Gold Rate: ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆ ಎಷ್ಟಿದೆ..? ಹೊಸ ವರ್ಷದಂದು ಸ್ಥಿರತೆ ಕಂಡ ಚಿನ್ನದ ಬೆಲೆ.

ಹೊಸ ವರ್ಷದ ಮೊದಲ ದಿನವೇ ಸ್ಥಿರತೆ ಕಂಡ ಚಿನ್ನದ ಬೆಲೆ.

January 1st 2024 Gold Rate: ಹೊಸ ವರ್ಷ 2024 ಆರಂಭಗೊಂಡಿದ್ದು, ಜನರು 2023 ಗೆ ವಿದಾಯ ಹೇಳಿ 2024 ಸ್ವಾಗತಿಸಿದ್ದಾರೆ. 2024 ರ ಆರಂಭದಲ್ಲಿ ಜನರು ಚಿನ್ನದ ಬೆಲೆಯ ಇಳಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. 2023 ವರ್ಷದಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತ ಬಂದಿದೆ. ವಾರದ ಒಂದೆರಡು ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದನ್ನು ಕಾಣಬಹುದಾಗಿದೆ.

ಚಿನ್ನದ ಬೆಲೆ ಬಹುತೇಕ ಏರಿಕೆ ಕಾಣುತ್ತ ಗಗನಕ್ಕೇರುತ್ತಿದೆ. ವರ್ಷದ ಕೊನೆಯ ತಿಂಗಳಿನಲ್ಲಿ ಕೂಡ ಚಿನ್ನದ ಬೆಲೆ ಹೆಚ್ಚಾಗಿ ಏರಿಕೆ ಕಂಡಿದೆ. ಸದ್ಯ ಜನರು ಹೊಸ ವರ್ಷದ ಮೊದಲ ಚಿನ್ನದ ಬೆಲೆ ಯಾವ ರೀತಿ ವ್ಯತ್ಯಾಸ ಕಂಡಿರಬಹುದು ಎನ್ನುವ ಕುತೂಹಲದಲ್ಲಿರಬಹುದು. ಇದೀಗ ನಾವು ವರ್ಷದ ಮೊದಲ ದಿನ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

22 And 24 Carat Gold Rate
Image Credit: Silverrate

ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆ ಎಷ್ಟಿದೆ..?
2023 ಡಿಸೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಡಿಸೆಂಬರ್ 29 ರಂದು ಹತ್ತು ಗ್ರಾಂ ಚಿನ್ನದಲ್ಲಿ 350 ರೂ. ಇಳಿಕೆಯಾಗುವ ಮೂಲಕ 58,550 ರೂ. ಗೆ ತಲುಪಿದೆ. ಡಿಸೆಂಬರ್ 29 ರಂದು ಇಳಿಕೆ ಕಂಡ ಚಿನ್ನದ ಬೆಲೆ ಸತತ ಮೂರು ದಿನಗಳಿಂದ ಸ್ಥಿರತೆ ಕಂಡಿದೆ. ಚಿನ್ನದ ಬೆಲೆಯಲ್ಲಿ ಮೂರು ದಿನಗಳಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಕಂಡು ಬಂದಿಲ್ಲ. ಹೊಸ ವರ್ಷದ ಆರಂಭದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಹೆಚ್ಚಿತ್ತು. ಆದರೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

Gold Rate Update
Image Credit: The Economic Times

ಹೊಸ ವರ್ಷದಂದು ಸ್ಥಿರತೆ ಕಂಡ ಚಿನ್ನದ ಬೆಲೆ
•ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,855 ರೂ. ಆಗಿದ್ದು, ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,387 ರೂ. ಆಗಿದೆ.

•ಇಂದು ಎಂಟು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,840 ರೂ. ಆಗಿದ್ದು, ಎಂಟು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 51,096 ರೂ. ಆಗಿದೆ.

Join Nadunudi News WhatsApp Group

•ಇಂದು ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 58,550 ರೂ. ಆಗಿದ್ದು, ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 63,870 ರೂ. ಆಗಿದೆ.

•ಇಂದು ನೂರು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,85,500 ರೂ. ಆಗಿದ್ದು, ನೂರು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,38,700 ರೂ. ಆಗಿದೆ.

Join Nadunudi News WhatsApp Group