Deadline: ಜುಲೈ 31 ರ ಒಳಗೆ ಈ ಕೆಲಸ ಮಾಡದಿದ್ದರೆ 5000 ರೂ ದಂಡ, ಕಚೇರಿ ಮುಂದೆ ಕ್ಯೂ ನಿಂತ ಜನರು.

ಜುಲೈ31 ಈ ಕೆಲಸ ಮಾಡಲು ಕೊನೆಯ ದಿನಾಂಕ, ಮಾಡದಿದ್ದರೆ 5000 ರೂ ದಂಡ.

Penalty For ITR Filing: ಪ್ರಸ್ತುತ 2022 -23 ಹಣಕಾಸು ವರ್ಷದ ಆದಾಯ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದಾಯ ತೆರಿಗೆ ಪಾವತಿದಾರರು ಐಟಿಆರ್ (ITR) ಸಲ್ಲಿಕೆಗೆ ಕೊನೆಯ ದಿನಾಂಕ ಕೂಡ ಹತ್ತಿರವಾಗುತ್ತಿದೆ. ಐಟಿಆರ್ ಸಲ್ಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ತೆರಿಗೆದಾರರು ಹೆಚ್ಚಿನ ದಂಡವನ್ನು ಪಾವತಿಸಬೇಕುತ್ತದೆ.

ಇನ್ನು ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕ ಮುಂದೂಡಿಕೆ ಆಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman)  ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ. ಇನ್ನು ಆದಾಯ ತೆರಿಗೆ ಪಾವತಿದಾರರಿಗೆ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶ ನೀಡಲಾಗಿದೆ.

Important order for tax payers
Image Credit: Zeebiz

ತೆರಿಗೆ ಪಾವತಿದಾರರಿಗೆ ಮಹತ್ವದ ಆದೇಶ
ಐಟಿ ರಿಟರ್ನ್ ಸಲ್ಲಿಕೆಯಲ್ಲಿ ಹೊಸ ಹಣಕಾಸು ವರ್ಷದಿಂದ ಅನೇಕ ನಿಯಮಗಳು ಬದಲಾಗಿವೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಒಂದು ವರ್ಷದಲ್ಲಿ ತೆರಿಗೆ ಅನ್ವಯ ಆಗುವಂತಹ 50 ಲಕ್ಷ ಆದಾಯ ಇರುವ ಭಾರತೀಯ ಪ್ರಜೆಗಳು ಐಟಿಆರ್ 1 ಅನ್ನು ಸಲ್ಲಿಸಬೇಕು.

ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಹಳೆ ತೆರಿಗೆ ಪದ್ಧತಿ ಹಾಗು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ.

ಜುಲೈ31 ರ ಒಳಗೆ ಈ ಕೆಲಸ ಮಾಡದಿದ್ದರೆ 5000 ರೂ ದಂಡ
ವಿವಿಧ ರೀತಿಯ ಐಟಿಆರ್ ಫಾರ್ಮ್ ಗಳನ್ನೂ ಅಗತ್ಯಕ್ಕೆ ಅನುಗುಣವಾಗಿ ಸಲ್ಲಿಸಲಾಗುತ್ತದೆ. ITR -1 ಮತ್ತು ITR -4 ಅನ್ನು ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರು ಸಲ್ಲಿಸುತ್ತಾರೆ. ಐಟಿ ರಿಟರ್ನ್ ಪಾವತಿಗೆ ನೀಡಿರುವ ನಿಗದಿತ ಸಮಯದೊಳಗೆ ತೆರಿಗೆ ಪಾವತಿ ಆಗದಿದ್ದರೆ 5,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ. ನಿಗದಿತ ಸಮಯದೊಳಗೆ ಐಟಿಆರ್ ಸಲ್ಲಿಕೆ ಆಗದಿದ್ದರೆ ದಂಡದ ಮೊತ್ತ ದ್ವಿಗುಣವಾಗುತ್ತದೆ. ನಿಗದಿತ ಸಮಯದೊಳಗೆ ಐಟಿ ರಿಟರ್ನ್ ಸಲ್ಲಿಕೆ ತಡವಾದರೆ ತೆರಿಗೆ ಪಾವತಿದಾರರಿಗೆ ನೋಟಿಸ್ ನೀಡಲಾಗುತ್ತದೆ.

Join Nadunudi News WhatsApp Group

Penalty of Rs 5000 if income tax is not paid by 31st July.
Image Credit: Timesofindia

ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡುವಂತಿಲ್ಲ
ಆದಾಯ ಇಲಾಖೆಗೆ ನೀವು 2,50,0000 ರೂ. ಗಿಂತ ಹೆಚ್ಚಿನ ತೆರಿಗೆ ಪಾವತಿ ಬಾಕಿ ಇದ್ದರೆ ಆದಾಯ ಇಲಾಖೆಯು 7 ವರ್ಷದ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಇನ್ನು ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ಏಳು ರೀತಿಯ ಐಟಿಆರ್ ಫಾರ್ಮ್ ಗಳಿರುತ್ತದೆ.

ಜುಲೈ ನಂತರ ಐಟಿಆರ್ ಸಲ್ಲಿಕೆಗೆ 5000 ದಂಡವನ್ನು ಆದಾಯ ಇಲಾಖೆ ನಿಗದಿಪಡಿಸಿದೆ. ಇನ್ನು ಐಟಿಆರ್ ಸಲ್ಲಿಕೆಯ ಸಮಯದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿ ನಿಡಿದ್ದಾರೆ ಕೂಡ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

Join Nadunudi News WhatsApp Group