Sudeep Politics: ಕಿಚ್ಚ ಸುದೀಪ್ ನಟಿಸಿದ ಯಾವುದೇ ಚಿತ್ರ ಪ್ರಸಾರ ಆಗಬಾರದು, ಸುದೀಪ್ ವಿರುದ್ಧ JDS ಪತ್ರ.

ನಟ ಕಿಚ್ಚ ಸುದೀಪ್ ಅವರು ನಟನೆ ಮಾಡಿರುವ ಯಾವುದೇ ಚಿತ್ರ ಪ್ರಸಾರ ಆಗಬಾರದು ಎಂದು ಕಿಚ್ಚನ ವಿರುದ್ಧ JDS ದೂರು ನೀಡಿದೆ.

Actor Kiccha Sudeep And JDS: ನಟ ಕಿಚ್ಚ ಸುದೀಪ್ (Kiccha Sudeep) ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತಿದ್ದಂತೆಯೇ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈಗಾಗಲೇ ನಟ ಸುದೀಪ್ ಅವರ ರಾಜಕೀಯ ಸೇರ್ಪಡೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದೆ. ನಟ ಸುದೀಪ್ ಅವರು ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. 2028 ರಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.

ಆದರೆ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಇದೀಗ ನಟ ಸುದೀಪ್ ಬಿಜೆಪಿ ಪ್ರಚಾರ ಮಾಡುವುದಾಗಿ ಹೇಳಿದ್ದು ವಿರೋಧ ಪಕ್ಷದವರು ಅವರ ಮೇಲೆ ಕಿಡಿ ಕಾರುತ್ತಿದ್ದಾರೆ.

Actor Kiccha Sudeep And JDS
Image Source: India Tv

ಸುದೀಪ್ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಜೆಡಿಎಸ್ ವಕೀಲ
ನಟ ಸುದೀಪ್ ಬಿಜೆಪಿ ಪ್ರಚಾರ ಮಾಡುವ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ವಿರುದ್ಧ ಪಕ್ಷದವರು ನಟ ಸುದೀಪ್ ಮೇಲೆ ಕಿಡಿಕಾರುತ್ತಿದ್ದಾರೆ. ಇದೀಗ ಜೆಡಿಎಸ್ ಪಕ್ಷದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸುದೀಪ್ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಾಗಿ ತಿಳಿಸಿದ್ದರಿಂದ ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಮನವಿ ಸಲ್ಲಿಸಿದ್ದಾರೆ.

Actor Kiccha Sudeep And JDS
Image Source: India Today

ವಕೀಲರು ಬರೆದ ಪತ್ರದಲ್ಲಿರುವ ಮಾಹಿತಿ
ವಕೀಲರು ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರದಲ್ಲಿ ಮತ್ತು ಟಿವಿ ಯಲ್ಲಿ ಪ್ರಸಾರವಾಗದಂತೆ ತಡೆಯಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.

Actor Kiccha Sudeep And JDS
Image Source; Public tv

ಅದೇ ರೀತಿಯಲ್ಲಿ, ಅವರು ನಡೆಸಿಕೊಡುವ ಟಿವಿ ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಹೀರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದರು.

Join Nadunudi News WhatsApp Group

Actor Kiccha Sudeep And JDS
Image Source: India Today

Join Nadunudi News WhatsApp Group