Playoff Teams: IPL ನಲ್ಲಿ ಪ್ಲೇ ಆಫ್ ತಲುಪಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು…? RCB ಗೆ ಇದೆ ಚಾನ್ಸ್

ಯಾವ ಯಾವ ತಂಡಗಳಿಗೆ ಪ್ಲೇ ಆಫ್ ಪ್ರವೇಶಿಸಲು ಅವಕಾಶ ಇದೆ...?

IPL 2024 Playoff Teams: ಸದ್ಯ IPL 17 ನೇ ಆವೃತ್ತಿ ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಕೆರಳಿಸುತ್ತಿದೆ. ಮೇ 26 ರಂದು ಐಪಿಎಲ್ ನ ಕೊನೆಯ ಪಂದ್ಯ ನೆಡೆಯಲಿದೆ. ಸದ್ಯ ಎಲ್ಲ ತಂಡಗಳು ಸಾಕಷ್ಟು ಹೋರಾಟ ನೆಡೆಸುತ್ತಿದೆ. ಈಗಿನ ಸನ್ನಿವೇಶದಲ್ಲಿ ಬಹುತೇಕ ತಂಡಗಳಿಗೆ ಪ್ಲೇ ಆಫ್ ಪ್ರವೇಶಿಸಲು ಅವಕಾಶ ಇದೆ. ಇದೀಗ ಯಾವ ಯಾವ ತಂಡಗಳಿಗೆ ಪ್ಲೇ ಆಫ್ ಪ್ರವೇಶಿಸಲು ಅವಕಾಶ ಇದೆ ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

Kolkata Knight Riders Team
Image Credit: The Hans India

Kolkata Knight Riders Team
ಸದ್ಯ ಪಾಯಿಂಟ್ಸ್ ಟೇಬಲ್ ನಲ್ಲಿ KKR ತಂಡ ಮೊದಲಸ್ಥಾನದಲ್ಲಿದೆ. ಇಲ್ಲಿವರೆಗೆ ಆಡಿರುವ 11 ಪಂದ್ಯದಲ್ಲಿ 8 ಪಂದ್ಯದಲ್ಲಿ ಜಯ ಸಾಧಿಸಿರುವ KKR ಗೆ ಇನ್ನು 3 ಪಂದ್ಯಗಳಿವೆ. ಈ 3 ಪಂದ್ಯಗಳಲ್ಲಿ KKR ತಂಡ 2 ಪಂದ್ಯದಲ್ಲಿ ಜಯ ಸಾಧಿಸಿದರೆ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ.

Rajasthan Royals Team
Image Credit: Hindustantimes

Rajastan Royals Team
ಇಲ್ಲಿವರೆಗೆ RR ತಂಡ 10 ಪಂದ್ಯವನ್ನಾಡಿದೆ. ಇಲ್ಲಿವರೆಗೆ 8 ಪಂದ್ಯದಲ್ಲಿ ಜಯ ಸಾಧಿಸಿರುವ RR ತಂಡ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 4 ಪಂದ್ಯಗಳಲ್ಲಿ RR ತಂಡ 2 ಪಂದ್ಯದಲ್ಲಿ ಜಯ ಸಾಧಿಸಿದರೆ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ.

Chennai Super Kings Team
Image Credit: Timesnownews

Chennai Super Kings Team
ಇಲ್ಲಿವರೆಗೆ 11 ಪಂದ್ಯಗಳನ್ನಾಡಿದ CSK ತಂಡ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. 12 ಪಾಯಿಂಟ್ಸ್ ನೊಂದಿಗೆ CSK ತಂಡ ಮೂರನೇ ಸ್ಥಾನದಲ್ಲಿದೆ. ಮುಂದಿನ 3 ಪಂದ್ಯದಲ್ಲಿ ಜಯ ಸಾಧಿಸಿದರೆ ಮಾತ್ರ CSK ತಂಡ ಪ್ಲೇ ಆಫ್ ಪ್ರವೇಶಿಸಲಿದೆ.

