SBI Interest: SBI ನಲ್ಲಿ 1 ಲಕ್ಷ ಹಣ ಇಟ್ಟರೆ ಎಷ್ಟು ಲಾಭ ಸಿಗುತ್ತದೆ, ಗ್ರಾಹಕರ ಬಡ್ಡಿದರ ಹೆಚ್ಚಳ ಮಾಡಿದ SBI.

ಆರ್ ಬಿ ಐ ರೆಪೋ ದರವನ್ನು ಹೆಚ್ಚಿಸಿದ ನಂತರ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ನಿಶ್ಚಿತ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿದೆ.

State Bank Of India FD Interest Rate: ಎಸ್ ಬಿ ಐ (State Bank Of India) ಇದೀಗ ತನ್ನ ಗ್ರಾಹಕರಿಗೆ ಉಡುಗೊರೆಯನ್ನು ನೀಡಿದೆ. 1 ಲಕ್ಷದ ಎಫ್ ಡಿ ಯಲ್ಲಿ ನೀವು ಇಷ್ಟು ಆದಾಯವನ್ನು ಪಡೆಯುತ್ತೀರಿ. ಉಳಿತಾಯ ಎಲ್ಲರಿಗೂ ಅಗತ್ಯವಾಗಿದೆ.

ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಆರ್ ಬಿ ಐ ರೆಪೋ ದರವನ್ನು ಹೆಚ್ಚಿಸಿದೆ. ರೆಪೋ ದರ ಹೆಚ್ಚಳದ ನಂತರ ಹಲವು ಬ್ಯಾಂಕ್ ಗಳು ತಮ್ಮ ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಇದರಲ್ಲಿ ಸರ್ಕಾರದಿಂದ ಹಿಡಿದು ಖಾಸಗಿ ವಲಯದ ಬ್ಯಾಂಕ್ ಗಳು ಸೇರಿದೆ.

State Bank Of India New Update
Image Credit: indiatvnews

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಫ್ ಡಿ ಯಲ್ಲಿ ಹೂಡಿಕೆ ಮಾಡುವ ಸೌಲಭ್ಯವನ್ನು ನೀಡುತ್ತದೆ. ಯಾವುದೇ ಸಾಮಾನ್ಯ ನಾಗರಿಕ ತನ್ನ ಹಣವನ್ನು 7 ದಿನಗಳಿಂದ 10 ವರ್ಷಗಳ ವರೆಗೆ SBI ನಲ್ಲಿ ಹೂಡಿಕೆ ಮಾಡಬಹುದು.

ನೀವು ಬ್ಯಾಂಕ್‌ ನ ಅಮೃತ್ ಕಲಶ ಠೇವಣಿ ಯೋಜನೆ ಅಡಿಯಲ್ಲಿ ಎಫ್‌ ಡಿಯಲ್ಲಿ ಶೇಕಡಾ 7.6 ಬಡ್ಡಿ ದರವನ್ನು ಪಡೆಯಬಹುದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿದರವನ್ನು ಕೆಲವು ದಿನಗಳ ಹಿಂದೆಯಷ್ಟೇ ಹೆಚ್ಚಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ
ಮಾಹಿತಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ವರ್ಷದಿಂದ 2 ವರ್ಷಗಳ ಠೇವಣಿಯ ಮೇಲೆ ಸಾಮಾನ್ಯ ನಾಗರಿಕರಿಗೆ 6.80 % ಬಡ್ಡಿದರವನ್ನು ನೀಡುತ್ತಿದೆ ಮತ್ತು ಅದೇ ಅವಧಿಗೆ ಹಿರಿಯ ನಾಗರಿಕರು 7.30 % ಬಡ್ಡಿದರವನ್ನು ಪಡೆಯುತ್ತಾರೆ.

Join Nadunudi News WhatsApp Group

ಸಾಮಾನ್ಯ ನಾಗರಿಕರು 2 ವರ್ಷದಿಂದ 3 ವರ್ಷಗಳ ವರೆಗಿನ FD ಗಳ ಮೇಲೆ 7.00% ಬಡ್ಡಿ ದರವನ್ನು ಪಡೆಯುತ್ತಿದ್ದಾರೆ, ಅದೇ ಹಿರಿಯ ನಾಗರಿಕರಿಗೆ 0.50% ಹೆಚ್ಚಿನ ಬಡ್ಡಿ ಸಿಗುತ್ತದೆ, ಅಂದರೆ ಶೇ.7.50 ಬಡ್ಡಿದರ ನೀಡಲಾಗುವುದು.

State Bank of India Interest Rate
Image Credit: indiatvnews

ಸ್ಟೇಟ್ ಬ್ಯಾಂಕ್ 3 ವರ್ಷದಿಂದ 5 ವರ್ಷಗಳ ಠೇವಣಿ ಅವಧಿಯ ಮೇಲೆ ಸಾಮಾನ್ಯ ನಾಗರಿಕರಿಗೆ 6.50% ಮತ್ತು ಹಿರಿಯ ನಾಗರಿಕರಿಗೆ 7% ಬಡ್ಡಿಯ ಲಾಭವನ್ನು ನೀಡುತ್ತಿದೆ. ಯಾರಾದರೂ 5 ವರ್ಷದಿಂದ 10 ವರ್ಷಗಳವರೆಗೆ ಎಫ್‌ಡಿ ಪಡೆದರೆ, ಸಾಮಾನ್ಯ ನಾಗರಿಕರು 6.50% ಬಡ್ಡಿದರವನ್ನು ಪಡೆಯುತ್ತಾರೆ, ಇದೇ ಅವಧಿಗೆ ಹಿರಿಯ ನಾಗರಿಕರಿಗೆ ಶೇ.7.50 ಬಡ್ಡಿ ದರ ನಿಗದಿಪಡಿಸಲಾಗಿದೆ.

Join Nadunudi News WhatsApp Group