IQOO 12 5G: ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್, OnePlus ಮತ್ತು iPhone ಗೆ ಠಕ್ಕರ್ ಕೊಡಲು ಬಂತು ಇನ್ನೊಂದು ಮೊಬೈಲ್

ಆಕರ್ಷಕ ರಿಯಾಯಿತಿಯೊಂದಿಗೆ ಖರೀದಿಸಿ IQOO 12 5G Smartphone.

IQOO 12 5G Smartphone Price In India: ಸದ್ಯ ಮಾರುಕಟ್ಟೆಯಲ್ಲಿ Smartphone ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಜನರು ಹೊಸ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಹೆಚ್ಚು ಆಸಕ್ತರಾಗಿದ್ದಾರೆ. ಸದ್ಯ ದೇಶದಲ್ಲಿ 5G ಕೃತಿ ಹಬ್ಬಿದ್ದು ಜನರು ಹೆಚ್ಚಾಗಿ 5G ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಲು ಬಯಸುತ್ತಾರೆ.

ಹೀಗಾಗಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿದೆ. ಇದೀಗ ಹೊಸ ವರ್ಷದ ಸಮಯ್ದಲ್ಲಿ ಹೊಸ 5G ಸ್ಮಾರ್ಟ್ ಫೋನ್ ಖರೀದಿಸುವ ಆಸೆಯನ್ನು ಇಟ್ಟುಕೊಂಡವರಿಗೆ IQOO ಕಂಪನಿ ಇದೀಗ ಭರ್ಜರಿಯಾಗಿ ಹೊಸ 5G ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್ ನೊಂದಿಗೆ ಈ 5G ಸ್ಮಾರ್ಟ್ ಫೋನ್ ನಿಮ್ಮ ಕೈಸೇರಲಿದೆ.

IQOO 12 5G Smartphone Price
Image Credit: 91mobiles

IQOO 12 5G Smartphone
iQOO 12 5G Smartphone ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ ಫೋನ್‌ ನಲ್ಲಿ ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಅಳವಡಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಫೀಚರ್ ಅನ್ನು ನೀಡಲಿದೆ. ಈ ಫೋನ್‌ ಉತ್ತಮ ವೇಗವನ್ನು ಪಡೆಯಲು Snapdragon 8 Gen 3 ಪ್ರೊಸೆಸರ್ ಅನ್ನು 12 ಸರಣಿಯ ಫೋನ್‌ ಗಳಲ್ಲಿ ಬಳಸಲಾಗಿದೆ. ಇದು Snapdragon 8 Gen 3 ಅನ್ನು ಬಳಸಿದ ಮೊದಲ ಫೋನ್ ಇದಾಗಿದೆ.

IQOO 12 5G ಸ್ಮಾರ್ಟ್ಫೋನ್ ನ ಬೆಲೆ ಎಷ್ಟು ಗೊತ್ತಾ..?
IQOO 12 5G Smartphone ನ 12GB 256GB ಸ್ಟೋರೇಜ್ ಆಯ್ಕೆಗೆ 52,999 ರೂ. ನಿಗದಿಪಡಿಸಲಾಗಿದೆ. ಹಾಗೆಯೆ ಎರಡನೇ ರೂಪಾಂತರವು 16GB + 512GB ಸಂಗ್ರಹದೊಂದಿಗೆ ಬರಲಿದ್ದು ಈ ಮಾದರಿಯ ಖರೀದಿಗೆ 57,999 ರೂ. ಗಳನ್ನು ಖರ್ಚು ಮಾಡಬೇಕಾಗುತ್ತದೆ. ಇನ್ನು ಡಿಸೆಂಬರ್ 13 ರಿಂದಲೇ ಫೋನ್ ನ ಮಾರಾಟ ಆರಂಭವಾಗಲಿದೆ.

IQOO 12 5G Smartphone Price In India
Image Credit: Original Source

ಆಕರ್ಷಕ ರಿಯಾಯಿತಿಯೊಂದಿಗೆ ಖರೀದಿಸಿ IQOO 12 5G Smartphone
IQOO 12 5G ಸ್ಮಾರ್ಟ್ಫೋನ್ ಖರೀದಿಗೆ ರಿಯಾಯಿತಿ ಕೊಡುಗೆಗಳು ಸಹ ಲಭ್ಯವಿದೆ. ಐಸಿಐಸಿಐ ಬ್ಯಾಂಕ್, ಎಚ್‌ ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ ಪಾವತಿಸಿದರೆ ರೂ. 3,000 ರಿಯಾಯಿತಿ ಪಡೆಯಬಹುದು.

Join Nadunudi News WhatsApp Group

ಹಾಗೆಯೆ ವಿನಿಮಯ ಬೋನಸ್ ಅನ್ನು ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀಡುವ ಮೂಲಕ ನೀವು 3,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. Vivo ಅಥವಾ iQOO ಸ್ಮಾರ್ಟ್‌ ಫೋನ್‌ ಗಳನ್ನು ವಿನಿಮಯ ಮಾಡಿಕೊಳ್ಳುವಾಗ, ನೀವು ರೂ 5 ಸಾವಿರದವರೆಗೆ ರಿಯಾಯಿತಿಯನ್ನು ಪಡೆಯಬಹುದು. OnePlus ಮತ್ತು iPhone ಮಾದರಿಗಳಿಗೆ ಕ್ಯಾಮರಾ ವಿಷಯವಾಗಿ ನೂತನ IQOO 12 5G Smartphone ನೇರ ಪೈಪೋಟಿ ನೀಡಲಿದೆ.

Join Nadunudi News WhatsApp Group