Jio Plan: 91 ರೂ ಗೆ ಯಾವ ಕಂಪನಿಗಳು ನೀಡದ ಆಫರ್ ಕೊಟ್ಟ ಅಂಬಾನಿ, ಬೆಸ್ಟ್ ರಿಚಾರ್ಜ್

ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ ಜಿಯೋ, 91 ರೂಪಾಯಿ ರಿಚಾರ್ಜ್ ಪ್ಲಾನ್ ನೊಂದಿಗೆ ಪಡೆಯಿರಿ ಉಚಿತ ಕರೆ ಮತ್ತು ಡೇಟಾ.

Jio 91 Rs Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio)  ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಜಿಯೋದಲ್ಲಿ 100 ರೂ. ಗಿಂತಲೂ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ
ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೊದ ಅತಿ ಕಡಿಮೆ ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ ಬರೋಬ್ಬರಿ 28 ದಿನಗಳ ಮಾನ್ಯತೆಯನ್ನು ನೀಡಲಿದೆ. 100 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಜಿಯೋ ಬಳಕೆದಾರರು ಇದೀಗ 28 ದಿನಗಳ ಮಾನ್ಯತೆಯನ್ನು ಪಡೆಯಬಹುದಾಗಿದೆ.

Get free calling and data with Rs 91 recharge plan.
Image Credit: Haribhoomi

ಕೇವಲ 91 ರೂ. ಯೋಜನೆಯನ್ನು ಬಿಡುಗಡೆ ಮಾಡಿದ ಜಿಯೋ
ಜಿಯೋ ಇದೀಗ ತನ್ನ ಬಳಕೆದಾರರಿಗಾಗಿ ಕೇವಲ 91 ರೂ. ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಬಳಕೆದಾರರಿಗೆ ಈ 91 ರೂ. ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿನಿತ್ಯ ಗ್ರಾಹಕರಿಗೆ 0 .1MB ಡೇಟಾ ಲಭ್ಯವಾಗಲಿದೆ. ಇದರ ಜೊತೆಗೆ ಕಂಪನಿಯು ಹೆಚ್ಚುವರಿಯಾಗಿ 200MB ಡೇಟಾವನ್ನು ನೀಡಲಾಗುತ್ತಿದೆ.

ಜಿಯೊದ ಈ ಪ್ರಿ ಪೈಡ್ ಯೋಜನೆ ಗ್ರಾಹಕರಿಗೆ ಒಟ್ಟಾರೆ 3GB ಡೇಟಾವನ್ನು ನೀಡುತ್ತದೆ. ಜಿಯೋ ಸೇರಿದಂತೆ ಇನ್ನಿತರ ಎಲ್ಲಾ ನೆಟ್ವರ್ಕ್ ಗಳಿಗೂ ಉಚಿತ ಕರೆ ಮಾಡಬಹುದಾಗಿದೆ. ಡೇಟಾ ಹಾಗೂ ಉಚಿತ ಕರೆಯ ಜೊತೆಗೆ 50 SMS ನ ಸೌಲಭ್ಯವನ್ನು ಪಡೆಯಬಹುದಾಗಿದೆ. ಜಿಯೊದ ಈ ರಿಚಾರ್ಜ್ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗೆ ಲಭ್ಯವಾಗಲಿದೆ. ಕಡಿಮೆ ಡೇಟ್ ಬಳಕೆದಾರರಿಗೆ ಈ ಯೋಜನೆ ಉಪಯುಕ್ತವಾಗಲಿದೆ. ಬಳಕೆದಾರರು ಈ ಯೋಜನೆಯ ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.

Jio has announced a low cost recharge plan
Image Credit: Haribhoomi

ಜಿಯೊದ 209 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 209 ರೂಪಾಯಿ ರಿಚಾರ್ಜ್ 28 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 1GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೇರಿದಂತೆ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group