Irfan Pathan: ಹಲವು ವರ್ಷಗಳ ಬಳಿಕ ಮಡದಿಯ ಮುಖ ಪರಿಚಯಿಸಿದ ಪಠಾಣ್, ಅಷ್ಟಕ್ಕೂ ಪಠಾಣ್ ಪತ್ನಿ ನಿಜಕ್ಕೂ ಯಾರು ಗೊತ್ತಾ..?

ಹಲವು ವರ್ಷಗಳ ಬಳಿಕ ಮಡದಿಯ ಮುಖ ಪರಿಚಯಿಸಿದ ಪಠಾಣ್

Irfan Pathan wife Face Reveal: ಸಾಮಾನ್ಯವಾಗಿ ಟೀಮ್ ಇಂಡಿಯಾದ ಎಲ್ಲ ಆಟಗಾರರ ಪರಿಚಯ ಎಲ್ಲರಿಗು ಇದ್ದೆ ಇರುತ್ತದೆ. ಎಲ್ಲ ಆಟಗಾರರು ಕೂಡ ತಮ್ಮ ಅತ್ಯದ್ಭುತ ಆಟದ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನು ಕ್ರಿಕೆಟ್ ಆಟಗಾರರು ತಮ್ಮ ಆಟದ ವಿಷಯದ ಜೊತೆಗೆ ಆಗಾಗ ತಮ್ಮ ವೈವಾಹಿಕ ಜೀವನದ ವಿಚಾರವಾಗಿ ಕೂಡ ಸುದ್ದಿಯಾಗಿರುತ್ತದೆ.

ಸದ್ಯ ಟೀಂ ಇಂಡಿಯಾದ ಸ್ಟಾರ್ ಆಟಗಾರ Irfan Pathan ಇದೀಗ ತಮ್ಮ ಸಂಗಾತಿಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮೊದಲ ಬಾರಿಗೆ ಇರ್ಫಾನ್ ಪಠಾಣ್ ತಮ್ಮ ಪತ್ನಿಯ ಮುಖವನ್ನ ರಿವೀಲ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Irfan Pathan wife Face Reveal
Image Credit: Bollywoodshaadis

ಹಲವು ವರ್ಷಗಳ ಬಳಿಕ ಮಡದಿಯ ಮುಖ ಪರಿಚಯಿಸಿದ ಪಠಾಣ್
ಟೀಂ ಇಂಡಿಯಾದ ಮಾಜಿ ಸ್ಟಾರ್ ಬೌಲರ್ ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಇರ್ಫಾನ್ ಪಠಾಣ್ ತನ್ನ ಪತ್ನಿ ಸಫಾ ಬೇಗ್ ಅವರೊಂದಿಗೆ ಮೊದಲ ಬಾರಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಬಾರಿಗೆ ಇರ್ಫಾನ್ ಪಠಾಣ್ ತಮ್ಮ ಪತ್ನಿಯ ಮುಖವನ್ನು ತೋರಿಸಿದ್ದಾರೆ. ಈ ಜೋಡಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಫಾ ಬೇಗ್ ಯಾರು ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಈ ನಡುವೆ ಇರ್ಫಾನ್ ಪಠಾಣ್ ಪತ್ನಿ ಬಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದೀಗ ನಾವು ಮಾಜಿ ಸ್ಟಾರ್ ಬೌಲರ್ ಇರ್ಫಾನ್ ಪಠಾಣ್ ಅವರ ಪತ್ನಿ ಯಾರೂ..? ಎನ್ನುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

Irfan Pathan And Safa Baig
Image Credit: Oneindia

ಪಠಾಣ್ ಪತ್ನಿ ನಿಜಕ್ಕೂ ಯಾರು ಗೊತ್ತಾ..?
ಇರ್ಫಾನ್ ಪಠಾಣ್ ಅವರು 2016 ರಲ್ಲಿ ಸಫಾ ಬೇಗ್ ಅವರನ್ನು ವಿವಾಹವಾದರು. ಮೂಲತಃ ಸೌದಿ ಅರೇಬಿಯಾದ ಅವರು ವೃತ್ತಿಪರ ಮಾಡೆಲ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಸಫಾ ಈ ಹಿಂದೆ ಮಾಡೆಲ್ ಮತ್ತು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರು ಗಲ್ಫ್‌ ನಲ್ಲಿ ವಿವಿಧ ಫ್ಯಾಷನ್ ನಿಯತಕಾಲಿಕೆಗಳ ಪುಟಗಳನ್ನು ಅಲಂಕರಿಸಿದ್ದಾರೆ.

Join Nadunudi News WhatsApp Group

ಇನ್ನು OPR ನಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಫಾ ಬೇಗ್ ಅವರು ತಮ್ಮ 21 ನೇ ವಯಸ್ಸಿನಲ್ಲಿ ಇರ್ಫಾನ್ ಪಠಾಣ್ ಅವರನ್ನು ವಿವಾಹವಾದರು. ಮದುವೆಗೂ ಮುನ್ನ ಸುಮಾರು ಎರಡು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ನಲ್ಲಿದ್ದರು ಎನ್ನುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಈ ದಂಪತಿ ಸಂತೋಷವಾಗಿ ತಮ್ಮ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದು, ಇವರಿಬ್ಬರಿಗೆ ಎರಡು ಗಂಡು ಮಕ್ಕಳಿದ್ದಾರೆ.

Join Nadunudi News WhatsApp Group