ನಟ ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನ ಮದುವೆಯಾಗಿದ್ದು ಯಾಕೆ ಗೊತ್ತಾ, ಅಷ್ಟಕ್ಕೂ ಈ ಹುಡುಗಿ ಯಾರು ನೋಡಿ.

ಖ್ಯಾತ ನಟ ಜಗ್ಗೇಶ್ ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕ್ಕೆ ತಮ್ಮ ಸೇವೆಯನ್ನ ಸಲ್ಲಿಸುತ್ತಿರುವ ನಟ ಜಗ್ಗೇಶ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆಬೇರೆ ರಾಜ್ಯದಲ್ಲಿ ಕೂಡ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಕನ್ನಡದ ಅದೆಷ್ಟೋ ಚಿತ್ರಗಳಲ್ಲಿ ನಾಯಕನಾಗಿ, ಹಾಸ್ಯ ನಾಯಕನಾಗಿ ಮತ್ತು ಖಳನಾಯಕಗಿ ನಟನೆಯನ್ನ ಮಾಡಿರುವ ನಟ ಜಗ್ಗೇಶ್ ಅವರು ಅದೆಷ್ಟೋ ಅಭಿಮಾನಿಗಳನ್ನ ಗಳಿಸಿಕೊಂಡವರಲ್ಲಿ ಒಬ್ಬರು. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಕಾಲದಲ್ಲಿ ತಮ್ಮ ಅಮೋಘವಾದ ನಟನೆಯ ಮೂಲಕ ಮನೆಮಾತಾಗಿದ್ದ ನಟ ಜಗ್ಗೇಶ್ ಅವರು ಈಗ ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋ ಗಳಲ್ಲಿ ಕೂಡ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ನಟ ಜಗ್ಗೇಶ್ ಅವರ ಕುಟುಂಬದ ವಿಷಯಕ್ಕೆ ಬರುವುದಾದರೆ, ನಟ ಜಗ್ಗೇಶ್ ಅವರಿಗೆ ಒಬ್ಬರು ಗಂಡು ಮಕ್ಕಳು ಮತ್ತು ಅದರಲ್ಲಿ ಮೊದಲ ಮಗ ಗುರುರಾಜ್. ಗುರುರಾಜ್ ಆರಂಭದಲ್ಲಿ ಚಿತ್ರಗಳಲ್ಲಿ ಕಾಣಿಸಿಕೊಂಡರು, ಆದರೆ ಚಿತ್ರರಂಗ ಅವರ ಕೈಹಿಡಿಯದ ಕಾರಣ ಅವರು ಚಿತ್ರರಂಗದಿಂದ ಹೊರಬಂದರು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ನಟ ಜಗ್ಗೇಶ್ ಅವರ ಮೊದಲ ಗುರುರಾಜ್ ಮದುವೆಯಾಗಿರುವುದು ವಿದೇಶಿ ಹುಡುಗಿಯನ್ನ. ಹಾಗಾದರೆ ಈ ವಿದೇಶಿ ಹುಡುಗಿ ಯಾರು ಮತ್ತು ನಟ ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನ ಮದುವೆಯಾಗಿದ್ದು ಯಾಕೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಸ್ನೇಹಿತರೆ ನಟ ಜಗ್ಗೇಶ್ ಮಗ ಗುರುರಾಜ್ ಮದುವೆಯಾಗಿರುವ ವಿದೇಶಿ ಹುಡುಗಿಯ ಹೆಸರು ಕೇಟಿ.

 

