Actress Shruti: ನಟಿ ಶ್ರುತಿ ವಿರುದ್ಧ ದಾಖಲಾಯಿತು ದೂರು, ದೇಶದ ವಂಶ ಬೆಳೆಯಬೇಕು ಅಂದ ಶ್ರುತಿ.

ಬಿಜೆಪಿ ಪಕ್ಷದ ಪರವಾಗಿ ಭಾಷಣ ಮಾಡಿದ ನಟಿ ಶ್ರುತಿ ವಿರುದ್ಧ ದೂರು ದಾಖಲಾಗಿದೆ

Actress Shruti Politics: ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ (Shruti) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಬಿಜೆಪಿ ಪರವಾಗಿ ಭಾಷಣ ಮಾಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಗುರುವಾರ ಏಪ್ರಿಲ್ 6 ರಂದು ಹಿರೇಕೆರೂರು ಕ್ಷೇತ್ರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ನಟಿ ಶ್ರುತಿ ಭಾಷಣದ ಭರಾಟೆಯಲ್ಲಿ ಪಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಜೆಡಿಎಸ್ ಆರೋಪ ಮಾಡಿದೆ.

Actress Shruti Politics
Image Source: Kannada Prabha

ನಟಿ ಶ್ರುತಿ ವಿರುದ್ಧ ದೂರು ನೀಡಿದ ಜೆಡಿಎಸ್
ನಿಮ್ಮ ವಂಶ ಬಿಟ್ಟು ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಬೇರೆ ದೇಶದ ವಂಶ ಬೆಳೆಯಬೇಕು ಎಂದರೆ ಕಾಂಗ್ರೆಸ್ ಗೆ ಮತ ನೀಡಿ. ದೇಶದ ವಂಶ ಬೆಳೆಯಬೇಕು ಎಂದರೆ ಭಾರತೀಯ ಜನತಾ ಪಾರ್ಟಿ ಬಿಜೆಪಿ ಗೆ ಮತ ನೀಡಿ ಎಂದು ನಟಿ ಶ್ರುತಿ ಹೇಳಿದ್ದರು.

ಇದಕ್ಕೆ ಜೆಡಿಎಸ್ ನಟಿ ಶ್ರುತಿ ಪ್ರಚೋಧನಕಾರಿ ಭಾಷಣಾ ಮಾಡಿ ಮತದಾರರನ್ನು ಒಲಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಈ ಹಿನ್ನಲೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.

Actress Shruti Politics
Image Source: India Today

ರಾಜಕೀಯದಲ್ಲಿ ತೊಡಗಿಕೊಂಡ ನಟಿ ಶ್ರುತಿ
ಕನ್ನಡದ ಹಿರಿಯ ನಟಿ ಶ್ರುತಿ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಇನ್ನು ನಟಿ ಶ್ರುತಿ ಕಿರುತೆರೆ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ನಟಿ ರಾಜಕೀಯ ಕ್ಷೇತ್ರದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Join Nadunudi News WhatsApp Group

Actress Shruti Politics
Image Source: Kannada Prabha

Join Nadunudi News WhatsApp Group