iQOO Offer: ಮೊಬೈಲ್ ಖರೀದಿಸುವವರಿಗೆ ಬಂಪರ್ ಆಫರ್, 5000 mAh ಬ್ಯಾಟರಿ ಮೊಬೈಲ್ ಮೇಲೆ 7000 ರೂ ಡಿಸ್ಕೌಂಟ್

iQOO ಈ ಮಾದರಿಯ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ.

iQOO Neo 7 Pro Smartphone Offer: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಾದ Vivo ತನ್ನ ಉಪ ಬ್ರಾಂಡ್ iQOO ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಈ ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ IQOO Z6 ಲೈಟ್ ನಿಂದ iQOO 12 ವರೆಗೆ ಎಲ್ಲ ಮಾದರಿಯ ಸ್ಮಾರ್ಟ್ ಫೋನ್ ಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಸದ್ಯ Amazon ಇದೀಗ ಗ್ರಾಹಕರಿಗಾಗಿ iQOO Quest Days Sale ಮಾರಾಟವನ್ನು ಆರಂಭಿಸಿದೆ. ಈ ಸೇಲ್ ನಲ್ಲಿ iQOO ಕಂಪನಿಯ ಸ್ಮಾರ್ಟ್ ಫೋನ್ ಗಳು ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ.

iQOO Neo 7 Pro Smartphone Offer
Image Credit: Mobiledrop

iQOO ಈ ಮಾದರಿಯ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ
iQOO Neo 7 Pro 8GB RAM ಮತ್ತು 128GB ರೂಪಾಂತರಕ್ಕೆ 34,999 ರೂ. ಮತ್ತು 12GB RAM 256GB ರೂಪಾಂತರಕ್ಕೆ 37,999 ರೂ. ನಿಗದಿಪಡಿಸಲಾಗಿತ್ತು. ಆದರೆ ಐಕ್ಯೂ ಕ್ವೆಸ್ಟ್ ಡೇಸ್ ಸೇಲ್ ನಲ್ಲಿ ಎರಡು ಐಕ್ಯೂ ನಿಯೋ 7 ಪ್ರೊ ರೂಪಾಂತರಗಳು ರೂ. 30,999 ಮತ್ತು ರೂ. 33,999 ನಲ್ಲಿ ಖರೀದಿಗೆ ಲಭ್ಯವಿದೆ.

ಅಲ್ಲದೆ, ಫ್ಲಾಟ್ ರೂ. 2,000 ರಿಯಾಯಿತಿ ಕೂಪನ್ ಅನ್ನು Amazon ವೆಬ್‌ ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಪಡೆಯಬಹುದು. ICICI ಮತ್ತು HDFC ಸೇರಿದಂತೆ ವಿವಿಧ ಬ್ಯಾಂಕ್‌ ಗಳ ಮೇಲೆ ರೂ. 1,000 ಕಾರ್ಡ್ ರಿಯಾಯಿತಿ ಲಭ್ಯವಿದೆ. ಈ ಆಫರ್ ನ ಮೂಲಕ ಸ್ಮಾರ್ಟ್‌ ಫೋನ್‌ ನ 8GB , 128GB ರೂಪಾಂತರದ ಬೆಲೆ ರೂ. 27,999 ಮತ್ತು 12GB , 256GB ರೂಪಾಂತರದ ಬೆಲೆ ರೂ. 30,999 ಆಗಲಿದೆ.

iQOO Neo 7 Pro Smartphone Price
Image Credit: Original Source

iQOO Neo 7 Pro Smartphone ವಿಶೇಷತೆ
iQOO Neo 7 Pro Smartphone 6.78-ಇಂಚಿನ FHD AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಪಂಚ್-ಹೋಲ್ ಕಟೌಟ್, ಸ್ಲಿಮ್ ಬೆಜೆಲ್‌ ಗಳು ಮತ್ತು 1300 ನಿಟ್ಸ್ ಪೀಕ್ ಬ್ರೈಟ್‌ ನೆಸ್ ಅನ್ನು ಹೊಂದಿದೆ. ಹಾಗೆಯೆ Qualcomm Snapdragon 8 Gen 1 SoC ಜೊತೆಗೆ Adreno 730 GPU ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು 50MP +8MP + 2MP ಕ್ಯಾಮರಾ ಸೆನ್ಸಾರ್ ಅನ್ನು ಹೊಂದಿದ್ದು ಮುಂಭಾಗದಲ್ಲಿ 16MP ಕ್ಯಾಮರಾವನ್ನು ನೋಡಬಹುದು. ಇದರ ಜೊತೆಗೆ 120W ವೇಗದ ಚಾರ್ಜಿನ್ಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ.

Join Nadunudi News WhatsApp Group

Join Nadunudi News WhatsApp Group