ಜಗ್ಗೇಶ್ ಗೆ ಶಾಕ್ ಕೊಟ್ಟ ದರ್ಶನ್ ಫ್ಯಾನ್ಸ್, ಇದರ ಬಗ್ಗೆ ದರ್ಶನ್ ಹೇಳಿದ್ದೇನು ನೋಡಿ, ನೋಡಿ ಚಿತ್ರರಂಗದ ಕದನ.

ನಾವು ಮಾಡುವ ಕೆಲವು ಚಿಕ್ಕ ತಪ್ಪುಗಳು ನಮಗೆ ನಾನಾ ರೀತಿಯ ಸಮಸ್ಯೆಯನ್ನ ಉಂಟುಮಾಡುತ್ತದೆ ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದಲ್ಲಿ ಇಂದು ದೊಡ್ಡ ಕದನ ನಡೆದಿದ್ದು ಅಭಿಮಾನಿಗಳು ಬಹಳ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಇದು ಕನ್ನಡ ಚಿತ್ರರಂಗದ ಹಾಸ್ಯ ನಟ ಮತ್ತು ಹಿರಿಯ ನಟ ಜಗ್ಗೇಶ್ ಅವರಿಗೆ ದಿಕ್ಕಾರವನ್ನ ಕೂಗಿದ್ದು ಸದ್ಯ ಈ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹೌದು ಕೆಲವು ದಿನಗಳ ಹಿಂದೆ ನವರಸ ನಾಯಕ ಜಗ್ಗೇಶ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳಿರುತ್ತಾರೆ ಎಂದು ಹೇಳಬಹುದು.

ಇನ್ನು ಆ ಆಡಿಯೋ ದರ್ಶನ್ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು ಎಂದು ಹೇಳಬಹುದು. ಇನ್ನು ಈ ಆಡಿಯೋ ಬಗ್ಗೆ ಕುದ್ದು ಜಗ್ಗೇಶ್ ಅವರೇ ಟ್ವಿಟ್ ಮಾಡಿದ್ದು ಸಮಜಾಯಿಷಿಯನ್ನ ಕೂಡ ನೀಡಿದ್ದರು ಎಂದು ಹೇಳಬಹುದು. ಬೂದಿಮುಚ್ಚಿದ ಕೆಂಡದಂತೆ ಇದ್ದ ಈ ವಿವದಕ್ಕೆ ಮತ್ತೆ ಈಗ ಕಿಡಿ ಹೊತ್ತಿಕೊಂಡಿದ್ದು ರಾಜ್ಯದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ಹೌದು ಸ್ನೇಹಿತರೆ ದರ್ಶನ್ ಅವರ ಅಭಿಮಾನಿಗಳು ಈಗ ಜಗ್ಗೇಶ್ ಅವರನ್ನ ಮುತ್ತಿಗೆ ಹಾಕಿದ್ದು ಜಗ್ಗೇಶ್ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

jaggesh statement

ಇನ್ನು ಈ ಸುದ್ದಿ ಈಗ ಸಕತ್ ವೈರಲ್ ಆಗಿದ್ದು ಜಗ್ಗೇಶ್ ಅವರು ಎಷ್ಟೇ ಹೇಳಿದರು ಬಿಡದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರು ಕ್ಷಮೆ ಕೇಳಬೇಕು ಎಂದು ಜಗ್ಗೇಶ್ ಅವರ ಎದುರು ಪಟ್ಟು ಹಿಡಿದು ಕೂತಿದ್ದರು ಎಂದು ಹೇಳಬಹುದು. ಇನ್ನು ಈಗ ಈ ವಿಷಯಕ್ಕೆ ನಟ ದರ್ಶನ್ ಅವರು ಎಂಟ್ರಿ ಕೊಟ್ಟಿದ್ದು ದರ್ಶನ್ ಅವರು ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕೆಲವು ದಿನಗಳಿಂದ ನವರಸ ನಾಯಕ ಜಗ್ಗೇಶ್ ಅವರು ಮೈಸೂರಿನಲ್ಲಿ ವಿಜಯ್ ಪ್ರಸಾದ್ ಅವರು ನಿರ್ಮಾಣ ಮಾಡುತ್ತಿರುವ ತೋತಾಪುರಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರು.

ಇಂದು ಹಠಾತ್ ಆಗಿ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರು ಇದ್ದ ಶೂಟಿಂಗ್ ಸ್ಪಾಟ್ ಗೆ ಬಂದು ಜಗ್ಗೇಶ್ ಅವರ ಮುತ್ತಿಗೆ ಹಾಕಿದರು. ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದೀರಿ ನೀವು ಕೂಡಲೇ ಕ್ಷಮೆಯನ್ನ ಕೇಳಬೇಕು ಎಂದು ಅವರು ದಿಕ್ಕಾರವನ್ನ ಕೂಗಿದ್ದಾರೆ ಮತ್ತು ನೀವು ಕ್ಷಮೆಯನ್ನ ಕೇಳದೆ ಇದ್ದರೆ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಎಚ್ಚರಿಕೆಯನ್ನ ಕೂಡ ಕೊಟ್ಟಿದ್ದಾರೆ. ಇನ್ನು ಕೆಲವು ಸಮಯ ದರ್ಶನ್ ಅಭಿಮಾನಿಗಳನ್ನ ಸಮಾಧಾನ ಮಾಡಲು ಸ್ವತಃ ಜಗ್ಗೇಶ್ ಅವರೇ ಯತ್ನಿಸಿದ್ದಾರೆ ಆದರೆ ಅದೂ ಸಾಧ್ಯವಾಗಲಿಲ್ಲ.

Join Nadunudi News WhatsApp Group

jaggesh statement

ನಾನು ಮತ್ತು ದರ್ಶನ್ ಉತ್ತಮವಾದ ಭಾಂಧವ್ಯವನ್ನ ಹೊಂದಿದ್ದೇವೆ ಮತ್ತು ನಾವು ಈಗಲೂ ಕೂಡ ಫೋನ್ ನಲ್ಲಿ ಮಾತನಾಡುತ್ತಿರುತ್ತೇವೆ ಮತ್ತು ನಮ್ಮಿಬ್ಬರ ನಡುವೆ ಇರುವ ಭಾಂಧವ್ಯವನ್ನ ಹಾಳು ಯಾರೋ ಆಡಿಯೋ ತಿರುಚಿದ್ದಾರೆ ಎಂದು ದರ್ಶನ್ ಅಭಿಮಾನಿಗಳ ಬಳಿ ಕ್ಷಮೆಯನ್ನ ಕೇಳಿ ಅವರ ಅಲ್ಲಿಂದ ಕಳುಹಿಸಿದ್ದಾರೆ ಜಗ್ಗೇಶ್ ಅವರು. ಇನ್ನು ಸದ್ಯ ಈ ಸುದ್ದಿ ದರ್ಶನ್ ಅವರ ಕಿವಿಗೆ ಬಿದ್ದಿದ್ದು ಸದ್ಯ ಅವರು ಮೌನವಾಗಿ ಉತ್ತರವನ್ನ ಕೊಟ್ಟಿದ್ದಾರೆ ಎಂದು ಹೇಳಬಹುದು. ಹೌದು ದರ್ಶನ್ ಅವರು ಇದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನ ಕೊಡಲಿಲ್ಲ ಮತ್ತು ಅಭಿಮಾನಿಗಳು ಕೂಡ ದರ್ಶನ್ ಅವರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆ ಎಂದು ಹೇಳಬಹುದು. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group