Investment Scheme: ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಕೇಂದ್ರದಿಂದ 5 ಯೋಜನೆ ಬಿಡುಗಡೆ, ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ.

ಕೇಂದ್ರದ ಈ 5 ಯೋಜನೆಗಳು ಉತ್ತಮ ಹೂಡಿಕೆಯ ಯೋಜನೆಗಳು ಆಗಿದೆ.

Central Govt Top 5 Investment Scheme: ಕೇಂದ್ರದ ಮೋದಿ (Narendra Modi) ಸರ್ಕಾರ ದೇಶದಲ್ಲಿ ಜನಸಮಾನ್ಯರ ಆರ್ಥಿಕ ನೆರವಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ. ಕೇಂದ್ರ ಸರ್ಕ್ರದ ಯೋಜನೆಗಳ್ನು ದೇಶದ ಲಕ್ಷಾಂತರದ ಜನರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಭಾರತ ಸರ್ಕಾರ ಜನರ ಆರ್ಥಿಕ ಸ್ಥಿರತೆ ಕಾಪಾಡಲು ಸಾಕಷ್ಟು ಯೋಜನೆಯನ್ನು ರೂಪಿಸಿದೆ. ಇನ್ನು ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇದೀಗ ಕೇಂದ್ರ ಸರ್ಕಾರದ ಟಾಪ್ 5 ಬೆಸ್ಟ್ ಯೋಜನೆಗಳ ಬಗ್ಗೆ ವಿವರ ತಿಳಿಯೋಣ.

pradhan mantri jan dhan yojana
Image Credit: Fincash

*Pradhan Mantri Jan Dhan Yojana
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯಿಂದ ನೀವು 10 ಸಾವಿರ ರೂಪಾಯಿ ಪಡೆಯಲು ನಿಮ್ಮ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೆ ಈ ಖಾತೆಯಲ್ಲಿ 1,30,000 ದ ವರೆಗಿನ ವಿಮೆಗೆ ಲಭ್ಯವಿರುದ ಅನೇಕ ಪ್ರಯೋಜನಗಳು ಇವೆ. ಜನ್ ಧನ್ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನ ನೀಡಲಾಗುತ್ತದೆ. ಇದರಲ್ಲಿ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಇನ್ನು ಜನ್ ಧನ್ ಪ್ರಧಾನ ಮಂತ್ರಿ ಖಾತೆಯಲ್ಲಿ ನೀವು ಹಣ ಬಯಸಿದರೆ ಓವರ್ ಡ್ರಾಫ್ಟ್ ಗಾಗಿ ನೀವು 10,000 ಅರ್ಜಿ ಸಲ್ಲಿಸಬಹುದು.

Government best investment schemes
Image Credit: Sarkariyojnaa

*Pradhan Mantri Jeevan Jyoti Bhima Yojana
ಭಾರತದ ಯಾವುದೇ ಪ್ರಜೆಯು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 50 ವರ್ಷಕ್ಕಿಂತ ಕಡಿಮೆ ಇರುವುದು ಕಡ್ಡಾಯವಾಗಿದೆ. ಈ ಪಾಲಿಸಿಯು 55 ವರ್ಷ ವಯಸ್ಸಿನವರೆಗೆ ಇರುತ್ತದೆ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವ ನಾಗರಿಕರು ವರ್ಷಕ್ಕೆ 436 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಟರ್ಮ್ ಪ್ಲಾನ್ ಅಡಿಯಲ್ಲಿ, ವ್ಯಕ್ತಿಯ ಅಕಾಲಿಕ ಮರಣದ ಸಂದರ್ಭದಲ್ಲಿ, ಅವನ ಕುಟುಂಬವು ನಿಗದಿತ ಮೊತ್ತದ ವಿಮೆಯನ್ನು ಪಡೆಯುತ್ತದೆ. ಸಾವಿನ ಕಾರಣವನ್ನು ಕೇಳದೆ ಮೃತರ ಕುಟುಂಬಕ್ಕೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ವಾರ್ಷಿಕ 436 ರೂ. ಹೂಡಿಕೆ ಮಾಡುವ ಮೂಲಕ 2 ಲಕ್ಷ ಹಣವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Atal Pension Scheme latest update
Image Credit: Newsnationtv

*Atal Pension Scheme
ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.

18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. 1,000 ರೂ.ನಿಂದ 5,000 ರೂ.ವರೆಗಿನ ಪಿಂಚಣಿ ಪಡೆಯಲು ಪ್ರತಿ ತಿಂಗಳು 42 ರಿಂದ 210 ರೂ. ಹೂಡಿಕೆ ಅಗತ್ಯವಾಗಿದೆ.

pradhan mantri mudra yojana benefits
Image Credit: Webdunia

*Pradhan Mantri Mudra Yojana
ಇದೀಗ ಕೇಂದ್ರದ ಮೋದಿ ಸರ್ಕಾರವು ಪಿಎಂ ಮುದ್ರಾ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಮೂರೂ ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೂರು ವಿಭಾಗದ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ. ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಇದಲ್ಲದೆ ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ.

Stand-Up India Yojana latest update
Image Credit: Currentaffairs

*Stand-Up India Yojana
ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯು ಮಹಿಳಾ ಉದ್ಯಮಿಗಳು ಮತ್ತು ಸಮಾಜದ SC/ST ವರ್ಗದ ಅಡಿಯಲ್ಲಿ ಬರುವ ಜನರಿಗೆ ಹಣವನ್ನು ಒದಗಿಸುತ್ತದೆ. ಈ ಯೋಜನೆಯಡಿ, ಉದ್ಯಮವನ್ನು ಪ್ರಾರಂಭಿಸಲು 10 ಲಕ್ಷದಿಂದ 1 ಕೋಟಿ ರೂ.ವರೆಗಿನ ಸಾಲ ಲಭ್ಯವಿದೆ. SC/ST ವರ್ಗದ ಜನರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಭಾರತ ಸರ್ಕಾರವು ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿದೆ.

Join Nadunudi News WhatsApp Group