Internet Use: ಇಂಟರ್ನೆಟ್ ಬಳಸುವ ಭಾರತದ ಜನರು ಈ ವಿಷಯಗಳನ್ನ ಹೆಚ್ಚು ಹುಡುಕುತ್ತಾರಂತೆ, ಗೂಗಲ್ ಸಮೀಕ್ಷೆ

Internet ಬಳಸುವ ಜನರು ಅತೀ ಹೆಚ್ಚು ಗೂಗಲ್ ಸರ್ಚ್ ಮಾಡುವ ವಿಷಯ ಯಾವುದು...?

Internet Use In India: ಸದ್ಯದ Digital ದುನಿಯಾದಲ್ಲಿ Mobile ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಹೆಚ್ಚಲಿನ ಜನರು ಮೊಬೈಲ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. ಮೊಬೈಲ್ ಬಳಸದೆ ಇರುವವರ ಸಂಖ್ಯೆ ಎಣಿಕೆಗೆ ಸಿಗುವಷ್ಟು ಇದೆ ಎನ್ನಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದಾರೆ. ಮೊಬೈಲ್ ಬಳಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನಬಹುದು.

ಇನ್ನು ಮೊಬೈಲ್ ಬಳಸುವ ಪ್ರತಿಯೊಬ್ಬರೂ Internet ಅನ್ನು ಬಳಸುತ್ತಾರೆ. Internet ನ ಮೂಲಕ ಗೂಗಲ್ ನಲ್ಲಿ ಸಾಕಷ್ಟು ವಿಷಯಗಳ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಇತ್ತೀಚೆಗಂತೂ ಹಳ್ಳಿ ಹಳ್ಳಿಗಳಲ್ಲೂ Network ಸೌಲಭ್ಯ ಇರುವುದರಿಂದ Internet ಬಳಕೆಗೆ ಹೆಚ್ಚುತ್ತಿದೆ. ಇನ್ನು ನಗರಗಳಲ್ಲಿ 37 ಕೋಟಿ 80 ಲಕ್ಷ ಜನರು ಹಾಗು ಹಳ್ಳಿಗಳಲ್ಲಿ 44 ಕೋಟಿ 20 ಲಕ್ಷ ಜನರು Internet ಬಳಕೆ ಮಾಡುತ್ತಿದ್ದಾರೆ ಎನ್ನಬಹುದು.

Internet Use In India
Image Credit: xfinity

Internet ಬಳಸುವ ಜನರು ಅತೀ ಹೆಚ್ಚು ಗೂಗಲ್ ಸರ್ಚ್ ಮಾಡುವ ವಿಷಯ ಯಾವುದು…?
ಭಾರತದಲ್ಲಿ ಸುಮಾರು 86 ಪ್ರತಿಶತದಷ್ಟು ಜನರು Internet ಬಳಕೆ ಮಾಡುತ್ತಿದ್ದರೆ ಎಂದು Internet ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ವರದಿ ಮಾಡಿದೆ. ವಿಶೇಷವಾಗಿ OTT ನಲ್ಲಿ ಹೆಚ್ಚಿನ ಡೇಟಾವನ್ನು ಬಳಸಲಾಗುತ್ತದೆ. ಭಾರತದಲ್ಲಿನ 80 ಕೋಟಿ ಬಳಕೆದಾರರಲ್ಲಿ, ಸುಮಾರು 70 ಕೋಟಿ ಜನರು OTT ಪ್ಲಾಟ್‌ ಫಾರ್ಮ್‌ ಗಳಲ್ಲಿ ಆಡಿಯೋ ಮತ್ತು ವೀಡಿಯೊವನ್ನು ವೀಕ್ಷಿಸುತ್ತಿದ್ದಾರೆ.

ಇತ್ತೀಚಿನ ವರದಿಗಳು ಭಾರತದಲ್ಲಿ OTT ಪ್ಲಾಟ್‌ ಫಾರ್ಮ್‌ ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ತೋರಿಸುತ್ತವೆ. Netflix, Hotstar, Jio Cinema, Amazon Prime Video, Zee5 ಸೇರಿದಂತೆ ಇನ್ನಿತರ ಜನಪ್ರಿಯ OTT ಪ್ಲಾಟ್‌ ಫಾರ್ಮ್‌ ಗಳ ಬಳಕೆ ಹೆಚ್ಚಿದೆ ಎನ್ನಬಹುದು.

Internet Use Latest Update
Image Credit: Scroll

ಆನ್ಲೈನ್ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಸಂಖ್ಯೆ
*OTT ವಿಷಯಕ್ಕಾಗಿ: 70 ಕೋಟಿ 70 ಲಕ್ಷ
*ಸಂವಹನ 62 ಕೋಟಿ: 10 ಲಕ್ಷ
*ಸಾಮಾಜಿಕ ಮಾಧ್ಯಮ: 57 ಕೋಟಿ 50 ಲಕ್ಷ
*ಆನ್‌ ಲೈನ್ ಗೇಮಿಂಗ್: 43 ಕೋಟಿ 80 ಲಕ್ಷ
*ಆನ್‌ ಲೈನ್ ಶಾಪಿಂಗ್: 42 ಕೋಟಿ 70 ಲಕ್ಷ
*ಡಿಜಿಟಲ್ ಪಾವತಿಯಲ್ಲಿ: 37 ಕೋಟಿ ರೂ.
*ಆನ್‌ ಲೈನ್ ಕಲಿಕೆಗೆ: 2 ಕೋಟಿ 40 ಲಕ್ಷ ರೂ.

Join Nadunudi News WhatsApp Group

Join Nadunudi News WhatsApp Group