Jio v/s Airtel: ಜಿಯೋ, ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, 2024 ರ ಇನ್ನೊಂದು ಬಂಪರ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

ಒಂದೇ ಬೆಲೆಯಲ್ಲಿ ಎರಡು ಕಂಪನಿಗಳ ರಿಚಾರ್ಜ್ ಪ್ಲಾನ್ ಘೋಷಣೆ.

Jio And Airtel 666 Rs Plan Details: ಸದ್ಯ ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೆಟ್ವರ್ಕ್ ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲೂ Jio ಮತ್ತು Airtel ಕಂಪನಿಗಳು ಗ್ರಾಹಕರಿಗೆ 5G ಸರ್ವಿಸ್ ಅನ್ನು ನೀಡುವ ಮೂಲಕ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ ಎನ್ನಬಹುದು. ಸದ್ಯ ಈ ಎರಡು ಕಂಪನಿಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ.

Airtel 666 Rs Plan Details
Image Credit: Mysmartprice

Jio v/s Airtel
ಎರಡು ಟೆಲಿಕಾಂ ಕಂಪನಿಗಳು ವಿಭಿನ್ನ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸಿವೆ. ಇನ್ನು ಎರಡು ಟೆಲಿಕಾಂ ಕಂಪನಿಗಳು ನೀಡುವ ಒಂದೇ ಬೆಲೆಯ ರಿಚಾರ್ಜ್ ಪ್ಲಾನ್ ನಲ್ಲಿ ಲಭ್ಯವಾಗುವಂತಹ ಪ್ರಯೋಜನಗಳು ಬೇರೆ ಬೇರೆ ರೀತಿ ಇರುತ್ತದೆ. ಇದೀಗ ನಾವು ಈ ಲೇಖನದಲ್ಲಿ ಜಿಯೋ ಮತ್ತು ಏರ್ಟೆಲ್ ನೀಡುತ್ತೀರುವ ಒಂದೇ ಬೆಲೆಯ ರಿಚಾರ್ಜ್ ಪ್ಲಾನ್ ಗಳ ನಡುವಿನ ವ್ಯತ್ಯಾಸದ ಬಗ್ಗೆ ವಿವರ ತಿಳಿಯೋಣ.

ರಿಲಯನ್ಸ್ ಜಿಯೋ 666 ರಿಚಾರ್ಜ್ ಪ್ಲಾನ್ ಡಿಟೈಲ್ಸ್
•ಜಿಯೋ ಬಳಕೆದಾರರು ರೂ. 666 ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ.

•ನೀವು ಈ ಯೋಜನೆಯಲ್ಲಿ ಒಟ್ಟಾಗಿ 126GB ಡೇಟಾವನ್ನು ಪಡೆಯಬಹುದು ಮತ್ತು ಪ್ರತಿನಿತ್ಯ 1 .5GB ಡೇಟಾ ಬಳಕೆಗೆ ಲಭ್ಯವಾಗುತ್ತದೆ.

•ಇನ್ನು 84 ದಿನಗಳವರೆಗೆ ನೀವು ಉಚಿತ ಕರೆ. ದಿನಕ್ಕೆ 100 SMS ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

•ಈ ಎಲ್ಲ ಪ್ರಯೋಜನದ ಜೊತೆಗೆ Jio TV , Jio Cinema ಮತ್ತು Jio Saavan ನ ಚಂದಾದಾರಿಕೆಯನ್ನು ಪಡೆಯಬಹುದು.

Jio 666 Rs Plan Details
Image Credit: India TV News

Airtel 666 ರಿಚಾರ್ಜ್ ಪ್ಲಾನ್ ಡಿಟೈಲ್ಸ್
•Airtel ಬಳಕೆದಾರರು ರೂ. 666 ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ 77 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ. ಜಿಯೋಗೆ ಹೋಲಿಸಿದರೆ ಏರ್ಟೆಲ್ ರಿಚಾರ್ಜ್ ಪ್ಲಾನ್ ನ ಮಾನ್ಯತೆ ಕಡಿಮೆ ಇದೆ.

•ನೀವು ಈ ಯೋಜನೆಯಲ್ಲಿ ಒಟ್ಟಾಗಿ 115GB ಡೇಟಾವನ್ನು ಪಡೆಯಬಹುದು ಮತ್ತು ಪ್ರತಿನಿತ್ಯ 1 .5GB ಡೇಟಾ ಬಳಕೆಗೆ ಲಭ್ಯವಾಗುತ್ತದೆ.

•ಇನ್ನು 77 ದಿನಗಳವರೆಗೆ ನೀವು ಉಚಿತ ಕರ, ದಿನಕ್ಕೆ 100 SMS ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

•Airtel 666 ರೂ. ರಿಚಾರ್ಜ್ ಪ್ಲಾನ್ ನಿಮಗೆ Amazon Prime ನ ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group