Jaggesh son Gururaj

ಕೇಟಿ ಮತ್ತು ಗುರುರಾಜ್ ನಡುವೆ ಸ್ನೇಹ ಉಂಟಾಗಿದ್ದು ಒಂದು ಕ್ಯಾಂಪ್ ನಲ್ಲಿ ಆಗಿದೆ. ಹೌದು ಆ ಒಂದು ದಿನ ಗುರುರಾಜ್ ಅವರು ಮುಯೇ ಥಾಯ್ ಕ್ಯಾಂಪ್ ಗೆ ಸೇರಬೇಕು ಎಂದು ಹಣ ಕಟ್ಟಲು ಅಮ್ಮನ ಜೊತೆ ಹೋದಾಗ ಕ್ರೆಡಿಟ್ ಕಾರ್ಡ್ ಕೆಲಸ ಮಾಡದೆ ಬೇರೆ ಕ್ಯಾಂಪ್ ಗೆ ಸೇರಿಕೊಳ್ಳುವ ಅವಶ್ಯಕತೆ ಬಂತು. ಇನ್ನು ಥಾಯ್ಲೆಂಡ್ ನ ಈ ಕ್ಯಾಂಪ್ ನಲ್ಲಿ ಕೇಟಿ ಮತ್ತು ಗುರುರಾಜ್ ಪರಿಚಯವಾಗಿದೆ. ಕೇಟಿ ಮೂಲತಃ ನೆದರ್ ಲ್ಯಾಂಡ್ ನವಳಾಗಿದ್ದು ಆಕೆ ಯುಕೆ ಅಲ್ಲಿ ಕೆಲಸ ಮಾಡುವ ಸಮಯದಲ್ಲಿ ಕೇಟಿಯ ತಾತಾ ಎಷ್ಟು ಕೆಲಸ ಮಾಡುತ್ತೀಯಾ ಎಂದು ಕೇಟಿಗೆ ಹೇಳಿದ ಕಾರಣ ಕೇಟಿ ಥಾಯ್ಲೆಂಡ್ ನ ಕ್ಯಾಂಪ್ ಗೆ ಬಂದಿದ್ದಳು.

Join Nadunudi News WhatsApp Group

ಕೇಟಿ ತುಂಬಾ ಪ್ರತಿಭಾನ್ವಿತ ಹುಡುಗಿಯಾಗಿದ್ದು ಮೂರು ಡಿಗ್ರಿ ಪಡೆದು ಪಿಹೆಚ್.ಡಿ ಮಾಡಿದ್ದಾರಂತೆ. ಇನ್ನು ಕ್ಯಾಂಪ್ ನಲ್ಲಿ ಇಬ್ಬರ ನಡುವೆ ಸ್ನೇಹ ಉಂಟಾಗಿ ಆ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿದೆ. ಕ್ಯಾಂಪ್ ನ ಕೊನೆಯಲ್ಲಿ ಅಮ್ಮನನ್ನ ತನ್ನ ಬಳಿ ಕರೆಸಿಕೊಂಡ ಗುರುರಾಜ್ ತನ್ನ ಪ್ರೀತಿಯ ವಿಷಯವನ್ನ ಅಮ್ಮನ ಬಳಿ ಹೇಳಿಕೊಂಡಿದ್ದಾನೆ. ಮಗನ ಪ್ರೀತಿಯ ವಿಷಯವನ್ನ ಜಗ್ಗೇಶ್ ಪತ್ನಿ ಪರಿಮಳ ಒಪ್ಪಿಕೊಂಡರು, ಆದರೆ ಜಗ್ಗೇಶ್ ಅವರು ಏನು ಉತ್ತರ ಕೊಡಲಿಲ್ಲವಂತೆ.

Jaggesh son Gururaj

ಪರಿಮಳ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಭಾವಿಸಿದ ಜಗ್ಗೇಶ್ ಅವರಿಬ್ಬರ ಬಳಿ, ನೀವಿಬ್ಬರು ಬೇರೆಬೇರೆ ದೇಶದದವರು ಮತ್ತು ಆಚಾರ ವಿಚಾರ ಬೇರೆಬೇರೆಯಾಗಿದೆ ಮತ್ತು ಇವೆಲ್ಲವನ್ನ ಮೀರಿ ಒಬ್ಬರನ್ನ ಒಬ್ಬರು ಬಿಟ್ಟುಕೊಡಬಾರದು ಅನ್ನುವ ಷರತ್ತನ್ನ ಹಾಕಿ ನಂತರ ಮದುವೆಯನ್ನ ಮಾಡಲು ಒಪ್ಪಿಗೆ ನೀಡಿದರು ಜಗ್ಗೇಶ್ ಮತ್ತು ಪತ್ನಿ ಪರಿಮಳ. ಇನ್ನು ಗುರುರಾಜ್ ಅವರನ್ನ ಮದುವೆಯಾದ ನಂತ ಕೇಟಿ ಕನ್ನಡ ಕಲಿಯುವ ಕೆಲಸವನ್ನ ಕೂಡ ಮಾಡುತ್ತಿದ್ದು ಇಬ್ಬರಿಗೂ ಮುದ್ದಾದ ಮಗು ಕೂಡ ಇದೆ. ಸ್ನೇಹಿತರೆ ಕೇಟಿ ಮತ್ತು ಗುರುರಾಜ್ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group