Jaggesh About Komal: ಕೋಮಲ್ 8 ವರ್ಷ ಸಿನಿಮಾದಿಂದ ದೂರ ಇರಲು ಕಾರಣ ಜಗ್ಗೇಶ್, ಸತ್ಯ ಹೇಳಿಕೊಂಡ ಜಗ್ಗೇಶ್.

ಜಗ್ಗೇಶ್ ಅವರು ಹೇಳಿದ ಮಾತಿಗೆ ನಟ ಕೋಮಲ್ ಕುಮಾರ್ ಅವರು ಎಂಟು ವರ್ಷ ಚಿತ್ರರಂಗದಿಂದ ದೂರ ಉಳಿದುಕೊಂಡರು.

Jaggesh And Komal: ಕನ್ನಡ ಚಿತ್ರರಂಗದ ಖ್ಯಾತ ನಟ ನವರಸ ನಾಯಕ ಜಗ್ಗೇಶ್ (Jaggesh) ಅವರು ಇದೀಗ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಜಗ್ಗೇಶ್ ಅವರು ಇದೀಗ ತಮ್ಮ ಸಹೋದರ ಕೋಮಲ್ ಕುಮಾರ್ (Komal Kumar) ಅವರ ಹೊಸ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಈ ವೇಳೆ ನಟ ಜಗ್ಗೇಶ್ ತಮ್ಮ ಸಹೋದರನನ್ನು ಕುರಿತು ಹೆಮ್ಮಯ ಮಾತುಗಳನ್ನಾಡಿದ್ದಾರೆ. ನಟ ಕೋಮಲ್ ಅವರು ಚಿತ್ರರಂಗದಿಂದ ದೂರ ಇರಲು ಕಾರಣ ಯಾರೆನ್ನುದರ ಬಗ್ಗೆ ಜಗ್ಗೇಶ್ ಮಾಹಿತಿ ನೀಡಿದ್ದಾರೆ.

Actor Jaggesh told why actor Komal was so far away from the film industry. Actor Jaggesh said that he kept away from the film industry after taking my word for it
Image Credit: veethi

ನಟ ಕೋಮಲ್ ಅವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಾಯಕ ನಟರಾಗಿದ್ದಾರೆ. ನಟ ಕೋಮಲ ವರು ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ಮಿಂಚಿದ್ದಾರೆ. ಜಗ್ಗೇಶ್ ಹಾಗು ಕೋಮಲ್ ಅವರ ಕಾಂಬಿನೇಷನ್ ನಲ್ಲಿ ಕೂಡ ಕೆಲವು ಸಾಕಷ್ಟು ಹಿಟ್ ಚಿತ್ರಗಳು ಮೂಡಿ ಬಂದಿದೆ. ನಟ ಕೋಮಲ್ ಅವರು ಎಂಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ದೂರ ಇದ್ದಿದ್ದರು.

Jaggesh About Komal
Image Source: India Today

ಉಂಡೆನಾಮ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಕೋಮಲ್
ಇದೀಗ ಮತ್ತೆ ಕೋಮಲ್ ಅವರು ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಉಂಡೆನಾಮ ಚಿತ್ರದ ಮೂಲಕ ನಟ ಕೋಮಲ್ ಮತ್ತೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ. ಉಂಡೆನಾಮ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಅವರು ತಮ್ಮ ಸಹೋದರ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. ಹಾಗು ಕೋಮಲ್ ಅವರು ಸಿನಿಮಾಗಳಿಂದ ದೂರ ಇರಲು ಕಾರಣವನ್ನು ತಿಳಿಸಿದ್ದಾರೆ.

Jaggesh About Komal
Image Source: Kannada Hindusthan Times

ಕೋಮಲ್ ಚಿತ್ರರಂಗದಿಂದ ದೂರ ಉಳಿಯಲು ಕಾರಣ ನಾನೇ ಎಂದ ಜಗ್ಗೇಶ್
ಕೋಮಲ್ ಅವರು ಕನ್ನಡ ಚಿತ್ರರಂಗದಿಂದ 8 ವರ್ಷಗಳ ಕಾಲ ದೂರ ಇದ್ದಿದ್ದರು. 8 ವರ್ಷಗಳಿಂದ ಕೋಮಲ್ ಅವರು ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಇದೀಗ 8 ವರ್ಷದ ಬಳಿಕ ಉಂಡೆನಾಮ ಚಿತ್ರದ ಮೂಲಕ ಚನದನವನಕ್ಕೆ ಮರಳಿದ್ದಾರೆ.

Join Nadunudi News WhatsApp Group

ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಜಗ್ಗೇಶ್, ಕೋಮಲ್ ಚಿತ್ರರಂಗದಿಂದ ದೂರ ಉಳಿಯಲು ನಾನೇ ಕಾರಣ ಎಂದಿದ್ದಾರೆ. ‘ನನ್ನಿಂದಲೇ ಕೋಮಲ್ ಇಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದ. ಬಹಳಷ್ಟು ಕಷ್ಟಪಟ್ಟು ಇಷ್ಟು ವರ್ಷ ಕಳೆದಿದ್ದಾನೆ. ಒಳ್ಳೆಯ ವ್ಯವಹಾರ ಮಾಡಿದ್ದಾನೆ’ ಎಂದು ಕೋಮಲ್ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

Jaggesh About Komal
Image Source: India Today

Join Nadunudi News WhatsApp Group