Jeetx And Efficient: ಗಣರಾಜ್ಯೋತ್ಸವಕ್ಕೆ ಈ ಎಲೆಕ್ಟ್ರಿಕ್ ಬೈಕ್ ಖರೀದಿಸುವವರಿಗೆ ಬಂಪರ್ ಆಫರ್, ಭರ್ಜರಿ 20000 ರೂ ಡಿಸ್ಕೌಂಟ್

iVOOMi ಕಂಪನಿಯ ಈ ಸ್ಕೂಟರ್ ಬೆಲೆಯಲ್ಲಿ ಭರ್ಜರಿ 20000 ಇಳಿಕೆ

JeetX & Efficient S1 2.0 EV Discount: ಭಾರತೀಯ ಆಟೋ ವಲಯದಲ್ಲಿ Ola, Ether, TVS ನಂತಹ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ Electric Scooter ಗಳನ್ನೂ ಪರಿಚಯಿಸುತ್ತಾ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಪಾರುಪತ್ಯ ಸಾಧಿಸಿವೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ iVOOMi ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಇದೀಗ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಖರೀದಿಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದೆ.

iVOOMi JeetX Electric Scooter
Image Credit: Gadgets360

Republic Day Discount
iVOOMi ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಇದೀಗ Republic Day Discount ನಲ್ಲಿ ಭರ್ಜರಿ ಆಫರ್ ಅನ್ನು ಘೋಷಣೆ ಮಾಡಿದೆ. ಇಂದಿನಿಂದ ಜನವರಿ 31 ರವರೆಗೆ ನೀವು iVOOMi ಉತ್ಪನ್ನಗಳ ಖರೀದಿಯಲ್ಲಿ ಆಫರ್ ಅನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಬೇಡಿಕೆಯಿರುವ JeetX ನಲ್ಲಿ ರೂ. 20,000 ಮತ್ತು Efficient S1 2.0 ಮೇಲೆ ರೂ. 5,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಈ ಸ್ಕೂಟರ್ ಬೆಲೆಯಲ್ಲಿ ಭರ್ಜರಿ 20,000 ಇಳಿಕೆ
JeetX ಮಾದರಿಯು ರಿಯಾಯಿತಿಯ ಬಳಿಕ ರೂ. 84,999 ರೂ. ಗಳಲ್ಲಿ ಲಭ್ಯವಿದೆ. Efficient S1 2.0 ಮಾದರಿಯು ರಿಯಾಯಿತಿಯ ಬಳಿಕ ರೂ. 82,999 ರೂ. ಗಳಲ್ಲಿ ಲಭ್ಯವಿದೆ. ನೀವು ಈ ರೂಪಬ್ಲಿಕ್ ಡೇ ಸೆಲ್ ನಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಖರೀದಿಸುವ ಮೂಲಕ ಸಾಕಷ್ಟು ಹಣವನ್ನು ಉಳಿಸಿಕೊಳ್ಳಬಹುದು. ಸ್ಕೂಟರ್ ಖರೀದಿಗೆ ಇದು ಬೆಸ್ಟ್ ಟೈಮ್ ಎನ್ನಬಹುದು. ಈ ಎರಡು ಮಾದರಿಯ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ಅನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

JeetX & Efficient S1 2.0 EV Discount
Image Credit: The Times Of India

JeetX & Efficient S1 2.0 EV
ಇನ್ನು 65 ಕಿಮೀ ವೇಗದ ವೇಗದೊಂದಿಗೆ, JeetX ಮಾದರಿಯು ಸವಾರರಿಗೆ ಪ್ರಬಲ ಆಯ್ಕೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. S1 2.0 ಮಾದರಿಯು ಪ್ರತಿ ಚಾರ್ಜ್‌ ಗೆ 110 ಕಿಮೀ ಮೈಲೇಜ್ ಹೊಂದಿದೆ ಮತ್ತು 57 ಕಿಮೀ ವೇಗವನ್ನು ಹೊಂದಿರುವುದು ವಿಶೇಷವಾಗಿದೆ. ಇನ್ನು Efficient S1 2.0 ಮಾದರಿಯು 6 ಸ್ಪೋರ್ಟಿ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.

Join Nadunudi News WhatsApp Group

Join Nadunudi News WhatsApp Group