Sunrisers Hyderabad Team
Image Credit: Sportscafe

Sunrisers Hyderabad Team
SRH ತಂಡವು ಇಲ್ಲಿವರೆಗೆ 10 ಪಂಧ್ಯವನ್ನಾಡಿ 6 ಪಂದ್ಯದಲ್ಲಿ ಜಯ ಸಾಧಿಸಿದೆ. ಇನ್ನು 4 ಪಂದ್ಯದಲ್ಲಿ SRH ತಂಡ ಗೆಲುವು ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

Lucknow Super Giants Team
Image Credit: Zapcricket

Lucknow Super Giants Team
LSG ತಂಡ 11 ಮ್ಯಾಚ್ ನಲ್ಲಿ 6 ಪಂದ್ಯ ಗೆಲುವು ಸಾಧಿಸಿದೆ. Lucknow Super Giants ತಂಡ 12 ಅಂಕಗಳನ್ನ ಪಡೆದುಕೊಂಡಿದೆ. ಉಳಿದ 3 ಮ್ಯಾಚ್ ನಲ್ಲಿ ಗೆಲುವು ಸಾಧಿಸಿದರೆ ಮಾತ್ರ LSG ತಂಡ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ.

Delhi Capitals Team
Image Credit: Hindustantimes

Delhi Capitals Team
ಸದ್ಯ Delhi Capitals ತಂಡ 11 ಪಂದ್ಯದಲ್ಲಿ ಕೇವಲ 5 ಬಾರಿ ಮಾತ್ರ ಜಯ ಸಾಧಿಸಿದೆ. DC ತಂಡ 10 ಅಂಕವನ್ನು ಪಡೆದುಕೊಂಡು 6 ನೇ ಸ್ಥಾನದಲ್ಲಿದೆ. ಇನ್ನುಳಿದ 3 ಪಂದ್ಯದಲ್ಲಿ ಜಯ ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ.

Royal Challengers Bangalore
Image Credit: Indian Express

Royal Challengers Bangalore Team
RCB ತಂಡ ಇಲ್ಲಿವರೆಗೆ 11 ಪಂದ್ಯಗಳಲ್ಲಿ 4 ಪಂದ್ಯ ಜಯ ಸಾಧಿಸಿದೆ . ಒಟ್ಟು 8 ಅಂಕವನ್ನು ಕಲೆಹಾಕಿದೆ. ಇದೀಗ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ RCB ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಉಳಿದ ತಂಡಗಳ ಫಲಿತಾಂಶವನ್ನು ನೋಡಬೇಕಾಗುತ್ತದೆ. ಅಂದರೆ ಮುಂದಿನ 3 ಪಂದ್ಯಗಳಲ್ಲೂ RCB ಜಯ ಸಾಧಿಸಬೇಕು.

Punjab Kings Team
Image Credit: Sportskeeda

Panjab Kings Team
Panjab Kings 11 ಪಂದ್ಯದಲ್ಲಿ 4 ಜಯ ಸಾಧಿಸಿದೆ. 8 ಪಾಯಿಂಟ್ ನಲ್ಲಿ Panjab Kings ತಂಡ 8 ನೇ ಸ್ಥಾನದಲ್ಲಿದೆ.

Gujrath Taitans Team
Gujrath Taitans 11 ಪಂದ್ಯದಲ್ಲಿ 4 ಜಯ ಸಾಧಿಸಿದೆ. 7 ಸೋಲುಗಳೊಂದಿಗೆ 9 ನೇ ಸ್ಥಾನದಲ್ಲಿರುವ Gujrath Taitans ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಉತ್ತಮ ನೆಟ್ ರನ್ ರೇಟ್​ನೊಂದಿಗೆ ಗೆಲ್ಲಬೇಕು.

Gujarat Titans Team
Image Credit: Winzogames

Mumbai Indian Team
ಸದ್ಯ MI ತಂಡ 11 ಮ್ಯಾಚ್ ನಲ್ಲಿ ಕೇವಲ 3 ಮ್ಯಾಚ್ ಜಯ ಸಾಧಿಸಿದೆ. ಇನ್ನು ಮೂರು ಪಂದ್ಯಗಳಲ್ಲಿ ಗೆದ್ದರೂ Mumbai Indians ತಂಡದ ಒಟ್ಟು ಪಾಯಿಂಟ್ಸ್ 12 ಆಗಲಿದೆ. ಹೀಗಾಗಿ Mumbai Indians ತಂಡ ಪ್ಲೇ ಆಫ್ ಕನಸು ಬಹುತೇಕ ಕನಸಾಗಿಯೇ ಉಳಿಯಬಹುದು.

Mumbai Indian Team
Image Credit: Sportskeeda

Join Nadunudi News WhatsApp Group