Interest Waiver: ಈ ರೈತರ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಸಿದ್ದರಾಮಯ್ಯ ಇನ್ನೊಂದು ಘೋಷಣೆ

ಸಿದ್ದರಾಮಯ್ಯ ಅವರು ರೈತರ ಸಾಲದ ಬಡ್ಡಿ ಮನ್ನಾ ಮಾಡುದಾಗಿ ಘೋಷಣೆ ಹೊರಡಿಸಿದ್ದಾರೆ

Interest Waiver On Farm Loans: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುವ ಸಲುವಾಗಿ ರೈತರಿಗೆ ಹಲವಾರು ಸೌಲಭ್ಯವನ್ನು ಒದಗಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ರೈತರ ಸಾಲದ ಬಡ್ಡಿ ಮನ್ನಾ ಮಾಡುದಾಗಿ ಘೋಷಣೆ ಹೊರಡಿಸಿದ್ದಾರೆ. ಇದೀಗ ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ್ದಾರೆ. ಹಾಗಾದರೆ ನಾವೀಗ ಇದರ ನಿಬಂಧನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

CM Siddaramaiah About loan Interest waived
Image Credit: Telegraphindia

ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ
ರಾಜ್ಯದ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿ ಮಾಡಿರುವಂತ ಸಾಲದ ಅಸಲು ಕಟ್ಟಿದರೆ ಆದರೆ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಮಾಡುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಹೊರಡಿಸಿದೆ. ಸರ್ಕಾರದ ಆದೇಶದಲ್ಲಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಉದ್ಭವಿಸಿರುವ ಅನಾವೃಷ್ಟಿಗಳ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ ಮಧ್ಯಮಾವಧಿ ಮತ್ತು ಧೀರ್ಘವದಿ ಸಾಲ ಮರುಪಾವತಿಸಲು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದನ್ನು ಮತ್ತು ಇದರಿಂದ ಸಹಕಾರ ಸಂಸ್ಥೆಗಳು ನಬಾರ್ಡ್ ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಪುನಃ ರೈತರಿಗೆ ಸಾಲ ನೀಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಸಾಲ ಪಡೆದು ಡಿಸೆಂಬರ್ 31 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ಧೀರ್ಘವದಿ ಸಾಲದ ಅಸಲನ್ನು ಫೆಬ್ರವರಿ 29 ರೊಳಗೆ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.

Interest Waiver On Farm Loans
Image Credit: The Betterindia

ಷರತ್ತುಗಳು ಅನ್ವಯ
*ಈ ಸೌಲಭ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳಿಂದ ಸಾಲ ಪಡೆದು ಡಿಸೆಂಬರ್ 31 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ಧೀರ್ಘವದಿ ಕೃಷಿ ಮತ್ತು ಕೃಷಿ ಸಂಬಂದಿತ ಸಾಲಗಳಿಗೆ ಮಾತ್ರ ಅನ್ವಹಿಸುತ್ತದೆ.

Join Nadunudi News WhatsApp Group

*ಕೃಷಿಯೇತರ ಸಾಲಗಳಿಗೆ ಈ ಸೌಲಭ್ಯ ಅನ್ವಯವಾಗುದಿಲ್ಲ. ಹಾಗೆ ಮೇಲೆ ತಿಳಿಸಿರುವ ಸಂಸ್ಥೆಯನ್ನು ಹೊರತುಪಡಿಸಿ ಇತರ ಸಂಸ್ಥೆಯಲ್ಲಿ ಪಡೆದ ಸಾಲಕ್ಕೆ ಅನ್ವಯವಾಗುದಿಲ್ಲ. ನಬಾರ್ಡ್ ಗುರುತಿಸಿದ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶುಸಂಗೋಪನೆ, ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರಿಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

*ಏಪ್ರಿಲ್ 1 2004 ರ ನಂತರದ ಸಾಲಗಳಿಗೆ ಆಯಾ ವರ್ಷದಲ್ಲಿ ರೈತರು ಪಾವತಿಸಬೇಕಾದ ಬಡ್ಡಿ, ಸರ್ಕಾರ ಪಾವತಿಸಬೇಕಾದ ಬಡ್ಡಿ, ಮತ್ತು ಸಹಾಯಧನದ ಒಟ್ಟು ಬಡ್ಡಿ ಅನ್ನು ಸಂಬಂಧಿಸಿದ ಸಹಕಾರ ಸಂಸ್ಥೆಗಳಿಗೆ ಸರ್ಕಾರದಿಂದ ಭರಿಸಲಾಗುವುದು.10 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ವಿತರಿಸಿದ್ದರು ಸಹ ಆಯಾ ವರ್ಷದಲ್ಲಿ 10 ಲಕ್ಷಗಳವರೆಗೆ ನಿಗದಿಪಡಿಸಿದ ಬಡ್ಡಿದರದ ಅನ್ವಯ ಬಡ್ಡಿ ಮನ್ನಾ ಮೊತ್ತ ಕ್ಷೇಮು ಮಾಡತಕ್ಕದ್ದು.

Karnataka Crop Loan Interest Waiver Scheme
Image Credit: Agrinews

*ಈ ಯೋಜನೆಯಲ್ಲಿ ಮರುಪಾವತಿಸುವ ಸಾಲಗಳಿಗೆ ಯಾವುದೇ ಸುಸ್ತಿ ಬಡ್ಡಿ, ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ, ವಸೂಲಿ ವೆಚ್ಚ, ಹಾಗೂ ಇತರೆ ವೆಚ್ಚವನ್ನು ಸಹಕಾರಿ ಸಂಸ್ಥೆಗಳು ಮಾಡುದಿಲ್ಲ.

*ಈ ಯೋಜನೆಯಲ್ಲಿ ತಗಲುವ ವೆಚ್ಚವನ್ನು ಸಹಕಾರ ಇಲಾಖೆಗೆ ಒದಗಿಸಿರುವ ಆಯವ್ಯಯದ ಸಾಮಾನ್ಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಲೆಕ್ಕಶೀರ್ಷಿಕೆಯಲ್ಲಿ ಭರಿಸತಕ್ಕದ್ದು.

*ಈ ಯೋಜನೆಯಡಿ ಕ್ಷೇಮ್ ಬಿಲ್ಲುಗಳನ್ನು ಸಹಕಾರ ಸಂಘಗಳು ವಸೂಲಾತಿ ಅಂತಿಮ ದಿನಾಂಕದಿಂದ 45 ದಿನಗಳೊಳಗಾಗಿ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸತಕ್ಕದ್ದು, ರೈತರು ಸುಸ್ತಿ ಅಸಲು ಮೊತ್ತವನ್ನು ಮರುಪಾವತಿಸುವ ದಿನಾಂಕದವರೆಗೆ ಮಾತ್ರ ಬಡ್ಡಿ ಕ್ಷೇಮುಗಳಿಗೆ ಅವಕಾಶವಿರುತ್ತದೆ. ಯಾವುದೇ ಕಾರಣದಿಂದಾಗಿ ಕ್ಷೇಮು ಮೊತ್ತ ಬಿಡುಗಡೆಗೆ ಆಗುವ ವಿಳಂಬದ ಅವಧಿಗೆ ಯಾವುದೇ ಕ್ಷೇಮುಗಳಿಗೆ ಅವಕಾಶವಿರುವುದಿಲ್ಲ.

Join Nadunudi News WhatsApp Group