Refund Rule: ರೈಲು ಟಿಕೆಟ್ ಮಾಡುವವರಿಗೆ ಹೊಸ ರೂಲ್ಸ್, ಟಿಕೆಟ್ ಕ್ಯಾನ್ಸಲ್ ಮಾಡುವ ಮುನ್ನ ಬದಲಾದ ನಿಯಮ ತಿಳಿಯಿರಿ

ಇನ್ಮುಂದೆ ರದ್ದುಗೊಳಿಸಿದ ಎಲ್ಲ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ! ರೈಲ್ವೆಯ ಹೊಸ ನಿಯಮ

IRCTC Refund Rule Change: ದೇಶದಲ್ಲಿ ಈಗ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತೀಯ ರೈಲ್ವೆ ಈಗ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಭಾರತೀಯ ರೈಲ್ವೆ IRCTC ಮರುಪಾವತಿ ನಿಯಮದ ಸರಿಯಾದ ತಿಳುವಳಿಕೆ ಕೊರತೆಯಿಂದಾಗಿ ಅನೇಕ ಜನರು ಮರುಪಾವತಿಯನ್ನು ಪಡೆಯುವುದಿಲ್ಲ.

ಹೆಚ್ಚಿನವರು ಹಣವನ್ನು ಕಳೆದುಕೊಳ್ಳಬಹುದು. ವಿಶೇಷವಾಗಿ ಇ-ಟಿಕೆಟ್ ತೆಗೆದುಕೊಳ್ಳುವವರು ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇದಕ್ಕಾಗಿ ಮೊದಲು ನೀವು ಐಆರ್‌ಟಿಸಿಯ ಈ ಮರುಪಾವತಿ ಮಾಡುವ ನಿಯಮಗಳ ಬಗ್ಗೆ ತಿಳಿಯುವುದು ಮುಖ್ಯ.

IRCTC Refund Rule Change
Image Credit: Indiatvnews

IRCTC ಮರುಪಾವತಿ ಪಡೆಯುವ ಕ್ರಮ

ನೀವು ರೈಲಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಿ ನಂತರ ಕೆಲವು ಕಾರಣದಿಂದ ನಿಮಗೆ ಪ್ರಯಾಣ ಅಸಾಧ್ಯ ಅಂದಾಗ ನೀವು ಟಿಕೆಟ್ ಬುಕ್ ಮಾಡಲು ಪಾವತಿ ಮಾಡಿದ ಹಣ ಮರುಪಾವತಿ ಆಗುತ್ತದ ಎಂಬುದನ್ನು ತಿಳಿಯಲು ನಿಮ್ಮ ವಲಯ ಕಚೇರಿ ಮತ್ತು ಅಧಿಕಾರಿಯನ್ನು ಅವಲಂಬಿಸಿರುತ್ತದೆ.

ನಿಮ್ಮ ರದ್ದುಗೊಳಿಸಿದ ಟಿಕೆಟ್ ಮರುಪಾವತಿಗೆ ಅರ್ಹವಾಗಿದೆಯೇ ಎಂದು ಪರಿಶೀಲಿಸಲು ಬಹುಶಃ ನೀವು TDR ಅಥವಾ ಟಿಕೆಟ್ ಠೇವಣಿ ರಸೀದಿಯನ್ನು ಸಲ್ಲಿಸಬಹುದು. ಚಾರ್ಟ್ ಮಾಡಿದ ನಂತರ ರೈಲ್ವೆ ಟಿಕೆಟ್ ರದ್ದುಗೊಳಿಸಲು ಮತ್ತು ಮರುಪಾವತಿ ಪಡೆಯಲು TDR ಅನ್ನು ಮಾತ್ರ ಬಳಸಬಹುದು.

Join Nadunudi News WhatsApp Group

Indian Railway Latest News Update
Image Credit: inc42

ಟಿಕೆಟ್ ರದ್ದು ಮಾಡುವವರು ಆನ್‌ಲೈನ್‌ನಲ್ಲಿ TDR ಅನ್ನು ಸಲ್ಲಿಸಬೇಕಾಗುತ್ತದೆ

ರೈಲ್ವೆ ಟಿಕೆಟ್ ಚಾರ್ಟ್ ಸಿದ್ಧಪಡಿಸಿದ ನಂತರ ಟಿಕೆಟ್ ರದ್ದು ಮಾಡುವವರು ಆನ್‌ಲೈನ್‌ ನಲ್ಲಿ TDR ಅನ್ನು ಸಲ್ಲಿಸಬೇಕಾಗುತ್ತದೆ ಮತ್ತು ನೀವು ಮರುಪಾವತಿ ಪಡೆದಿದ್ದೀರಾ ಅಥವಾ ಇಲ್ಲವೇ ಟ್ರ್ಯಾಕಿಂಗ್ ಮೂಲಕವೂ ಇದನ್ನು ಅರ್ಥಮಾಡಿಕೊಳ್ಳಬಹುದು. ಆದರೂ ಮರುಪಾವತಿಗೆ ಮನವಿ TDR ಮೂಲಕ ಅರ್ಜಿ ಸಲ್ಲಿಸಿದವರಿಗೆ ಸ್ವೀಕರಿಸಬೇಕೆ ಅಥವಾ ಬೇಡವೇ ಮತ್ತು ಎಷ್ಟು ಮರುಪಾವತಿಯನ್ನು ನೀಡಲಾಗುತ್ತದೆ ಎಂಬುದನ್ನು ವಲಯ ರೈಲ್ವೇ ನಿರ್ಧರಿಸುತ್ತದೆ ಮತ್ತು IRTC ಇಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

Join Nadunudi News WhatsApp Group