Pension Update: ಪಿಂಚಣಿ ಹಣ ಪಡೆಯುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಹಿಸುದ್ದಿ, ಈಗ ಮನೆಯಿಂದಲೇ ಅರ್ಜಿ ಸಲ್ಲಿಸಿ.

ಸದ್ಯ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಹೊಸ ವ್ಯಸ್ಥೆಯನ್ನು ಪರಿಚಯಿಸಿದೆ.

Jeevan Pramana Patra New Facility: ಕೇಂದ್ರ ಸರ್ಕಾರ (Central Government) ವಿವಿಧ ಪಿಂಚಣಿಯ ಯೋಜನೆಯನ್ನು (Pension Scheme)  ಪರಿಚಯಿಸಿದೆ. ನಿವೃತ್ತಿಯ ನಂತರ ಆರ್ಥಿಕವಾಗಿ ಸ್ಥಿರತೆ ಕಾಣಲು ಈ ಪಿಂಚಣಿ ಯೋಜನೆಗಳು ಸಹಾಯವಾಗುತ್ತದೆ. ಈಗಾಗಲೇ ದೇಶದಲ್ಲಿ ಕೋಟ್ಯಂತರ ಜನರು ವಿವಿಧ ಪಿಂಚಣಿಯ ಯೋಜನೆಯಲ್ಲಿ ಹೂಡಿಕೆಯನ್ನು ಆರಂಭಿಸಿದ್ದಾರೆ. ಸದ್ಯ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಹೊಸ ವ್ಯಸ್ಥೆಯನ್ನು ಪರಿಚಯಿಸಿದೆ.

Pension Update
Image Credit: Zeebiz

ಪಿಂಚಣಿ ಹಣ ಪಡೆಯುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಹಿಸುದ್ದಿ
ಇನ್ನು ಕೇಂದ್ರ ಸರ್ಕಾರವು ಪಿಂಚಣಿಯ ಯೋಜನೆಯನ್ನು ಪರಿಚಯಿಸುವುದರ ಜೊತೆಗೆ ಪಿಂಚಣಿದಾರರಿಗೆ ವಿವಿಧ ಸೌಲಭ್ಯವನ್ನು ನೀಡುತ್ತದೆ. ಇನ್ನು ಪಿಂಚಣಿದಾರರು ಹೆಚ್ಚಾಗಿ ವೃದ್ಧರಿಗೆ ಲಭ್ಯವಾಗುವ ಕಾರಣ ಅವರಿಗೆ ಹೆಚ್ಚಿನ ಸೌಲಭ್ಯದ ಅಗತ್ಯ ಇರುತ್ತವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಮಹತ್ವದ ಸೇವೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ಪಿಂಚಣಿ ಹಣ ಪಡೆಯುವ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಿಹಿಸುದ್ದಿ ನೀಡಿದೆ.

ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರದ ಅಗತ್ಯತೆಗಳು
ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ನೀಡಲು ಹಾಗೂ ವ್ಯಕ್ತಿಗಳು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಪಿಂಚಣಿಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಖಾತೆಗೆ ಪಿಂಚಣಿಯನ್ನು ವಿತರಿಸಲು ಅಧಿಕಾರ ಹೊಂದಿರುವ ಸಂಸ್ಥೆಗೆ ಜೀವ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.

Jeevan Pramana Patra New Facility
Image Credit: Other Source

ಜೀವಿತ ಪ್ರಮಾಣ ಪತ್ರ ಎಂದರೇನು..?
ಜೀವಿತ ಪ್ರಮಾಣ ಪತ್ರವು ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ.

ಈ ಜೀವನ ಪ್ರಮಾಣಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ವಯಸ್ಸಾದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಜೀವಿತ ಪ್ರಮಾಣ ಪತ್ರವನ್ನು ಪಡೆಯುವುದು ಕಷ್ಟವಾಗುತ್ತಿತ್ತು. ಸದ್ಯ ಭಾರತ ಸರ್ಕಾರ ಈ ಜೀವನ ಪ್ರಮಾಣ ಪತ್ರ ಪಡೆಯುವಲ್ಲಿ ಹೊಸ ಸೌಲಭ್ಯವನ್ನು ನೀಡಿದೆ.

Join Nadunudi News WhatsApp Group

ಇನ್ನುಮುಂದೆ ಮನೆಯಿಂದಲೇ ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು
ಇದೀಗ ಕೇಂದ್ರ ಸರ್ಕಾರ ಅನಾರೋಗ್ಯ ಪೀಡಿತರಿಗೆ ಮನೆಯಲ್ಲಿಯೇ ಜೀವಿತ ಪ್ರಮಾಣ ಪಾತ್ರವನ್ನು ಪಡೆಯಲು ಅವಕಾಶ ನೀಡಿದೆ. ಪಿಂಚಣಿಗೆ ಅರ್ಹರಾದ ವ್ಯಕ್ತಿಗಳು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅಗತ್ಯವಿದ್ದಲ್ಲಿ ಬ್ಯಾಂಕ್ ಸಿಬ್ಬಂಧಿಯನ್ನೇ ಮನೆಗೆ ಕರೆಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಬ್ಯಾಂಕ್ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಳ್ಳುವ ಬದಲು ಡಿಜಿಟಲ್ ಮೂಲಕ ಪಿಂಚಣಿದಾರರು ತಮ್ಮಾ ಮುಖ ಚಹರೆಯನ್ನು ಬಳಸಿ ಜಿವಿತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Join Nadunudi News WhatsApp Group