IPL Cheerleaders: ಪ್ರತಿ ಪಂದ್ಯಕ್ಕೆ ಚಿಯರ್ ಗರ್ಲ್ಸ್ ಪಡೆಯುವ ಸಂಭಾವನೆ ಎಷ್ಟು, ಯಾವ ತಂಡ ಹೆಚ್ಚಿನ ಸಂಭಾವನೆ ನೀಡುತ್ತದೆ.

ಐಪಿಎಲ್ ನಲ್ಲಿ ಯಾವ ತಂಡ ಚಿಯರ್ ಗರ್ಲ್ಸ್ ಗೆ ಹೆಚ್ಚು ಸಂಭಾವನೆ ಕೊಡುತ್ತದೆ.

IPL 2023 Cheer Girls Salary: ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅದ್ದೂರಿಯಾಗಿ ಆರಂಭಗೊಂಡಿದೆ. ಈ ಬಾರಿಯ ಕ್ರಿಕೆಟ್ ಟೂರ್ನಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕುತ್ತಿದೆ. ಕಳೆದ 3 ವರ್ಷಗಳಿಂದ ಕರೋನ ಕಾರಣದಿಂದಾಗಿ IPL ಅದ್ದೂರಿಯ ಆರಂಭಕ್ಕೆ ತಡೆ ಆಗಿತ್ತು. ಆದರೆ 3 ವರ್ಷಗಳ ಬಳಿಕ ಆರಂಭವಾದ ಈ ಬಾರಿಯ IPL ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದೆ.

Which team pays the most to cheer girls in IPL? The Kolkata team seems to be the highest paying team for cheer girls
Image Credit: mensxp

IPL ನಲ್ಲಿ ಚಿಯರ್ ಗರ್ಲ್ಸ್
ಮೈದಾನದಲ್ಲಿ ಬೌಂಡರಿ ಸಿಕ್ಸರ್ ಗಳು ಬಂದಾಗ ಅಭಿಮಾನಿಗಳು ಹೆಚ್ಚು ಸಂಭ್ರಮ ಪಡುತ್ತಾರೆ. ಈ ವೇಳೆ ಪ್ರೇಕ್ಷಕರನ್ನು ರಂಜಿಸಲು ಬಂದಿರುವ ಚಿಯರ್ ಗರ್ಲ್ಸ್ (Cheer Girls) ಗಳು ಹೆಚ್ಚು ಗಮನ ಸೆಳೆಯುತ್ತಾರೆ.

ಇನ್ನು IPL ನ ವೇಳೆ ಆಗಮಿಸಿರುವ ಚಿಯರ್ ಗರ್ಲ್ಸ್ ಪ್ರತಿ ಪಂದ್ಯಕ್ಕೆ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಹಾಗೂ ಯಾವ ತಂಡ ಚಿಯರ್ ಗರ್ಲ್ಸ್ ಗೆ ಹೆಚ್ಚಿನ ಸಂಭಾವನೆ ನೀಡುತ್ತದೆ ಚಿಯರ್ ಗರ್ಲ್ಸ್ ಗೆ ಇದರಿಂದ ಎಷ್ಟು ಲಾಭ ಸಿಗುತ್ತದೆ ಎನ್ನುದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Cheerleaders in IPL earn Rs 20,000 to 25,000 per match.
Image Credit: mensxp

ಪ್ರತಿ ಪಂದ್ಯಕ್ಕೆ ಚಿಯರ್ ಗರ್ಲ್ಸ್ ಪಡೆಯುವ ಸಂಭಾವನೆ ಎಷ್ಟು
ಐಪಿಎಲ್ ನಲ್ಲಿ ಚಿಯರ್ ಗರ್ಲ್ಸ್ ತಮ್ಮ ಅದ್ಭುತ ನ್ರತ್ಯದ ಮೂಲಕ ಲೀಗ್ ಗೆ ಮತ್ತಷ್ಟು ಮೆರಗನ್ನು ನೀಡುತ್ತಾರೆ. ಪ್ರಸ್ತುತ 16 ನೇ ಆವೃತ್ತಿಯ ಲೀಗ್ ನಲ್ಲಿ ಚಿಯರ್ ಗರ್ಲ್ಸ್ ಪ್ರತಿ ಪಂದ್ಯಕ್ಕೆ 14 ರಿಂದ 17 ಸಾವಿರ ವೇತನ ಪಡೆಯುತ್ತಾರೆ. ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿಯರ್ ಗರ್ಲ್ಸ್ ಗೆ ಹೆಚ್ಚಿನ ವೇತನವನ್ನು ನೀಡುತ್ತಾರೆ.

ಚಿಯರ್ ಗರ್ಲ್ಸ್ ಗೆ ಯಾವ ತಂಡ ಹೆಚ್ಚಿನ ಸಂಭಾವನೆ ನೀಡುತ್ತದೆ
ಚಿಯರ್ ಗರ್ಲ್ಸ್ ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ ಆಯಾ ತಂಡದ ಮೇಲೆ ಇರುತ್ತದೆ. ಕೆಲವು ತಂಡಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭಾವನೆ ನೀಡುತ್ತಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿಯರ್ ಗರ್ಲ್ಸ್ ಗೆ 20 ಸಾವಿರ ವೇತನ ನೀಡುತ್ತಾರೆ.

Join Nadunudi News WhatsApp Group

The cheerleaders of the Kolkata team get a salary of 25 thousand rupees per match
Image Credit: mensxp

ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಪ್ರತಿ ಪಂದ್ಯಕ್ಕೆ 12 ಸಾವಿರ ವೇತನವನ್ನು ನೀಡುತ್ತಾರೆ. ಇನ್ನು ಚಿಯರ್ ಗರ್ಲ್ಸ್ ಗೆ ಪ್ರತಿ ಪಂದ್ಯಕ್ಕೆ 25 ಸಾವಿರ ವೇತನ ನೀಡುವ ಮೂಲಕ ಕೆಕೆಆರ್ ತಂಡ ಅತಿ ಹೆಚ್ಚು ಸಂಭಾವನೆ ನೀಡುವ ತಂಡವಾಗಿದೆ.

Join Nadunudi News WhatsApp Group