iPhone: ಐಫೋನ್ ಬೆಲೆ ಮತ್ತಷ್ಟು ಇಳಿಕೆ, ಹಳೆಯ ಮಾಡೆಲ್ ಖರೀದಿಸಲು ಮನಸ್ಸು ಮಾಡಿದ ಜನ

ಐಫೋನ್ 15 ಬಿಡುಗಡೆ ಬೆನ್ನಲ್ಲೇ ಐಫೋನ್ 14 ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಆಗಿದೆ.

iPhone 14 Flipkart And Amazon Offer: ಭಾರತೀಯ ಮಾರುಕಟ್ಟೆಯಲ್ಲಿ iPhone 15 ಲಾಂಚ್ ಆಗುತ್ತಿದ್ದಂತೆ Apple ಇನ್ನಿತರ ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ. iPhone 15 ಮಾರುಕಟ್ಟೆಯಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಆಯ್ಕೆಗಳು ಲಭ್ಯವಿದೆ.

ಈ ನಾಲ್ಕು ಮಾದರಿಯ ಫೋನ್ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದು, ಇದೀಗ Flipkart ಹಾಗೂ Amazon iPhone 14 ಖರೀದಿಗೆ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ. ವಿವಿಧ ಕೊಡುಗೆಗಳ ಜೊತೆಗೆ, Exchange Offer ಅನ್ನು ಕೂಡ ನೀಡಿದ್ದು ನೀವು iPhone 14 ಅನ್ನು ಅರ್ಧ ಬೆಲೆಗೆ ಖರೀದಿಸಬಹುದಾಗಿದೆ.

iPhone 14 Flipkart And Amazon Offer
Image Credit: Dnaindia

ಐಫೋನ್ 15 ಲಾಂಚ್ ಬೆನ್ನಲ್ಲೇ ಅಗ್ಗವಾಗಿದೆ ಐಫೋನ್ 14 ಬೆಲೆ
Flipkart ನಲ್ಲಿ iPhone 14 128GB ಸ್ಟೋರೇಜ್ ರೂಪಾಂತರವು ರೂ. 69,900 ಗೆ ಲಭ್ಯವಿದೆ. Flipkart ನ ಆಫರ್ ನ ಮೂಲಕ ಇದನ್ನು ರೂ 64,999 ಗೆ ಖರೀದಿಸಬಹುದು. ಇದರ ಮೇಲೆ ರೂ 4901 ಫ್ಲಾಟ್ ಡಿಸ್ಕೌಂಟ್ ಲಭ್ಯವಿದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು 30,600 ರೂ. ವರೆಗಿನ ಎಕ್ಸ್ ಚೇಂಜ್ ಬೋನಸ್ ಆಫರ್ ಪ್ರಯೋಜನವನ್ನು ಪಡೆಯಬಹುದು. ಈ ಎಲ್ಲ ಆಫರ್ ಅನ್ನು ಬಳಸಿಕೊಂಡು ನೀವು iPhone 14 ಅನ್ನು ಕೇವಲ 29,000 ರೂ.ಗಳಲ್ಲಿ ಖರೀದಿಸಬಹುದಾಗಿದೆ.

ಕೇವಲ 26 ಸಾವಿರದಲ್ಲಿ ಲಭ್ಯವಾಗಲಿದೆ iPhone 14
Amazon ನಲ್ಲಿ iPhone 14 128GB ಸ್ಟೋರೇಜ್ ರೂಪಾಂತರವು ರೂ. 69,900 ಗೆ ಲಭ್ಯವಿದೆ. Amazon ನ ಆಫರ್ ನ ಮೂಲಕ ಇದನ್ನು ರೂ 63,999 ಗೆ ಖರೀದಿಸಬಹುದು. ಇನ್ನು Exchange offer ಕೂಡ ಲಭ್ಯವಿದ್ದು, ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, 37500 ರೂ. ವರೆಗಿನ ಎಕ್ಸ್ ಚೇಂಜ್ ಬೋನಸ್ ಆಫರ್ ಪ್ರಯೋಜನವನ್ನು ಪಡೆಯಬಹುದು. ಈ ಎಲ್ಲ ಆಫರ್ ಅನ್ನು ಬಳಸಿಕೊಂಡು ನೀವು iPhone 14 ಅನ್ನು Amazon ನಲ್ಲಿ ಕೇವಲ 26000 ರೂ.ಗಳಲ್ಲಿ ಖರೀದಿಸಬಹುದಾಗಿದೆ.

iphone 14 price
Image Credit: Moneycontrol

ಐಫೋನ್ 14 ಫೋನಿನ ವಿಶಿಷ್ಟತೆ 
iPhone 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 1200 nits ಬ್ರೈಟ್ನಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಐಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಕೂಡ ಒಳಗೊಂಡಿದೆ.

Join Nadunudi News WhatsApp Group

ಇನ್ನು ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಇದು ಇ-ಸಿಮ್ ಆಯ್ಕೆ ಕೂಡ ಒಳಗೊಂಡಿದೆ. ಇದು A15 ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದೆ. ಜೊತೆಗೆ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಹ ಒಳಗೊಂಡಿದೆ. ಹಾಗೆಯೇ ಐಫೋನ್ 14 ಫೋನ್‌ ಒಟ್ಟು ಮೂರು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅವು ಕ್ರಮವಾಗಿ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆ ಆಗಿವೆ.

Join Nadunudi News WhatsApp Group