Andhra Pradesh: ಸರ್ಕಾರೀ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ವರ್ಷಕ್ಕೆ 15000 ರೂ ಘೋಷಣೆ, ಹೊಸ ಯೋಜನೆ ಆರಂಭ.

ಸರ್ಕಾರೀ ಶಾಲೆಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ

Andhra Pradesh Government Schools: ಸರ್ಕಾರೀ ಶಾಲೆಯಿಂದ ಅನೇಕ ಸೌಲಭ್ಯಗಳು ಮಕ್ಕಳಿಗೆ ಸಿಗುತ್ತಿದೆ. ಸರ್ಕಾರದಿಂದ ಹೊಸ ಹೊಸ ಉಚಿತ ಸೌಲಭ್ಯಗಳು ಸರ್ಕಾರೀ ಶಾಲೆಯ ಮಕ್ಕಳಿಗೆ ಲಭ್ಯವಾಗುತ್ತಿದೆ. ಸರ್ಕಾರೀ ಶಾಲೆಗಳಲ್ಲಿ ಅದೆಷ್ಟೇ ಸೌಲಭ್ಯ ಇದ್ದರು ಸಹ ಹೆಚ್ಚಿನ ಪೋಷಕರು ತಮ್ಮ ಮಕ್ಕಳ್ಳನ್ನು ಸರ್ಕಾರೀ ಶಾಲೆಗೇ ಸೇರಿಸವುದಿಲ್ಲ.

ಇಂದಿಗೂ ಸಾಕಷ್ಟು ಕಡೆಗಳಲ್ಲಿ ಸರ್ಕಾರೀ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಉಳಿದಿದೆ. ಇದೀಗ ಸರ್ಕಾರೀ ಶಾಲೆಯನ್ನು ಮತ್ತೆ ಅಭಿವೃದ್ಧಿ ಪಡಿಸಲು ಆಂಧ್ರದ ಸಿಎಂ ಹೊಸ ಯೋಜನೆಯನ್ನು ಹೊರ ತಂದಿದ್ದಾರೆ.

Good news for parents of government school children
Image Credit: Theindianwire

ಸರ್ಕಾರೀ ಶಾಲಾ ಮಕ್ಕಳ ಪೋಷಕರಿಗೆ ಸಿಹಿ ಸುದ್ದಿ
ಸಾಕಷ್ಟು ವರ್ಷಗಳಿಂದ ಸರ್ಕಾರೀ ಶಾಲೆಗಳಿಗೆ ಮಕ್ಕಳು ಬಾರದೆ ಸರ್ಕಾರೀ ಶಾಲೆಗಳು ಮುಚ್ಚುತ್ತಿವೆ. ಈ ಕಾರಣದಿಂದ ಸರ್ಕಾರೀ ಶಾಲೆಗಳಿಗೆ ಮತ್ತೆ ತೆರೆಯಲು ಆಂಧ್ರದ ಸಿಎಂ ಹೊಸ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ. ಸರ್ಕಾರೀ ಶಾಲೆಗಳಲ್ಲಿ ಓದಿದ ಮಕ್ಕಳ ಪೋಷಕರಿಗೆ ಪ್ರತಿ ವರ್ಷ 15000 ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಅಮ್ಮನ ಮಡಿಲು ಯೋಜನೆಯಡಿ ಈ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಅಮ್ಮನ ಮಡಿಲು ಯೋಜನೆ
ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಅಮ್ಮನ ಮಡಿಲು ಯೋಜನೆಯಡಿ ಹೊಸ ಸೌಲಭ್ಯ ಒದಗಿಸುವುದಾಗಿ ಹೇಳಿದ್ದಾರೆ. ಇಂದಿಗೂ ಮೂರೂ ವರ್ಷ ಸರ್ಕಾರೀ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳ ಪೋಷಕರಿಗೆ ಪ್ರತಿ ವರ್ಷ 15,000 ರೂಪಾಯಿ ನೀಡುವುದಾಗಿ ಹೇಳಿದ್ದಾರೆ.

Good news for parents of government school children
Image Credit: Thehansindia

ಇನ್ನು ಈ ಯೋಜನೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ವಯವಾಗಲಿದೆ. ಇದುವರೆಗೂ 84 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರ್ಥಿಕವಾಗಿ ಲಾಭ ಪಡೆದಿದ್ದಾರೆ. ಇತ್ತೀಚಿಗೆ ಹಲವು ಕಡೆ ಅನೇಕ ಸರ್ಕಾರೀ ಶಾಲೆಗಳು ಮುಚ್ಚಿವೆ. ಈ ಕಾರಣದಿಂದಾಗಿ ಸರ್ಕಾರೀ ಶಾಲೆಯನ್ನು ಮತ್ತೆ ತೆರೆಯಲು ಆಂಧ್ರದ ಸಿಎಂ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group