋಜನೆ

ರಾಜ್ಯ ಸರ್ಕಾರ ರೈತರಿಗಾಗಿಯೇ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಜಾರಿಗೆ ತಂದಿದೆ, ಅರ್ಹ ರೈತರು ಇಂದೇ ಅರ್ಜಿ ಹಾಕಿ

Interest Free Loan For Farmers: ರಾಜ್ಯ ಸರ್ಕಾರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಯೋಜನೆ ಹಾಗು ಸಾಲ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಉದ್ದೇಶವೇ ರೈತರನ್ನು ಆರ್ಥಿಕವಾಗಿ ಪ್ರಬಲಗೊಳಿಸುವುದಾಗಿದೆ.

ರೈತರು ಕೃಷಿ ಚಟುವಟಿಕೆಯಲ್ಲಿ ಲಾಭ ಗಳಿಸಿದರೆ ಆರ್ಥಿಕವಾಗಿ ಸಧ್ರಡ ಆಗಬಹುದಾಗಿದೆ, ಆದರೆ ರೈತರು ಕೃಷಿ ಮಾಡಲು ಹಣದ ಅವಶ್ಯಕತೆ ಇರುತ್ತದೆ ಹಾಗಾಗಿ ಇದನ್ನೆಲ್ಲ ಗಮನಿಸಿದ ರಾಜ್ಯ ಸರಕಾರ ರೈತರಿಗಾಗಿಯೇ ಈ ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರಿಗೆ 05 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಸರಕಾರ ಒದಗಿಸಲಿದ್ದು, ಅರ್ಹ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

5 Lakh Interest Free Agri Loans
Image Credit: Kannada News Today

ರೈತರಿಗಾಗಿ ಬಡ್ಡಿ ರಹಿತ ಸಾಲ ಸೌಲಭ್ಯ

ರೈತರು ಸಾಲ ಮಾಡದೇ ಕೃಷಿ ಮಾಡುವುದು ಬಹಳ ಕಷ್ಟ ಆದ್ದುದರಿಂದ ಹೆಚ್ಚಿನ ರೈತರಿಗೆ ಸಾಲದ ಅವಶ್ಯಕತೆ ಇರುವುದುಂಟು. ಕುರಿ ಸಾಕಾಣಿಕೆ ಮಾಡುವವರು, ಹೈನುಗಾರಿಕೆ ಮಾಡುವವರು ಹಾಗು ಇನ್ನಿತರ ಯಾವುದೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಈ ಸಾಲಕ್ಕೆ ಅರ್ಜಿ ಹಾಕಬಹುದಾಗಿದೆ. ಕೃಷಿಗೆ ಸಂಬಂಧಿಸಿದಂತೆ 5 ಲಕ್ಷ ಸಾಲವನ್ನು ರಾಜ್ಯ ಸರಕಾರ ಬಡ್ಡಿ ರಹಿತವಾಗಿ ರೈತರಿಗೆ ನೀಡುತ್ತಿದೆ.

ಈ ಸಾಲವನ್ನು ಯಾವ ಬ್ಯಾಂಕ್ ನೀಡುತ್ತದೆ?

Join Nadunudi News WhatsApp Group

ಸಧ್ಯಕ್ಕೆ ಈಗ DCC ಬ್ಯಾಂಕ್ ಈ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು, ಇದರಲ್ಲೂ ಕೆಲವು ಸಾಲಗಳು ಬಡ್ಡಿ ರಹಿತ ಆಗಿದ್ದರೆ, ಇನ್ನು ಕೆಲವು ಸಾಲಗಳ ಮೇಲೆ 1%ರಿಂದ 3 %ನಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಅರ್ಹ ರೈತರು ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿಯು ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

Interest Free Loan For Farmers
Image Credit: Kannada News Today

ಬಡ್ಡಿ ರಹಿತ ಸಾಲ ಪಡೆಯುವ ಕುರಿತು ಮಾಹಿತಿ

ಬಡ್ಡಿ ರಹಿತ ಸಾಲ ಪಡೆಯಲು ಮೊದಲನೇದಾಗಿ DCC ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ , ನಂತರ ರೈತರು ತಮ್ಮ ಭೂಮಿಯ ದಾಖಲೆ ಪತ್ರ, ಪಹಣಿ ಪತ್ರಿಕೆ ಹಾಗು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋಗಬೇಕು. ಕೃಷಿಗೆ ಸಂಬಂಧಿಸಿದಂತೆ ಬೇರೆ ಬೇರೆಯೇ ಸಾಲ ಸೌಲಭ್ಯಗಳಿರುತ್ತದೆ. ಉದಾಹರಣೆಗೆ ಬೆಳೆ ಸಾಲ ಪಡೆದುಕೊಂಡರೆ ವರ್ಷಕ್ಕೆ ಒಮ್ಮೆ ರಿನೀವಲ್ ಮಾಡಿಸಬೇಕಾಗುತ್ತದೆ. ರಿನೀವಲ್ ಮಾಡಿಸಿದ ನಂತರ ಮತ್ತೆ ರೈತರಿಗೆ ಹಣ ಪಾವತಿ ಆಗುತ್ತದೆ ಆ ಹಣವನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ. ರೈತರು ಸಾಲವನ್ನು ಎಷ್ಟು ಸರಿಯಾಗಿ ಬ್ಯಾಂಕ್ ಗೆ ಮರುಪಾವತಿ ಮಾಡುತ್ತಿರೋ ಆ ಲೆಕ್ಕದಲ್ಲಿ ರೈತರಿಗೆ ಸಾಲ ಸಿಗುತ್ತದೆ.

ಫ್ರುಟ್ಸ್ ಐಡಿ ಕಾರ್ಡ್ (FID )ಕಡ್ಡಾಯ ಆಗಿರುತ್ತದೆ

ರೈತರು DCC ಬ್ಯಾಂಕ್ ನಲ್ಲಿ ಬಡ್ಡಿ ರಹಿತ ಸಾಲ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಕಡ್ಡಾಯವಾಗಿ ಫ್ರುಟ್ಸ್ ಐಡಿ ಕಾರ್ಡ್ ಅನ್ನು ಹೊಂದಿರಬೇಕು. ಈ ಕಾರ್ಡ್ ಹೊಂದಿಲ್ಲ ಅಂದರೆ ನಿಮಗೆ ಯಾವುದೇ ರೀತಿಯ ಸಾಲ ಸೌಲಭ್ಯ ದೊರೆಯುದಿಲ್ಲ. ಆದ್ದರಿಂದ ಕಡ್ಡಾಯವಾಗಿ ಎಲ್ಲಾ ರೈತರು ಈ FID ಅನ್ನು ಮಾಡಿಸಿಕೊಳ್ಳತಕ್ಕದ್ದು.

Join Nadunudi News WhatsApp Group