IRCTC Booking: ಸರ್ಕಾರಿ ನೌಕರರಿಗೆ ಭರ್ಜರಿ ಆಫರ್ ನೀಡಿದ IRCTC, ಪ್ಲೈಟ್ ಟಿಕೆಟ್ ನಲ್ಲಿ ವಿಶೇಷ ರಿಯಾಯಿತಿ.

ಸರ್ಕಾರೀ ನೌಕರರಿಗೆ ಫ್ಲೈಟ್ ಟಿಕೆಟ್ ನಲ್ಲಿ ಆಫರ್ ನೀಡಿದೆ IRCTC.

IRCTC Flight Ticket Offer: ಇತ್ತೀಚಿನ ದಿನಗಳಲ್ಲಿ ಕೇಂದ್ರ ನೌಕರರ ವೇತನದ ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಡಿದವು. ಸರ್ಕಾರೀ ನೌಕರರಿಗೆ ವೇತನದ ವಿಷಯವಾಗಿ ಸಾಕಷ್ಟು ಸಿಹಿ ಸುದ್ದಿಗಳು ಹರಡಿದ್ದವು. ಇದೀಗಾ ಸರಕಾರಿ ನೌಕರರಿಗೆ ಹೊಸ ಸೌಲಭ್ಯ ಸಿಗಲಿದೆ. ಸರ್ಕಾರೀ ನೌಕರರಿಗೆ ವಿಮಾನ ಟಿಕೆಟ್ (Air Ticket) ಖರೀದಿಯಲ್ಲಿ ವಿಶೇಷ ರಿಯಾಯಿತಿ ಸಿಗಲಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.

IRCTC Flight Ticket Offer
Image Source: News18

ಸರ್ಕಾರಿ ನೌಕರರಿಗೆ ಭರ್ಜರಿ ಆಫರ್ ನೀಡಿದ ಐಆರ್ ಸಿಟಿಸಿ
ಇನ್ನು ಮುಂದೆ ಸರ್ಕಾರಿ ನೌಕರರಿಗೆ ಐಆರ್ ಸಿಟಿಸಿ (IRCTC) ಏರ್ ಪ್ಲಾಟ್ ಫಾರಂ ನಲ್ಲಿ ವಿಮಾನ ಟಿಕೆಟ್ ಗಳ ಬುಕಿಂಗ್ ಸುಲಭವಾಗಲಿದೆ. https://www.irctc.co.in/ ಪೋರ್ಟಲ್ ಐಆರ್‌ಸಿಟಿಸಿ ರೈಲು ಟಿಕೆಟ್ ಬುಕಿಂಗ್‌ಗೆ ಪ್ರತ್ಯೇಕವಾಗಿದ್ದಾಗ, http://air.irctc.co.in ಪೋರ್ಟಲ್ ವಿಮಾನ ಟಿಕೆಟ್ ಬುಕಿಂಗ್‌ಗೆ ಲಭ್ಯವಿದೆ.

ಈ ಪ್ಲಾಟ್ ಫಾರ್ಮ್ ನಲ್ಲಿ ಟಿಕೆಟ್ ಅನ್ನು ಕಾಯ್ದಿರಿಸಲಿರುವ ಕೇಂದ್ರ ನೌಕರರಿಗೆ ವಿಶೇಷ ಶುಲ್ಕ ರಿಯಾಯಿತಿ ಸಿಗಲಿದೆ. ಕೇಂದ್ರ ನೌಕರರು ಎಲ್ ಟಿಸಿ ಕ್ಲೈಮ್ ಮಾಡಬಹುದು. ಎಲ್ ಟಿಸಿ ಕ್ಲೈಮ್ ಮಾಡಲು ಕೆಲವು ನಿಯಮಗಳು ಮುಖ್ಯವಾಗಿದೆ. ಇಂಡಿಯಾನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್, ಬಲ್ಮರ್ ಲಾರಿ ಮತ್ತು ಕಂಪನಿ ಲಿಮಿಟೆಡ್, ಅಶೋಕ್ ಟ್ರಾವೆಲ್ಸ್ ಮತ್ತು ಟೂರ್ಸ್ ಪ್ಲೈಟ್ ಟಿಕೆಟ್ ಬುಕಿಂಗ್ ಏಜೆಂಟ್‌ಗಳಾಗಿವೆ.

IRCTC Flight Ticket Offer
Image Source: Oneindia kannada

LTC ಮೂಲಕ ಕೇಂದ್ರ ನೌಕರರು ಟಿಕೆಟ್ ಗಳನ್ನೂ ಕಾಯ್ದಿರಿಸಬಹುದು
LTC ಮೂಲಕ ಕೇಂದ್ರ ನೌಕರರು ಟಿಕೆಟ್ ಗಳನ್ನೂ ಕಾಯ್ದಿರಿಸಬಹುದು. ಉದ್ಯೋಗಿಗಳು ತಮಗೆ ಅನ್ವಯವಾಗುವ ಪ್ರಯಾಣದ ವರ್ಗದಲ್ಲಿ ಲಭ್ಯವಿರುವ ಅತ್ಯತ್ತಮ ದರದ ವಿಮಾನವನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರಯಾಣಿಸಲು ಬಯಸುವ 21 ದಿನಗಳ ಮುಂಚೆ ಟಿಕೆಟ್ ಗಳನ್ನೂ ಕಾಯ್ದಿರಿಸಬೇಕು. https://www.air.irctc.co.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ಲೈಟ್ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು.

IRCTC Flight Ticket Offer
Image Source: News18

Join Nadunudi News WhatsApp Group

Join Nadunudi News WhatsApp Group